

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
69ನೇ ರಾಷ್ಟ್ರಪ್ರಶಸ್ತಿಯಲ್ಲಿ ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ಒಲಿದು ಬಂದಿವೆ. ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ ರತ್ ಶೆಟ್ಟಿ ನಟಿಸಿ, ನಿರ್ಮಿಸಿರುವ "777 ಚಾರ್ಲಿ' ಗೆಲುವಿನ ನಗೆ ಬೀರಿದ್ದು, ಜೇಕಬ್ ವರ್ಗೀಸ್ ನಿರ್ದೇಶನದ "ಆಯುಷ್ಮಾನ್' ಅತ್ಯುತ್ತಮ ಕ್ರೀಡಾ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನವಾಗಿದೆ. ನಟ ಅನಿರುದ್ಧ ಜತ್ಕರ್ ನಿರ್ದೇಶನದ "ಬಾಳೆ ಬಂಗಾರ' ಸಾಕ್ಷ್ಯಚಿತ್ರ ಮತ್ತು ಹಿರಿಯ ಸಿನಿಮಾ ವರದಿಗಾರ ಸುಬ್ರಮಣ್ಯ ಬಾದೂರು (ಬಾನಾಸು) ವಿಶೇಷ ಉಲ್ಲೇಖದ ಅಡಿಯಲ್ಲಿ ಸರ್ಟಿಫಿಕೇಟ್ಗೆ ಪಾತ್ರರಾಗಿದ್ದಾರೆ.
ಅತ್ಯುತ್ತಮ ಚಲನಚಿತ್ರ : ರಾಕೆಟ್ರಿ : ದಿ ನಂಬಿ ಎಫೆಕ್ಟ್ (ನಿರ್ದೇಶನ: ಆರ್. ಮಾಧವನ್)
ಇಂದಿರಾ ಗಾಂಧಿ ಪ್ರಶಸ್ತಿ ಯುವನಿರ್ದೇಶಕ ಪ್ರಶಸ್ತಿ : ವಿಷ್ಣು ಮೋಹನ್ (ಮೆಪ್ಪಡೈಯಾನ್ ಚಿತ್ರ)
ಅತ್ಯುತ್ತಮ ಜನಪ್ರಿಯ ಸಿನಿಮಾ : ಆರ್ಆರ್ಆರ್
ನರ್ಗಿಸ್ ದತ್ ಪ್ರಶಸ್ತಿ : ದಿ ಕಾಶ್ಮೀರ್ ಫೈಲ್ಸ್
ಅತ್ಯುತ್ತಮ ಸಾಮಾಜಿಕ ಸಿನಿಮಾ : ಅನುನಾದ್ ದಿ ರೆಸೊನೆನ್ಸ್
ಅತ್ಯುತ್ತಮ ಪರಿಸರ ಸಂರಕ್ಷಣೆ ಕುರಿತ ಚಿತ್ರ : ಗಾಂಧಿ ಆ್ಯಂಡ್ ಕೋ.
