ViralPhoto: ಹಣೆಗೆ ತಿಲಕವಿಟ್ಟು ಕಲಶ ಪೂಜೆ ನೆರವೇರಿಸಿದ ಅಮೀರ್ ಖಾನ್! ಮಾಜಿ ಪತ್ನಿ ಕಿರಣ್ ರಾವ್ ಭಾಗಿ

Aamir Khan
Published on

ನವದೆಹಲಿ: ನಟ ಅಮೀರ್ ಖಾನ್ ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಜತೆಗೂಡಿ ಹಿಂದೂ ಸಂಪ್ರದಾಯದಂತೆ ತಮ್ಮ ಪ್ರೊಡಕ್ಷನ್ ಕಚೇರಿಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದೀಗ ಅಮೀರ್ ಖಾನ್ ಹಣೆಗೆ ತಿಲಕವಿಟ್ಟು, ಪತ್ನಿಯೊಂದಿಗೆ ಕಲಶ ಪೂಜೆ ಮಾಡಿ ಆರತಿ ಬೆಳಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಮೀರ್ ಖಾನ್ ಪೂಜಾ ಕಾರ್ಯಕ್ರಮದಲ್ಲಿರುವ ಫೋಟೋವನ್ನು ಲಾಲ್ ಸಿಂಗ್ ಛಡ್ಡಾ ಸಿನಿಮಾ ನಿರ್ದೇಶಕ ಅದ್ವೈತ್ ಚಂದನ್ ಶೇರ್ ಮಾಡಿದ್ದಾರೆ. ಅಮೀರ್ ಪೂಜೆಯ ಸಮಯದಲ್ಲಿ ಧಾರ್ಮಿಕ ಕ್ರಿಯೆಯ ಭಾಗವಾಗಿ ಕಲಶ ಪೂಜೆ ನೆರವೇರಿಸಿದ್ದಾರೆ.

ಅಮೀರ್ ಖಾನ್ ತಮ್ಮ ಪತ್ನಿ ಕಿರಣ್ ರಾವ್ ಅವರೊಂದಿಗಿನ 15 ವರ್ಷಗಳ ದಾಂಪತ್ಯವನ್ನು ವಿಚ್ಛೇದನದ ಮೂಲಕ ಕೊನೆಗೊಳಿಸಿದ್ದರು. ಇದಾಗಿಯೂ ಇವರಿಬ್ಬರು ಆಗಾಗ ವಿವಿಧೆಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಅಮಿರ್ ಮತ್ತು ಕಿರಣ್ ಜೋಡಿ, ನಿರ್ಮಾಣ ಸಂಸ್ಥೆಯಲ್ಲಿ ನಡೆದ ಪೂಜೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net