ಅದ್ದೂರಿತನಕ್ಕೆ ಗುಡ್‌ಬೈ!...ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲಿದ್ದಾರಂತೆ ನಟ ಅಮೀರ್ ಖಾನ್.. Aamir Khan

Aamir Khan (ಚಿತ್ರ X)
Aamir Khan (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ನಟ ಅಮೀರ್ ಖಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ
  • ಗೆಳತಿ ಗೌರಿ ಸ್ಪ್ರಾಟ್ ಜೊತೆ ಮುಂಬರುವ ಜುಲೈ 5 ರಂದು ವಿವಾಹವಾಗುತ್ತಿರುವುದಾಗಿ ತಿಳಿಸಿದ ಅಮೀರ್​
  • ಯಾವುದೇ ಅದ್ದೂರಿ ತನವಿಲ್ಲದೆ, ಅತ್ಯಂತ ಸರಳ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್​ ಮದುವೆ
ಮುಂಬೈ: ಬಾಲಿವುಡ್‌ ನಟ ಅಮೀರ್ ಖಾನ್ (Aamir Khan) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆದಿದ್ದು, ತಮ್ಮ ಗೆಳತಿ ಗೌರಿ ಸ್ಪ್ರಾಟ್ ಜೊತೆ ಮುಂಬರುವ ಜುಲೈ 5 ರಂದು ವಿವಾಹವಾಗುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಯಾವುದೇ ಅದ್ದೂರಿ ತನವಿಲ್ಲದೆ, ಅತ್ಯಂತ ಸರಳ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್​ ಮದುವೆಯಾಗುವುದಾಗಿ ತಿಳಿಸಿದ್ದಾರೆ.
ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಆಮಿರ್, ನಾವಿಬ್ಬರೂ ಅದ್ದೂರಿ ಸಮಾರಂಭದ ಯೋಜನೆಯನ್ನು ಹೊಂದಿಲ್ಲ. ಬದಲಿಗೆ ಈ ಶುಭ ಸಂದರ್ಭವನ್ನು ಖಾಸಗಿಯಾಗಿ ಮತ್ತು ಸರಳ ರೀತಿಯಲ್ಲಿ ಇರಿಸಿಕೊಳ್ಳಲು ಬಯಸುತ್ತೇವೆ. ಇದು ಮನೆಯಲ್ಲೇ ನಡೆಯುವ ಸರಳ ವಿವಾಹವಾಗಿದ್ದು, ಎರಡೂ ಕುಟುಂಬಗಳು ಮತ್ತು ಆಪ್ತ ಸ್ನೇಹಿತರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಆದಾಗ್ಯೂ ಈ ಸಮಾರಂಭವನ್ನು ನಾವು ಖಾಸಗಿಯಾಗಿರಿಸಿಕೊಳ್ಳಲು ಬಯಸುತ್ತೇವೆ ಎಂದು ಖಾನ್​ ಹೇಳಿದ್ದಾರೆ.
ಕಳೆದ ವರ್ಷ ತಮ್ಮ 60ನೇ ಹುಟ್ಟುಹಬ್ಬದಂದು ಆಮಿರ್ ಖಾನ್ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮೊದಲು ಮಾಧ್ಯಮಗಳಿಗೆ ಪರಿಚಯಿಸಿದರು. ನಂತರ ಅವರಿಬ್ಬರ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿದರು. ಅಂದಿನಿಂದ, ಈ ಜೋಡಿ ಹಲವಾರು ಬಾರಿ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಆದಾಗ್ಯೂ, ಈ ಸಮಾರಂಭ ಆತ್ಮೀಯ ಸಂಬಂಧವಾಗಿರುತ್ತದೆ ಎಂದು ಆಮಿರ್ ಸ್ಪಷ್ಟಪಡಿಸಿದ್ದರೂ, ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಇತರ ಬಾಲಿವುಡ್ ಸಹೋದ್ಯೋಗಿಗಳು ಸೇರಿದಂತೆ ಚಿತ್ರರಂಗದಿಂದ ಅವರ ಕೆಲವು ಆಪ್ತರು ಖಾಸಗಿ ಆಚರಣೆಯಲ್ಲಿ ಅತಿಥಿಗಳಾಗಿರುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
ವೆರೈಟಿ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮದುವೆಯ ವದಂತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಅಮೀರ್ ಖಾನ್, ಗೌರಿ ಸ್ಪ್ರಾಟ್ ಅವರೊಂದಿಗಿನ ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. ತಾವು ಮತ್ತು ಗೌರಿ ಪರಸ್ಪರ ಅತ್ಯಂತ ಬದ್ಧತೆಯ ಹಾಗೂ ಗಂಭೀರವಾದ ಸಂಬಂಧದಲ್ಲಿದ್ದೇವೆ ಎಂದಿರುವ ಅವರು, ಇಬ್ಬರೂ ಒಟ್ಟಾಗಿ ಜೀವನದ ಮುಂದಿನ ಹೆಜ್ಜೆಯನ್ನಿಡಲು ಸಂಪೂರ್ಣ ಸಿದ್ಧರಾಗಿದ್ದೇವೆ. ಅಷ್ಟೇ ಅಲ್ಲದೆ, ನನ್ನ ಹೃದಯದ ಆಳದಲ್ಲಿ ನಾನು ಈಗಾಗಲೇ ಆಕೆಯನ್ನು ಮದುವೆಯಾಗಿದ್ದೇನೆ ಎಂದು ಹೇಳಿದ್ದರು.
ಆಮಿರ್ ಖಾನ್ ಅವರು ಎರಡು ಬಾರಿ ವಿಚ್ಛೇದನ ಪಡೆದಿದ್ದರು, ಆದರೆ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರೊಂದಿಗೆ ಉತ್ತಮ ಸಂಬಂಧವನ್ನು ಈಗಲೂ ಉಳಿಸಿಕೊಂಡಿದ್ದಾರೆ. ಅವರ ಮೊದಲ ಹೆಂಡತಿ ರೀನಾ ದತ್ತಾ ಅವರಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ನಂತರ ಅವರು ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದು, ಅವರಿಗೂ ಇಬ್ಬರು ಮಕ್ಕಳಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net