

ಬೆಂಗಳೂರು: ಸದ್ಯ ಎಲ್ಲೆಲ್ಲೂ ಕರೊನಾದ್ದೇ ಸುದ್ದಿ. ಟಿವಿಯಲ್ಲೂ ಕರೊನಾ, ಸಾಮಾಜಿಕ ಜಾಲತಾಣದಲ್ಲೂ ಅದರದೇ ಸದ್ದು. ಇದೀಗ ಇದೇ ಕರೊನಾ ಹಾಡಾಗಿಯೂ ಬಂದಿದೆ. ಅಂದರೆ ಕನ್ನಡದ ಸಂಗೀತ ನಿರ್ದೇಶಕರು ಕರೊನಾ ವೈರಸ್ ಬಗ್ಗೆ ಗೀತೆಗಳನ್ನು ಸಂಯೋಜಿಸಿ ಬಿಡುಗಡೆ ಮಾಡಿದ್ದಾರೆ.
ಈ ಎರಡೂ ಗೀತೆಗಳದ್ದೂ, ‘ಕರೊನಾ ರುಖೋನಾ’ ಎಂಬುದೇ ಉದ್ದೇಶ. ಹೌದು, ಖ್ಯಾತ ಚಿತ್ರಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಕರೊನಾ ಬಗೆಗಿನ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ‘ಕರೊನಾ ಕರೊನಾ ಈಗ ಎಲ್ಲೆಲ್ಲೂ ಹಬ್ಬಿದೆ ... ಹಬ್ಬೋದ ತಡೆಯೋದೇ ನಮಗೀಗ ಉಳಿದಿದೆ ...’ ಎಂಬ ಸಾಹಿತ್ಯ ಇರುವ ಹಾಡಿನಲ್ಲಿ ಈ ಸಾಂಕ್ರಾಮಿಕ ಖಾಯಿಲೆ ಹರಡುವಿಕೆ ಮತ್ತು ಅದರಿಂದ ತಪ್ಪಿಸಿಕೊಳ್ಳಲು ಏನೆಲ್ಲ ಮಾಡಬೇಕು ಎಂಬುದನ್ನು ಹೇಳಿದ್ದಾರೆ.
ಅಂದಹಾಗೆ, ಕವಿರತ್ನ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರ ವತಿಯಿಂದ 3 ನಿಮಿಷದ ಈ ಜಾಗೃತಿ ಗೀತೆಯನ್ನು ಹೊರತರಲಾಗಿದ್ದು, ಸಾಹಿತ್ಯದ ಜತಗೆ ಸಂಗೀತವನ್ನೂ ನಾಗೇಂದ್ರ ಪ್ರಸಾದ್ ಒದಗಿಸಿದ್ದಾರೆ. ಹರೀಶ್ ಉಪ್ಪಾರ ಹಾಡಿದ್ದು, ಸಮರ್ಥ್ ಹಾಡಿಗೆ ಸಾಥ್ ನೀಡಿದ್ದಾರೆ. ಇತ್ತ ಅನೂಪ್ ಸೀಳಿನ್ ಸಹ ಸ್ಟೈಲಿಶ್ ಆಗಿ ವಿಭಿನ್ನ ರೀತಿಯಲ್ಲಿ ಹಾಡೊಂದನ್ನು ಕಂಪೋಸ್ ಮಾಡಿ ಅವರೇ ಧ್ವನಿಯಾಗಿದ್ದಾರೆ.
‘ಹೇ ಗಯ್್ಸ ಸೇಫ್ಟಿ ಮಾಸ್ಕ್ ಹಾಕ್ಕೊಂಡು ಓಡಾಡಿರಿ, ಆಲ್ವೇಸ್ ಕೈಗೆ ಸಾನಿಟೈಸರ್ ಹಾಕೊಂತೀರಿ, ನೀವೆಲ್ಲಿ ಹೋದರೆ ಎಚ್ಚರ, ಮೆಂಟೇನ್ ಮಾಡಿ ಅಂತರ ...’ ಎಂದು ಸಾಲುಗಳಿದ್ದು, ಪ್ರಮೋದ್ ಮರವಂತೆ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಪ್ರಸ್ತುತ ಕರೊನಾದಿಂದ ಜನರ ಮನಸ್ಥಿತಿ ಹೇಗಾಗಿದೆ ಎಂಬುದನ್ನು ಕಾಮಿಡಿ ಮೂಲಕವೇ ಮಾರ್ವಿುಕವಾಗಿ ಹೇಳಿದ್ದಾರೆ. ‘ಮೇಡ್ ಇನ್ ಚೈನಾ ಫಸ್ಟ್ ಟೈಮ್ ಸ್ಟ್ರಾಂಗು, ಸ್ಕೂಲು ಕಾಲೇಜು ಬಂದ್, ಎಲ್ರೂ ಟಿವಿ ಮುಂದ್, ಒಂದು ಕೆಮ್ಮು ಈಗ ಕ್ರೖೆಮು ...’ ಹೀಗೆ ಪ್ರಸಕ್ತ ಸನ್ನಿವೇಶಕ್ಕೆ ಹೊಂದಿಕೆ ಆಗುವ ಎಲ್ಲವನ್ನೂ ಹಾಡಿನಲ್ಲಿ ಅಳವಡಿಸಿದ್ದಾರೆ ಪ್ರಮೋದ್. ಈ ಎರಡೂ ಹಾಡುಗಳು ಯೂಟ್ಯೂಬ್ನಲ್ಲಿ ಲಭ್ಯವಿದ್ದು, ಮೇಕಿಂಗ್ ವಿಡಿಯೋದಲ್ಲಿ ಮಾಸ್ಕ್ ಹಾಕಿಕೊಂಡೇ ಅನೂಪ್ ಹಾಡಿರುವುದು ವಿಶೇಷ.