ಆಸಿಯಾ ವರ್ಸಸ್​ ಸೌಂದರ್ಯಾ; ಗಗನ್​ ನಂತರ ಯಾರಾಗ್ತಾರೆ ಬಿಗ್​ಬಾಸ್​ ಮನೆಯ ಮುಂದಿನ ಕ್ಯಾಪ್ಟನ್..BBK13

ಆಸಿಯಾ ವರ್ಸಸ್​ ಸೌಂದರ್ಯಾ; ಗಗನ್​ ನಂತರ ಯಾರಾಗ್ತಾರೆ ಬಿಗ್​ಬಾಸ್​ ಮನೆಯ ಮುಂದಿನ ಕ್ಯಾಪ್ಟನ್..BBK13
Published on: 
  • ಕ್ಯಾಪ್ಟನ್ಸಿ ಟಾಸ್ಕ್​ ರೇಸ್​ನಲ್ಲಿ ಸೌಂದರ್ಯಾ ಮತ್ತು ಆಸಿಯಾ.

  • ಸೌಂದರ್ಯಾ ಮತ್ತು ಆಸಿಯಾ ಭಾರೀ ಪೈಪೋಟಿ.

  • ಯಾರಾಗ್ತಾರೆ ಈ ಬಿಗ್​​ಬಾಸ್ ಮನೆಯ ಮುಂದಿನ ಕ್ಯಾಪ್ಟನ್?.

Bigg Boss Kannada: ಕ್ಯಾಪ್ಟನ್ಸಿ ಟಾಸ್ಕ್​ ರೇಸ್​ನಲ್ಲಿ ಸೌಂದರ್ಯಾ ಮತ್ತು ಆಸಿಯಾ ಮುಖಾಮುಖಿಯಾಗಿದ್ದು, ತೀವ್ರ ಪೈಪೋಟಿ ನಡೆದಿದೆ. ಗಗನ್​ ನಂತ್ರ ಬಿಗ್​ಬಾಸ್ ಮನೆಯ ಮುಂದಿನ ಕ್ಯಾಪ್ಟನ್​ ಯಾರು ಎನ್ನುವ ಕುತೂಹಲವನ್ನು ಕೆರಳಿಸಿದೆ.

ಲೂಟಿಕೋರರು ಮತ್ತು ರಕ್ಷಕರು ಟಾಸ್ಕ್​ನಲ್ಲಿ ಥ್ರಿಲ್ಲಿಂಗ್​ ಆಗಿ ಲೂಟಿ ಮಾಡಿದ ತಾಂಡವ್​​, ಸೌಂದರ್ಯ ಮತ್ತು ಆಸಿಯಾ ಹಾಗೂ ಲಕ್ಷ್ಮಿ, ಸೋನಿಕಾ, ಕುಮಾರಿ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾದರು. ಕ್ಯಾಪ್ಟನ್ಸಿ ಪಟ್ಟಕ್ಕೆ ದಾರಿ ಎನ್ನುವ ಪಜಲ್​​ ಚಟುವಟಿಕೆಯಲ್ಲಿ ಆಸಿಯಾ ಮತ್ತು ಸೌಂದರ್ಯ ಭರ್ಜರಿಯಾಗಿ ಗೆದ್ದರು. ಸದ್ಯ ಗಗನ್​ ನಂತ್ರ ಮನೆಯ ಮುಂದಿನ ಕ್ಯಾಪ್ಟನ್​ ಯಾರು ಎನ್ನುವ ಕುತೂಹಲಕ್ಕೆ ತೆರೆ ಇಂದಿನ ಎಪಿಸೋಡ್​ನಲ್ಲಿ ಬೀಳಲಿದೆ.

ಬಿಗ್​ಬಾಸ್ ಕೊಟ್ಟ ಟಾಸ್ಕ್​ ಏನು?

ಕ್ಯಾಪ್ಟನ್ಸಿ ಓಟಕ್ಕಾಗಿ ಬಿಗ್​ಬಾಸ್ ಕೊಟ್ಟ ಆಟದ ನಿಯಮದ ಪ್ರಕಾರ, ಒಂದು ಕಡೆ ಫ್ರೇಮ್​ಗೆ ಕಟ್ಟಿರುವ ಹಗ್ಗವನ್ನು ಎಳೆದು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾ, 18 ಸ್ಥಾನ ಸೇರಿದಂತೆ ಒಟ್ಟು 36 ಕಡೆ ಬಿಲ್ಲೆಯನ್ನು ಒಂದರ ಮೇಲೊಂದರಂತೆ ನೇರವಾಗಿ ಜೋಡಿಸುತ್ತಾ ಹೋಗಬೇಕು. ಕೊನೆಗೆ ಮುಗಿದ ನಂತರ 1ರಿಂದ5ರವರೆಗೂ ಗಟ್ಟಿಯಾಗಿ ಎಣಿಸಬೇಕು. ಬಿಲ್ಲೆ ಬೀಳದಿದ್ದರೆ ಅವರು ಟಾಸ್ಕ್​ ಗೆದ್ದು ಮನೆಯ ಮುಂದಿನ ಕ್ಯಾಪ್ಟನ್​ ಆದಂತೆ.