ಅತ್ಯುತ್ತಮ ನಿರ್ದೇಶಕ : ನಿಖಿಲ್ ಮಹಾಜನ್ (ಮರಾಠಿ ಸಿನಿಮಾ "ಗೋದಾವರಿ')
ಅತ್ಯುತ್ತಮ ನಟ : ಅಲ್ಲು ಅರ್ಜುನ್ (ಪುಷ್ಪ : ದಿ ರೈಸ್)
ಅತ್ಯುತ್ತಮ ನಟಿ : ಆಲಿಯಾ ಭಟ್ (ಗಂಗೂಬಾಯಿ ಕಾಥಿಯಾವಾಡಿ) ಮತ್ತು ಕೃತಿ ಸನೊನ್ (ಮಿಮಿ)
ಅತ್ಯುತ್ತಮ ಪೋಷಕ ನಟ : ಪಂಕಜ್ ತ್ರಿಪಾಠಿ (ಮಿಮಿ)
ಅತ್ಯುತ್ತಮ ಪೋಷಕ ನಟಿ : ಪಲ್ಲವಿ ಜೋಶಿ (ದಿ ಕಾಶ್ಮೀರ್ ಫೈಲ್ಸ್)
ಅತ್ಯುತ್ತಮ ಬಾಲ ನಟ : ಭವಿನ್ ರಬಾರಿ (ಛೆಲ್ಲೋ ಶೋ)
ಅತ್ಯುತ್ತಮ ಹಿನ್ನೆಲೆ ಗಾಯಕ : ಕಾಲಭೈರವ ("ಆರ್ಆರ್ಆರ್' ಚಿತ್ರದ "ಕೊಮರಮ್ ಭೀಮುಡೊ')
ಅತ್ಯುತ್ತಮ ಹಿನ್ನೆಲೆ ಗಾಯಕಿ : ಶ್ರೇಯಾ ಘೋಶಾಲ್ ("ಇರವಿನ್ ನಿಜಳ್' ಚಿತ್ರದ "ಮಾಯಾವ ಚಾಯಾವ')
ಅತ್ಯುತ್ತಮ ಛಾಯಾಗ್ರಹಣ : ಅವಿಕ್ ಮುಖ್ಯೋಪಾಧ್ಯಾಯ್ (ಸರ್ದಾರ್ ಉಧಮ್)
ಅತ್ಯುತ್ತಮ ಚಿತ್ರಕಥೆ : ಶಾಹಿ ಕಬೀರ್ (ನಾಯಟ್ಟು), ಸಂಜಯ್ ಲೀಲಾ ಭನ್ಸಾಲಿ ಮತ್ತು ಉತ್ಕರ್ಷಿನಿ ವಸಿಷ್ಠ (ಗಂಗೂಬಾಯಿ ಕಾಥಿಯಾವಾಡಿ)
ಅತ್ಯುತ್ತಮ ಸಂಭಾಷಣೆ : ಉತ್ಕರ್ಷಿನಿ ವಸಿಷ್ಠ ಮತ್ತು ಪ್ರಕಾಶ್ ಕಪಾಡಿಯಾ (ಗಂಗೂಬಾಯಿ ಕಾಥಿಯಾವಾಡಿ)
ಅತ್ಯುತ್ತಮ ಸಂಕಲನ : ಸಂಜಯ್ ಲೀಲಾ ಭನ್ಸಾಲಿ (ಗಂಗೂಬಾಯಿ ಕಾಥಿಯಾವಾಡಿ)
ಅತ್ಯುತ್ತಮ ನಿರ್ಮಾಣ ವಿನ್ಯಾಸ : ಡಿಮಿಟ್ರಿ ಮಲಿಚ್ ಮತ್ತು ಮಾನ್ಸಿ (ಸರ್ದಾರ್ ಉದ್ಧಂ)
ಅತ್ಯುತ್ತಮ ವಸ್ತ್ರವಿನ್ಯಾಸ : ವೀರ ಕಪೂರ್ (ಸರ್ದಾರ್ ಉದ್ಧಂ)
ಅತ್ಯುತ್ತಮ ಪ್ರಸಾದನ : ಪ್ರೀತಿಶೀಲ್ ಸಿಂಗ್ ಡಿಸೋಜಾ (ಗಂಗೂಬಾಯಿ ಕಾಥಿಯಾವಾಡಿ)
ಅತ್ಯುತ್ತಮ ಸಂಗೀತ : ದೇವಿಶ್ರೀ ಪ್ರಸಾದ್ (ಪುಷ್ಪ : ದಿ ರೈಸ್)
ಅತ್ಯುತ್ತಮ ಹಿನ್ನೆಲೆ ಸಂಗೀತ : ಎಂ.ಎಂ. ಕೀರವಾಣಿ (ಆರ್ಆರ್ಆರ್)
ಅತ್ಯುತ್ತಮ ಸಾಹಿತ್ಯ : ಚಂದ್ರಬೋಸ್ (ಕೊಂಡಪೋಲಂ ಚಿತ್ರದ ಧಮ್ ಧಮ್ ಹಾಡು)
