ತಲ್ವಾರ್ ಪೇಟೆಗೆ ಬಂದಿಳಿದ ಸೀರಿಯಲ್ ಸೆಟ್ ಚಂದ್ರಪ್ಪ!

WhatsApp Image 2020-11-25 at 10.53.46 PM
Published on

ಬೆಂಗಳೂರು: ಶ್ರೀ ನಾಗಬ್ರಹ್ಮ ಕ್ರಿಯೇಷನ್ಸ್ ನಲ್ಲಿ ಡಾ. ಶೈಲೇಶ್ ಕುಮಾರ್ ನಿರ್ಮಾಣ ಮಾಡುತ್ತಿರುವ 'ತಲ್ವಾರ್ ಪೇಟೆ' ಚಿತ್ರ ಸದ್ದಿಲ್ಲದೆ ಸೆಟ್ ಏರಿದ್ದು ಬಿರುಸಿನ ಚಿತ್ರೀಕರಣ ಮಾಡಿಕೊಳ್ಳುತ್ತಿದೆ. ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವಿದ್ದು, ಇದೀಗ ಈ ಬಳಗಕ್ಕೆ ಭರ್ಜರಿ ಎಂಟ್ರಿ ಕೊಡ್ತಿದ್ದಾರೆ ನಟ ರವಿಶಂಕರ್ ಉರುಫ್ ಸೀರಿಯಲ್ ಸೆಟ್ ಚಂದ್ರಪ್ಪ!

ನಾಯಕ ನಟನಾಗಿ ವಸಿಷ್ಠ ಸಿಂಹ, ನಾಯಕಿ ಪಾತ್ರದಲ್ಲಿ ಸೋನಲ್ ಮೊಂತೆರೋ ಅವರೊಂದಿಗೆ ಈಗಾಗಲೇ ಬಹುಭಾಷಾ ನಟ ಹರೀಶ್ ಉತ್ತಮನ್, ಯಶ್ವಂತ್ ಶೆಟ್ಟಿ, ಆಶಾಲತಾ, ವೀಣಾ ಪೊನ್ನಪ್ಪ, ಲಿಂಗರಾಜ್ ಬಲವಾಡಿ, ಸುರೇಶ್ ಚಂದ್ರ, ಪ್ರದೀಪ್ ಪೂಜಾರಿ, ರಜನಿ ಕಾಂತ್, ಮನು ಮುಂತಾದವರ ನಟಿಸುತ್ತಿದ್ದಾರೆ. ನವೆಂಬರ್ 28 ರವಿಶಂಕರ್ ಅವರ ಹುಟ್ಟುಹಬ್ಬವಿದ್ದು, ಮುಂಚಿತವಾಗಿಯೇ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಬಿಡುಗಡೆ ಮಾಡಿಕೊಂಡು ಚಿತ್ರತಂಡ ಅವರಿಗೆ‌ ಶುಭಕೋರಿದೆ.

ಈ ಚಿತ್ರವನ್ನು ಸಹೋದರರಾದ ಕೆ.ಲಕ್ಷ್ಮಣ್, ಶ್ರೀರಾಮ್ ನಿರ್ದೇಶಿಸುತ್ತಿದ್ದಾರೆ. ಮಫ್ತಿ, ಉಗ್ರಂ ಚಿತ್ರಗಳಿಗೆ ಕಥೆ, ಸಂಭಾಷಣೆ ಹಾಗೂ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಕೆ.ರಾಮ್, ಶ್ರೀಲಕ್ಷ್ಮಣ್, ಜಂಟಿಯಾಗಿ ತಲ್ವಾರ್ ಪೇಟೆಗೂ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ.

ಎಂ.ಯು. ನಂದಕುಮಾರ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಡಿಫರೆಂಟ್ ಡ್ಯಾನಿ, ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ, ಮುರಳಿ, ಮೋಹನ್, ಧನು, ಗೀತ ನೃತ್ಯ ನಿರ್ದೇಶನ ಹಾಗೂ ಆರ್ಟ್ ರಘು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಜಯಂತ್ ಕಾಯ್ಕಿಣಿ ಹಾಗೂ ಕೆ.ರಾಮ್ ಶ್ರೀಲಕ್ಷ್ಮಣ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದು, ಹರ್ಷವರ್ಧನ್ ರಾಜ್ ಸಂಗೀತ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net