ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ಸ್ನೇಹಿತ ದಿವಾಕರ್​ ನೀಡಿದ್ರು ವಿಶೇಷ ಉಡುಗೊರೆ...

Chandan
Published on

ಬೆಂಗಳೂರು: ಗಾಯಕ, ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಜನ್ಮದಿನದ (ಸೆ. 17) ಸಂಭ್ರಮದಲ್ಲಿದ್ದಾರೆ. ಸ್ಯಾಂಡಲ್​ವುಡ್​ನ ಸಿನಿಮಾ ಸ್ನೇಹಿತರು ಅವರ ಜನ್ಮದಿನಕ್ಕೆ ಶುಭ ಹಾರೈಸುತ್ತಿದ್ದಾರೆ. ಅದೇ ರೀತಿ ಈ ಸಲದ ಅವರ ಜನ್ಮದಿನಕ್ಕೆ ವಿಶೇಷ ಹಾಡಿನ ಉಡುಗೊರೆಯೊಂದು ಅವರನ್ನು ತಲುಪಿದೆ.

ಬಿಗ್​ಬಾಸ್​ನಲ್ಲಿ ಚಂದನ್​ ಶೆಟ್ಟಿಗೆ ಪರಿಚಯವಾಗಿದ್ದ ಕಾಮನ್​ ಮನ್​ ದಿವಾಕರ್ ಒಟ್ಟಿಗೆ ಫಿನಾಲೆ ವೇದಿಕೆ ಏರಿದ್ದರು. ಬಿಗ್ ಮನೆಯಲ್ಲಿ ಶುರುವಾದ ಅವರ ಸ್ನೇಹ ಇಂದಿಗೂ ಹಾಗೇ ಇದೆ. ಆ ಸ್ನೇಹಕ್ಕೆ ಏನಾದರೂ ನೀಡಬೇಕೆಂದು ನಿರ್ಧರಿಸಿದ ದಿವಾಕರ್​, ಚಂದನ್​ ಜನ್ಮದಿನಕ್ಕೆ ಹಾಡಿನ ಉಡುಗೊರೆ ನೀಡಿದ್ದಾರೆ.

ಗೊತ್ತಾ ಇವನು ಯಾರು... ಕರುನಾಡಿನ ಸಿಂಗರ್ರು.. ಸಾಹಿತ್ಯದಿಂದ ಶುರುವಾಗುವ ಹಾಡಿನಲ್ಲಿ ಚಂದನ್​ ಶೆಟ್ಟಿ ಅವರನ್ನು ಗುಣಗಾನ ಮಾಡಲಾಗಿದೆ. ಈ ಹಾಡನ್ನು ಸ್ವತಃ ದಿವಾಕರ್​ ಅವರೇ ನಿರ್ಮಾಣ ಮಾಡಿದ್ದು, ಹಿತನ್​ ಹಾಸನ್ ಸಾಹಿತ್ಯ ಬರೆದಿದ್ದಾರೆ. ಹರ್ಷ ಕೊಗೊಡ್​ ಸಂಗೀತ ನೀಡಿದರೆ, ಗಿರೀಶ್​ ರಾಮಾಂಜನೇಯ ಧ್ವನಿ ನೀಡಿದ್ದಾರೆ.

ದಿವಾಕರ್ ಅವರ ಈ ವಿಡಿಯೋ ಕಾಮನ್​ ಮ್ಯಾನ್​ ದಿವಾಕರ್​ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಿದ್ದು, ನೆಚ್ಚಿನ ಗಾಯಕನಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net