VIDEO| ಎರಡೇ ವರ್ಷದಲ್ಲಿ ಸೃಷ್ಟಿಯಾಯ್ತು ದಟ್ಟಾರಣ್ಯ; ಇದು ಆಮೀರ್ ಖಾನ್​ ಸಾಹಸ!

collage
Published on

ಮುಂಬೈ: ಬಾಲಿವುಡ್​ ನಟ ಆಮೀರ್ ಖಾನ್​ ಸಿನಿಮಾದ ಜತೆಗೆ ಸಾಮಾಜಿಕ ಕೆಲಸದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಜತೆಗೆ ಪರಿಸರ ಕಾಳಜಿಯ ಮೂಲಕವೂ ಅವರ ಕೆಲಸಗಳು ಮಾತನಾಡುತ್ತವೆ. ಇದೀಗ ಅವರ ಎರಡು ವರ್ಷದ ಶ್ರಮ ಫಲಕೊಟ್ಟಿದೆ. ಅಂದುಕೊಂಡಿದ್ದ ರೀತಿಯಲ್ಲಿಯೇ ಅರಣ್ಯ ತಲೆಯೆತ್ತಿ ನಿಂತಿದೆ!

ಸತಾರಾ ಜಿಲ್ಲೆಯ ನಾವಿ ಬುದ್ರುಕ್​ ಹಳ್ಳಿಯೊಂದರಲ್ಲಿ 2018ರಲ್ಲಿ ಇಂತಿಷ್ಟು ಸೀಮಿತ ಜಾಗದಲ್ಲಿ ಜಪನೀಸ್​ ಪದ್ಧತಿಯ ಪ್ರೇರಣೆಯಿಂದ ಅರಣ್ಯ ಬೆಳೆಸುವ ಕಾರ್ಯಕ್ಕೆ ಆಮೀರ್​ ಖಾನ್​ ಒಡೆತನದ ಪಾನಿ ಫೌಂಡೇಷನ್​ ಮುಂದಾಗಿತ್ತು. ಒಟ್ಟು 2000 ಬಗೆಯ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿತ್ತು. ಇದೀಗ ಆ ಜಾಗ ನುಸುಳಲೂ ಆಗದ ರೀತಿಯಲ್ಲಿ ಕಾಡಿನ ಸ್ವರೂಪ ಪಡೆದುಕೊಂಡಿದೆ.

ಅಂದಹಾಗೆ, ಕೃಷಿ ಭೂಮಿಯಲ್ಲಿಯೂ ಈ ಅಚ್ಚರಿಯ ಕಾಡು ಸೃಷ್ಟಿಯಾಗಿದ್ದು, ವಿಶೇಷ ಎಂಬಂತೆ ಈ ಕಾಡಿನಲ್ಲಿ ಬಹುತೇಕ ಔಷಧಿ ಸಸಿಗಳನ್ನೇ ಬೆಳೆಸಲಾಗಿದೆ. ಬಿದಿರು, ಅಶ್ವಗಂಧ, ಶತಾವರಿ ಸೇರಿ ಸಾಕಷ್ಟು ಗಿಡಗಳನ್ನು ಈ ಜಾಗದಲ್ಲಿ ಬೆಳೆಸಿದ್ದಾರೆ. ಇದೀಗ ಆ ಕಾಡಿನ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಆಮೀರ್ ಖಾನ್​ ಶೇರ್​ ಮಾಡಿಕೊಂಡಿದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net