'ಸುಶ್​...ನನ್ನ ಹೃದಯದ ಒಂದು ಭಾಗ ನಿಮ್ಮೊಂದಿಗೇ ಹೊರಟು ಹೋಗಿದೆ'; ನಟಿಯ ದುಃಖದ ಸಾಲುಗಳು

Sushant 16 June 20
Published on

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ಆಘಾತದಿಂದ ಇನ್ನೂ ಅನೇಕರು ಹೊರಬಂದಿಲ್ಲ. ಸುಶಾಂತ್​ ಅಂತ್ಯಕ್ರಿಯೆಯಲ್ಲಿ ಬಾಲಿವುಡ್​ನ ಹಲವು ನಟ-ನಟಿಯರು ಪಾಲ್ಗೊಂಡಿದ್ದರು. ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ನೋವು ವ್ಯಕ್ತಪಡಿಸುತ್ತಿದ್ದಾರೆ.

ಇದೀಗ ಸುಶಾಂತ್ ಜತೆ 2017ರಲ್ಲಿ ರಾಬ್ತಾ ಸಿನಿಮಾದಲ್ಲಿ ನಟಿಸಿದ್ದ ನಟಿ ಕೃತಿ ಸನೋನ್​ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಸುಶಾಂತ್ ಸಿಂಗ್​ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಸೋಮವಾರ ನಡೆದ ಸುಶಾಂತ್​ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಕೃತಿ ಇಂದು ಇನ್ಸ್ಟಾಗ್ರಾಂನಲ್ಲಿ ನೋವು ತೋಡಿಕೊಂಡಿದ್ದಾರೆ. ಸುಶಾಂತ್​ಗಾಗಿ ಅವರು ಬರೆದ ಸಾಲುಗಳು ಹೀಗಿವೆ...ಇದನ್ನೂ ಓದಿ: VIDEO: ಮಹಿಳೆಯ ದುರಂತ ಸಾವು; ಮುಚ್ಚಿದ ಗಾಜಿನ ಬಾಗಿಲ ಬಳಿಯೇ ಕಾದಿತ್ತು ಮರಣ…

ಸುಶ್​..ನೀವು ತೀಕ್ಷ್ಣ ಮತಿಯುಳ್ಳವರು. ಆ ಬುದ್ಧಿವಂತಿಕೆಯೇ ನಿಮ್ಮ ಉತ್ತಮ ಸ್ನೇಹಿತನೂ ಆಗಿತ್ತು...ಅತ್ಯಂತ ಕೆಟ್ಟ ವೈರಿಯೂ ಆಗಿತ್ತು ಎಂಬುದು ನನಗೆ ಗೊತ್ತಿದೆ. ಆದರೆ ಒಂದು ಕ್ಷಣದಲ್ಲಿ ನೀವು ಬದುಕುವುದಕ್ಕಿಂತ, ಸಾಯುವುದೇ ಸುಲಭ ಎಂದು ಭಾವಿಸಿದರಲ್ಲ..ಅದರಿಂದ ನನಗೆ ತುಂಬ ನೋವಾಗಿದೆ. ಸಾಯುವಂಥ ನೋವು, ಸಮಸ್ಯೆ ನಿಮಗೆ ಏನಿತ್ತು. ಅದನ್ನು ನಾನಾದರೂ ಸರಿಪಡಿಸಬಹುದಿತ್ತು ಎಂಬ ಅಪೇಕ್ಷೆ ನನ್ನದು. ಆದರೆ ಅದು ಸಾಧ್ಯವಾಗುವುದಿಲ್ಲ. ಈಗ ನನಗೆ ಏನೇನೋ ಅನ್ನಿಸುತ್ತದೆ. ಇದನ್ನೂ ಓದಿ: 2019ರ ಜೂನ್​ 7ರಂದು ಮೇಘನಾ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್​ನ್ನು ಈ ಜೂ.7ರಂದು ಕ್ರೂರ ವಿಧಿ ನಿಜ ಮಾಡಿತು…

ನನ್ನ ಹೃದಯದ ಒಂದು ಭಾಗ ನಿಮ್ಮೊಂದಿಗೇ ಹೋಗಿದೆ. ಮತ್ತೊಂದು ಭಾಗದಲ್ಲಿ ನೀವು ಯಾವತ್ತೂ ಜೀವಂತವಾಗಿರುತ್ತೀರಿ. ನಿಮ್ಮ ಸಂತೋಷಕ್ಕಾಗಿ ಪ್ರಾರ್ಥನೆ ಮಾಡುವುದನ್ನು ನಾನೆಂದೂ ನಿಲ್ಲಿಸುವುದಿಲ್ಲ. ನಿರಂತರವಾಗಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net