ಓಟಿಟಿಯಲ್ಲಿ ಮಿಸ್ ಮಾಡದೇ ನೋಡಲೇ ಬೇಕಾದ ಬಹುಭಾಷಾ​​​ ನಟಿ ತ್ರಿಶಾ ನಟನೆಯ 8 ಸಿನಿಮಾಗಳಿವು!..Trisha Krishnan

Trisha Krishnan OTT Movies
Trisha Krishnan OTT Movies
Published on

ಪ್ರಮುಖ ಮುಖ್ಯಾಂಶಗಳು

  • ಸೌತ್ ಸಿನಿಮಾದಲ್ಲಿ ಎರಡು ದಶಕ ಪೂರೈಸಿದ ತ್ರಿಶಾ ಕೃಷ್ಣನ್ ಅವರ ಪ್ರಮುಖ ಸಿನಿಮಾಗಳು.
  • ಆಕ್ಷನ್, ಪ್ರೇಮಕಥೆ ಮತ್ತು ರಾಜಕೀಯ ಥ್ರಿಲ್ಲರ್‌ಗಳಲ್ಲಿ ತ್ರಿಶಾ ನಟನೆಗೆ ಸಾಟಿಯಿಲ್ಲ.
  • ಪ್ರಮುಖ ಸಿನಿಮಾಗಳು ನೆಟ್‌ಫ್ಲಿಕ್ಸ್, ಜೀ5 ಮತ್ತು ಪ್ರೈಮ್ ವಿಡಿಯೋದಲ್ಲಿ ಲಭ್ಯ.
1999ರಿಂದ ದಕ್ಷಿಣ ಭಾರತದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿರುವ 'ಕ್ವೀನ್ ಆಫ್ ಸೌತ್' ತ್ರಿಶಾ ಅವರು, ಇಂದಿಗೂ ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಹಲವಾರು ಪಪಾತ್ರದಲ್ಲಿ ವಿಭಿನ್ನ ಶೈಲಿಯಲ್ಲಿ ನಟಿಸಿ ತನ್ನ ಫ್ಯಾನ್ಸ್​ನ್ನು ಸೆಳೆದುಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾಗಿಂತ ಅವರು ಗುರುತಿಸಿಕೊಂಡಿದ್ದು ವಿಜಯ್​​ ಜತೆಗಿನ ಸಂಬಂಧದ ವಿಚಾರವಾಗಿ. ಇದನ್ನೆಲ್ಲ ಹೊರೆತು ಪಡಿಸಿ ನೋಡಿದರೇ, ತ್ರಿಶಾ ಎಂತಹ ಪಾತ್ರದಲ್ಲಿ ನಟಿಸಲು ಸೈ ಎನಿಸಿಕೊಂಡಿದ್ದಾರೆ.
ನಟಿ ತ್ರಿಶಾಗೆ ಈಗ 42 ವರ್ಷ. ವೈಯಕ್ತಕ ಜೀವನದ ಜೊತೆಗೆ ಅವರು ವೃತ್ತಿಜೀವನವನ್ನು ಸಹ ಸಮತೋಲನವಾಗಿ ಸರಿದೂಗಿಸಿಕೊಂಡಿದ್ದಾರೆ. ಈಗ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟು ಎರಡು ದಶಕ ಕಳೆದಿದೆ. ಇಂದಿಗೂ ಸಹ ಅವರ ಬಹುತೇಕ ಸಿನಿಮಾಗಳು ಓಟಿಟಿಯಲ್ಲಿ ಇನ್ನೂ ಬೇಡಿಕೆ ಗಿಟ್ಟಿಸಿಕೊಂಡಿವೆ. ಹಲವು ಸಿನಿಮಾಗಳನ್ನು ಹಲವರು ಸರ್ಚ್​​ ಮಾಡಿ ಇಂದಿಗೂ ನೋಡುತ್ತಾರೆ. ಅಂತಹ ಸಿನಿಮಾಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಲಾಗಗಿದೆ.
ಗಿಲ್ಲಿ
2004ರಲ್ಲಿ ತ್ರಿಶಾ ಕೃಷ್ಣನ್​ ಅವರು ವಿಜಯ್ ಅವರ ಜೊತೆಗೆ ಗಿಲ್ಲಿ ಸಿನಿಮಾದಲ್ಲಿ ನಟಿಸಿದ್ದರು. ಅದರಲ್ಲಿ ಅವರ ಪಾತ್ರ ಧನಲಕ್ಷ್ಮಿ. ತುಂಬಾ ಸರಳ ಮತ್ತು ಸುಂದರಿಯಾದ ಧನ ಅವರು ಕ್ರೂರತೆಯಿಂದ ಕೂಡಿದ ವ್ಯಕ್ತಿ ಮುತ್ತುಪಾಂಡಿ (ಪ್ರಕಾಶ್ ರಾಜ್) ಬಲೆಗೆ ಸಿಲುಕುತ್ತಾಳೆ. ಅಚಾನಕ್ಕಾಗಿ ಮಧುರೈಗೆ ಬರುವ ಕಬಡ್ಡಿ ಆಟಗಾರ ವೇಲು(ವಿಜಯ್​​) ತ್ರಿಶಾರನ್ನು ಕಾಪಾಡುತ್ತಾನೆ. ಆಕೆಯನ್ನು ವೇಲು ರಕ್ಷಿಸೋದು ಹೇಗೆ ಎನ್ನುವುದೇ ಸಿನಿಮಾ. ಈ ಸಿನಿಮಾವನ್ನು ಸನ್​ ನೆಕ್ಷ್ಟ್​ನಲ್ಲಿ ನೋಡಬಹುದಾಗಿದೆ.

