

ಚೆನ್ನೈ: ಮಹಾಮಾರಿ ಕರೊನಾಗೆ ಬಹುಭಾಷಾ ನಟಿ ಕವಿತಾ ಅವರ ಪುತ್ರ ಬಲಿಯಾಗಿದ್ದಾರೆ. ಅವರ ಗಂಡನಿಗೂ ಕರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕನ್ನಡ, ತೆಲಗು, ತಮಿಳು ಮತ್ತು ಮಲಯಾಳಂ ಸಿನಿಮಾ ನಟಿ ಕವಿತಾ ಅವರ ಮಗ ಸಂಜಯ್ ರೂಪ್ ಕೆಲ ದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಕರೊನಾ ಟೆಸ್ಟ್ ಮಾಡಿಸಿದಾಗ ವರದಿ ಪಾಸಿಟಿವ್ ಬಂದಿತ್ತು. ಹಾಗಾಗಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಇತ್ತೀಚಿಗೆ ಆರೋಗ್ಯ ಸ್ಥಿತಿ ಗಂಬೀರವಾಗಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮಂಗಳವಾರ ಕೊನೆಯುಸಿರೆಳೆದರು.
1971ರಿಂದ ಸಿನಿಮಾ ಜರ್ನಿ ಆರಂಭಿಸಿದ ನಟಿ ಕವಿತಾ, ತೆಲಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ 300ಕ್ಕೂ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.