ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ... ವೈಯಕ್ತಿಕ ಜೀವನದ ಕಹಿ ಘಟನೆ ಬಿಚ್ಚಿಟ್ಟ ಖ್ಯಾತ ನಟ! Bollywood Actor

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ... ವೈಯಕ್ತಿಕ ಜೀವನದ ಕಹಿ ಘಟನೆ ಬಿಚ್ಚಿಟ್ಟ ಖ್ಯಾತ ನಟ! Bollywood Actor
ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ... ವೈಯಕ್ತಿಕ ಜೀವನದ ಕಹಿ ಘಟನೆ ಬಿಚ್ಚಿಟ್ಟ ಖ್ಯಾತ ನಟ! Bollywood Actor
Published on
ಮುಂಬೈ: ಬಾಲಿವುಡ್‌ನ ಖ್ಯಾತ ನಟ ( Bollywood Actor ) ಅಕ್ಷಯ್ ಒಬೆರಾಯ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕುತೂಹಲಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಅದೇನೆಂದರೆ, ಒಂದು ದಿನ ಶೂಟಿಂಗ್ ಮುಗಿಸಿ ಮನೆಗೆ ಮರಳಿದಾಗ ಅವರ ಪತ್ನಿ ಒಂದೇ ರೂಮ್ ಹಂಚಿಕೊಳ್ಳಲು ನಿರಾಕರಿಸಿದ ಘಟನೆಯನ್ನು ಅಕ್ಷಯ್​ ನೆನಪಿಸಿಕೊಂಡಿದ್ದಾರೆ.
ಅಕ್ಷಯ್​ ಅವರು ಬಾದ್​ಷಾ ಶಾರುಖ್​ ಖಾನ್​ ನಟನೆಯ 'ಕಿಂಗ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಅವರು ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರೊಂದಿಗೆ 'ಫ್ಲೆಶ್' (2020) ವೆಬ್ ಸರಣಿ ಹಾಗೂ ಸೂಪರ್ ಹಿಟ್ 'ಫೈಟರ್' (2024) ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 'ಫ್ಲೆಶ್' ಸರಣಿಯು ಅತ್ಯಂತ ಮನರಂಜನಾತ್ಮಕವಾಗಿದ್ದರೂ, ಅದರಲ್ಲಿನ ಕೆಲವು ಅಶ್ಲೀಲ ದೃಶ್ಯಗಳು ವೀಕ್ಷಿಸಲು ಮುಜುಗರ ತರಿಸುವಂತಿದ್ದವು.
ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಅಕ್ಷಯ್, ಫ್ಲೆಶ್​ ಸರಣಿಯನ್ನು ನೋಡಿದ ನಂತರ ನನ್ನ ಪತ್ನಿ ಹಲವಾರು ವಾರಗಳ ಕಾಲ ನನ್ನೊಂದಿಗೆ ಒಂದೇ ಬೆಡ್‌ನಲ್ಲಿ ಮಲಗಲು ಸಹ ಸಿದ್ಧರಿರಲಿಲ್ಲ, ಆ ಸರಣಿಯು ನಿಜಕ್ಕೂ ನೋಡಲು ಕಷ್ಟವಾಗುವಂತಿದ್ದರೂ, ತುಂಬ ಚೆನ್ನಾಗಿ ಮೂಡಿಬಂದಿತ್ತು ಮತ್ತು ಅದೇ ಸಮಯದಲ್ಲಿ ಅದರ ನಿರ್ಮಾಪಕರು ನನ್ನೊಂದಿಗೆ ಮತ್ತೊಮ್ಮೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಸಾಮಾನ್ಯವಾಗಿ ಜನರು ಕೇವಲ ಮಾತನಾಡುತ್ತಾರೆ, ಆದರೆ ಕೊಟ್ಟ ಮಾತನ್ನು ಯಾರೂ ಉಳಿಸಿಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟ ನಟ ಅಕ್ಷಯ್ ಒಬೆರಾಯ್, ನಿರ್ಮಾಪಕರು ತಮ್ಮ ಮಾತನ್ನು ಉಳಿಸಿಕೊಂಡು ತಮಗೆ 'ಫೈಟರ್' ಚಿತ್ರದಲ್ಲಿ ಅವಕಾಶ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. 'ಫೈಟರ್' ಚಿತ್ರದ ದೇಶಪ್ರೇಮಿ, ಮುಗ್ಧ ಹಾಗೂ ಶ್ರಮಜೀವಿ ಯುವ ಅಧಿಕಾರಿಯಾದ ಬಶೀರ್ ಖಾನ್ (ಬ್ಯಾಶ್) ಪಾತ್ರವು, ಇದಕ್ಕೂ ಮುನ್ನ ತಾವು ನಟಿಸಿದ್ದ 'ಫ್ಲೆಶ್' ಸರಣಿಯ ಪಾತ್ರಕ್ಕೆ ತದ್ವಿರುದ್ಧವಾಗಿತ್ತು ಎಂದು ಅಕ್ಷಯ್​ ಅವರು ತಿಳಿಸಿದ್ದಾರೆ.
ಪ್ರಸ್ತುತ ಹಿಂದಿ ಚಿತ್ರರಂಗದಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರವಾಗಿ ಮೂಡಿಬರುತ್ತಿರುವ 'ಕಿಂಗ್' ಸಿನಿಮಾಗೆ ತಮ್ಮನ್ನು ಆಯ್ಕೆ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ ಎಂದು ಅಕ್ಷಯ್ ಹೇಳಿದ್ದಾರೆ. ಈ ಚಿತ್ರದ ಭಾಗವಾಗಿರುವ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮತ್ತು ಕಿಂಗ್ ಖಾನ್ ಶಾರುಖ್ ಖಾನ್ ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧಕರು ಎಂದು ಅವರು ಪ್ರಶಂಸಿಸಿದ್ದಾರೆ.
ನಿರ್ಮಾಪಕಿ ಮಮತಾ ಆನಂದ್ ಅವರು ತಮಗೆ ಕರೆ ಮಾಡಿದಾಗ, ಅವರು ಏನನ್ನೂ ಹೇಳುವ ಮುನ್ನವೇ "ನಾನು ಎಲ್ಲಿಗೆ ಬರಬೇಕು ಎಂದು ಮಾತ್ರ ಹೇಳಿ?" ಎಂದು ತಾವು ಉತ್ತರಿಸಿದ್ದಾಗಿ ಅಕ್ಷಯ್ ಬಹಿರಂಗಪಡಿಸಿದ್ದಾರೆ. ನಾನು ಮಮತಾ ಅವರಿಗೆ ಎಂದಿಗೂ ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ, ಚಿತ್ರದಲ್ಲಿನ ಪಾತ್ರವಾಗಲಿ ಅಥವಾ ಸಂಭಾವನೆಯ ಬಗ್ಗೆಯಾಗಲಿ ಚರ್ಚಿಸುವುದಿಲ್ಲ ಮತ್ತು ಜೀವನದಲ್ಲಿ ಅವರು ಯಾವಾಗ ಕರೆದರೂ ತಾವು ಅಲ್ಲಿ ಹಾಜರಿರುತ್ತೇನೆ ಎಂದು ಅಕ್ಷಯ್ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ. ಸದ್ಯ ಅಕ್ಷಯ್​ ಆಡಿರುವ ಮಾತುಗಳನ್ನು ಬಾಲಿವುಡ್​ ಮಂದಿಯ ಗಮನ ಸೆಳೆದಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net