ನುವ್ವಸ್ತಾನಂಟೆ ನೇನು ಒದ್ದಾಂಟಾನಾ

ವರ್ಷಂ ಸಿನಿಮಾದ ಹಾಡು ನುವ್ವು ವಸ್ತಾನಂಟೆ ನೇನು ಒದ್ದಂಟಾನ ಖ್ಯಾತಿ ಪಡೆದಿತ್ತು. ಅದೇ ಹೆಸರಲ್ಲಿ 2005ರಲ್ಲಿ ಬಂದ ಸಿನಿಮಾ ನುವ್ವಸ್ತಾನಂಟೆ ನೇನು ಒದ್ದಾಂಟಾನಾ ಭಾರಿ ಖ್ಯಾತಿಯನ್ನು ಪಡೆದುಕೊಂಡಿತ್ತು. ಬಡ ರೈತನ ಅಣ್ಣನ ತಂಗಿಯ ಸರಳತೆ ಹಾಗೂ ಫಾರಿನ್​ನಲ್ಲಿ ಓದುವ ಸಿಧಾರ್ಥ್​​ನ ಕಿರಿಕಿರಿ, ಮುದ್ದಾದ ಪ್ರೀತಿಗೆ ಪ್ರೇಕ್ಷಕರು ಮಾರು ಹೋಗದಂತೂ ಸತ್ಯ ಈ ಸಿನಿಮಾವನ್ನು ಸನ್​ ನೆಕ್ಷ್ಟ್​ನಲ್ಲಿ ನೋಡಬಹುದಾಗಿದೆ.

ಆಡವಾರಿ ಮಾಟಲಕು ಅರ್ಥಾಲೇ ವೇರುಲೇ

2007ರಲ್ಲಿ ರ ತೆಲುಗು ಬ್ಲಾಕ್ಬಸ್ಟರ್ ಸಿನಿಮಾ ಆಡವಾರಿ ಮಾಟಲಕು ಅರ್ಥಾಲೇ ವೇರುಲೇ. ಈ ಸಿನಿಮಾದಲ್ಲಿ ತ್ರಿಶಾ ಕೃಷ್ಣನ್ (ಕುಸುಮಾಂಬಾ ಎಂದೂ ಕರೆಯುತ್ತಾರೆ) ಪಾತ್ರದಲ್ಲಿ ನಟಿಸಿದ್ದಾರೆ, ಇದರಲ್ಲಿ ವೆಂಕಟೇಶ್ ಜೊತೆ ನಟಿಸಿದ್ದಾರೆ. Zee5​ ಅಪ್ಲಿಕೇಶನ್​ನಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ.

ಕೋಡಿ

ಧನುಷ್​ ಜೊತೆ ನಟಿಸಿದ ಕೋಡಿ ಸಿನಿಮಾವು 2006ರಲ್ಲಿ ರಿಲೀಸ್ ಆಗಿದೆ. ಇದು ರಾಜಕೀಯ ಥ್ರಿಲ್ಲರ್​ ಸಿನಿಮಾವಾಗಿದ್ದು, ತ್ರಿಶಾ ಕೃಷ್ಣ ಅವರು ರುದ್ರಾ ಎನ್ನುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಈ ಸಿನಿಮಾವನ್ನು ಅಮೆಜಾನ್​ ಪ್ರೈಂನಲ್ಲಿ ನೋಡಬಹುದಾಗಿದೆ.
2008 ರ ತಮಿಳು ಚಲನಚಿತ್ರ ಅಭಿಯುಮ್ ನಾನುಮ್ ನಲ್ಲಿ, ತ್ರಿಶಾ ಕೃಷ್ಣನ್ ಅಭಿ ಎಂಬ ಹರ್ಷಚಿತ್ತದಿಂದ, ಪ್ರೀತಿಯ ಮತ್ತು ಸ್ವತಂತ್ರ ಯುವತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರವು ಮಗಳು ಮತ್ತು ಅವಳ ರಕ್ಷಣಾತ್ಮಕ ತಂದೆಯ ನಡುವಿನ ಭಾವನಾತ್ಮಕ ಕ್ಷಣಗಳನ್ನು ತೋರ್ಪಡಿಸುತ್ತದೆ. ಈ ಸಿನಿಮಾವನ್ನು ಅಮೆಜಾನ್​ ಪ್ರೈಮ್​ನಲ್ಲಿನ ನೋಡಬಹುದಾಗಿದೆ. ಮತ್ತಷ್ಟು ಕಥಾ ಹಂದರವನ್ನು ಹೊಂದಿರುವ ಸಿನಿಮಾ ಎಂದರೆ ಅದು 96 ಹಾಗೂ ಪೊನ್ನಿಯನ್ ಸೆಲ್ವಂ, ವರ್ಷಂ ಲಿಯೋ ಸಿನಿಮಾಗಳು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net