ಸದ್ಯ ರಿಲೀಸ್ ಆದ ಪ್ರೋಮೋದಲ್ಲಿ ಆಸಿಯಾ ಮತ್ತು ಸೌಂದರ್ಯಾ ಇಬ್ಬರು ಸಹ ಒಟ್ಟಾಗಿ ಗಮನವಿಟ್ಟು ಬಿಲ್ಲದೆಗಳನ್ನು ಜೋಡಿಸಿದ್ದಾರೆ. ಒಬ್ಬರ ಬಿಲ್ಲೆ ಉರುಳಿದೆ. ಅದು ಯಾರದ್ದು?, ತಾಳ್ಮೆಯಿಂದ ಆಟ ಗೆದ್ದ ಸ್ಪರ್ಧಿ ಯಾರು? ಎನ್ನುವುದನ್ನು ಇಂದಿನ ಎಪಿಸೋಡ್​ನಲ್ಲಿ ನೋಡಬೇಕಾಗಿದೆ.

ಲೂಟಿಕೋರರಿಗೆ ಸಿಕ್ತು ಭಾರಿ ಮೆಚ್ಚುಗೆ

ನಾಮಿನೇಟ್ ಆಗಿ ಲೂಟಿಕೋರರ ಲಿಸ್ಟ್​ನಲ್ಲಿದ್ದ ಆಸಿಯಾ, ಸೌಂದರ್ಯಾ, ತಾಂಡವ್, ಲಕ್ಷ್ಮಿ, ಕುಮಾರಿ, ಸೋನಿಕಾ ಮನೆಯ ಮ್ಯೂಸಿಯಂನಲ್ಲಿದ್ದ ವಜ್ರ, ಮೆಡಲ್​ ಹಾಗೂ ಕಿರೀಟ ಕದ್ದು ನಕಲಿ ಇಡಬೇಕಿತ್ತು. ಇದಕ್ಕೆ ತಾಂಡವ್​ ಮತ್ತು ಸೌಂದರ್ಯ ಭಾರಿ ಮಾಸ್ಟರ್​ ಪ್ಲ್ಯಾನ್​ ಹಾಕಿಕೊಂಡಿದ್ದರು. ಅದರಂತೆ ಸಕ್ಸಸ್​ಫುಲ್​ ಆಗಿ ಕದ್ದು ಆಟ ಗೆದ್ದರು. ಅವರ ಈ ಆಟವನ್ನು ನೆಟ್ಟಿಗರು, ವೀಕ್ಷಕರು ಮೆಚ್ಚಿಕೊಂಡು ಶಹಬ್ಬಾಸ್ ಗಿರಿ ಕೊಟ್ಟರು. ಯಾವ ಥ್ರಿಲ್ಲರ್​ ಮೂವಿಗಳಿಗೂ ಕಮ್ಮಿ ಇಲ್ಲ ಎಂದಿದ್ದರು.

ಟಾಸ್ಕ್​​ ಗೆದ್ದ ಲೂಟಿಕೋರರಿಗೆ ಪಜಲ್​ ಜೋಡಿಸುವ ಟಾಸ್ಕ್ ನೀಡಲಾಯಿತು. ಕ್ಯಾಪ್ಟನ್​ ಪಟ್ಟಕ್ಕೆ ದಾರಿ ಎನ್ನುವ ಪಜಲ್​ ಅನ್ನು ಒಬ್ಬರು ಗೈಡ್​ ಮಾಡುತ್ತಾ ಮತ್ತೊಬ್ಬರು ಜೋಡಿಸುತ್ತಾ ಕಂಪ್ಲೀಟ್ ಮಾಡಬೇಕಿತ್ತು. ತಾಂಡವ್​-ಲಕ್ಷ್ಮಿ, ಸೌಂದರ್ಯಾ-ಆಸಿಯಾ, ಸೋನಿಕಾ-ಕುಮಾರಿ ಜೋಡಿಯಾದರು. ತಾಂಡವ್ ಲಕ್ಷ್ಮಿ ಕೊನೆಯ ಹಂತದಲ್ಲಿದ್ದರು, ಆದರೆ ಸೌಂದರ್ಯಾ ಆಸಿಯಾರ ತಾಳ್ಮೆ ಮತ್ತು ಕೋಆರ್ಡಿನೇಷನ್​ನಿಂದ ಕ್ಯಾಪ್ಟನ್​ ರೇಸ್​ಗೆ ಸೆಲೆಕ್ಟ್​ ಆಗಿದ್ದರು. ಸದ್ಯ ಇಬ್ಬರ ಮಧ್ಯೆ ಪೈಪೋಟಿ ಏರಿದ್ದು ಯಾರು ಕ್ಯಾಪ್ಟನ್ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net