

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲೊಂದಾದ ‘ನಾಗಿಣಿ 2’ ಹೊಸ ರೂಪದಲ್ಲಿ ವೀಕ್ಷಕರೆದುರಿಗೆ ಬಂದಿದೆ. ಇತ್ತೀಚೆಗಷ್ಟೇ ಈ ಧಾರಾವಾಹಿಯ ಲಾಂಚ್ ಸಹ ಅಷ್ಟೇ ವಿಶೇಷವಾಗಿತ್ತು. ಕಿರುತೆರೆ ಇತಿಹಾಸದಲ್ಲಿ ಮೊದಲ ಬಾರಿಗೆ ಚಿತ್ರಮಂದಿರದಲ್ಲಿ ‘ನಾಗಿಣಿ 2’ ಸೀರಿಯಲ್ನ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿತ್ತು.
ಮೈಸೂರು, ಶಿವಮೊಗ್ಗ, ಗದಗ ಮತ್ತು ಹಾಸನದ ಮಲ್ಟಿಪ್ಲೆಕ್ ್ಸಳಲ್ಲಿ ಆಯೋಜಿಸಲಾಗಿದ್ದ ವಿಶೇಷ ಪ್ರದರ್ಶನವನ್ನು ಜೀ ಕನ್ನಡ ವಾಹಿನಿಯ ಸ್ಪಂದನಾ ಮಹಿಳಾ ಕ್ಲಬ್ ಸದಸ್ಯರು ವೀಕ್ಷಿಸಿದರು. ಬಳಿಕ ಪ್ರೀಮಿಯರ್ ಶೋಗೆ ಆಗಮಿಸಿದ್ದ ಪ್ರತಿಯೊಬ್ಬರಿಗೂ ನಾಗಿಣಿ ಬ್ರಾ್ಯಂಡೆಡ್ ಫೋಟೋಗ್ರಾಫ್ಸ್ ಮತ್ತು ಫೋಟೋ ಫ್ರೇಮ್ ನೀಡಲಾಯಿತು. ಜತೆಗೆ ಜೀ ಕನ್ನಡ ಸ್ನಾ್ಯಕ್ ಬಾಕ್ಸ್ ಕೊಡಲಾಯಿತು.
ಹತ್ತು ಹಲವು ವಿಶೇಷಗಳನ್ನು ಹೊತ್ತು ಬರುತ್ತಿರುವ ‘ನಾಗಿಣಿ 2’ ಧಾರಾವಾಹಿಯಲ್ಲಿ ಅನೇಕ ಕೌತುಕದ ವಿಷಯಗಳಿವೆ. ಪವಿತ್ರ ಹುಣ್ಣಿಮೆ ದಿನದಂದು ನಾಗಮಣಿಯನ್ನು ಹೊರಗಿಟ್ಟು ಮೈ ಮರೆಯುವ ಹಾವುಗಳು, ನಾಗಮಣಿಯನ್ನು ಕಳೆದುಕೊಳ್ಳುವ ಸನ್ನಿವೇಶವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಅದಕ್ಕಾಗಿ ವಿಶೇಷ ಸೆಟ್ ಕೂಡ ಹಾಕಲಾಗಿದೆ. ಫೆ.17ರಿಂದ ಶುರುವಾಗಿರುವ ‘ನಾಗಿಣಿ 2’ ಧಾರಾವಾಹಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.