

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ತೆರಳಿದ್ದಾರೆ. ಮೂತ್ರಪಿಂಡ ಚಿಕಿತ್ಸೆಗೆ ಒಳಗಾಗಿದ್ದ ರಜನಿಕಾಂತ್ ಅವರು ರೆಗ್ಯುಲ್ ಚೆಕಪ್ಗಾಗಿ ಶುಕ್ರವಾರ ರಾತ್ರಿ ಚೆನ್ನೈ ವಿಮಾನ ನಿಲ್ದಾಣದಿಂದ ಅಮೆರಿಕದತ್ತ ಪ್ರಯಾಣ ಬೆಳೆಸಿದರು.
ಇವರ ಜತೆ ಪತ್ನಿ ಲತಾ ಕೂಡ ಹೋಗಿದ್ದು, ಎರಡು ವಾರ ಅಬ್ರಾಡ್ನಲ್ಲಿಯೇ ಇರಲಿದ್ದಾರೆ. ಭಾರತಕ್ಕೆ ಜು.8ರಂದು ವಾಪಸ್ ಆಗಲಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ಹೋಗುತ್ತಿರುವ ಫೋಟೋ ಮತ್ತು ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ಷೇಮವಾಗಿ ಬನ್ನಿ ಸರ್, ದೇವರು ಆರೋಗ್ಯ-ಆಯುಸ್ಸು ಕೊಡಲಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.