ತೀರ್ಪುಗಾರರ ವಿಶೇಷ ಪ್ರಶಸ್ತಿ : ವಿಷ್ಣುವರ್ಧನ್ (ಶೇರ್ಶಾಹ್)
ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ಶ್ರೀನಿವಾಸ್ ಮೋಹನ್ (ಆರ್ಆರ್ಆರ್)
ಅತ್ಯುತ್ತಮ ನೃತ್ಯಸಂಯೋಜನೆ : ಪ್ರೇಮ್ ರಕ್ಷಿತ್ (ಆರ್ಆರ್ಆರ್)
ಅತ್ಯುತ್ತಮ ಸಾಹಸ ನಿರ್ದೇಶನ : ಕಿಂಗ್ ಸೊಲೊಮನ್ (ಆರ್ಆರ್ಆರ್)
ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ : ರಾಜೀವ್ ವಿಜಯಕರ್ (ಮ್ಯೂಸಿಕ್ ಬೈ ಲಕ್ಷಿ$್ಮಕಾಂತ್ ಪ್ಯಾರೇಲಾಲ್ : ದಿ ಇನ್ಕ್ರೆಡಿಬಲ್ ಮೆಲೋಡಿಯಸ್ ಜರ್ನಿ)
ಅತ್ಯುತ್ತಮ ಸಿನಿಮಾ ವಿಮರ್ಶಕ : ಪುರುಷೋತ್ತಮ ಚರ್ಯುಲು (ತೆಲುಗು)
ವಿಶೇಷ ಉಲ್ಲೇಖ (ವಿಮರ್ಶಕ) : ಸುಬ್ರಹ್ಮಣ್ಯ ಬಾದೂರು (ಕನ್ನಡ)
ವಿಶೇಷ ಉಲ್ಲೇಖ : ಅನಿರುದ್ಧ ಜತ್ಕರ್ ("ಬಾಳೆ ಬಂಗಾರ' ಸಾಕ್ಷ್ಯಚಿತ್ರ )
ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು :
777 ಚಾರ್ಲಿ (ಕನ್ನಡ), ಸರ್ದಾರ್ ಉಧಮ್ (ಹಿಂದಿ), ಉಪ್ಪೇನಾ (ತೆಲುಗು), ಕಡೈಸಿ ವಿವಸಾಯಿ (ತಮಿಳು), ಹೋಮ್ (ಮಲಯಾಳಂ), ಅನುರ್ (ಅಸಾಮೀಸ್), ಕಲ್ಕೊಖೋ (ಬೆಂಗಾಲಿ), ಛೆಲ್ಲೋ ಶೋ (ಗುಜರಾತಿ), ಸಮಾನಾಂತರ್ (ಮೈಥಿಲಿ), ಏಕ್ಡಾ ಕಾಯ್ ಜಲಾ (ಮರಾಠಿ), ಪ್ರತಿಾ (ಒಡಿಯಾ).
ರಾಷ್ಟ್ರಪ್ರಶಸ್ತಿ ಸಿಗುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಆದರೆ, ದೊರೆತಿರುವುದು ಖುಷಿ ನೀಡಿದೆ. ವಿಷಯ ಗೊತ್ತಾಗುತ್ತಲೇ ಮೊದಲು ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ಕರೆ ಮಾಡಿ ಮಾತನಾಡಿದೆ. ಫೈಟ್ಗಳಿರುವ ದೊಡ್ಡ ಬಜೆಟ್ನ ಕಮರ್ಷಿಯಲ್ ಚಿತ್ರಗಳನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡುವುದಕ್ಕೂ, ಒಂದು ಶ್ವಾನ&ಮಾನವನ ಕುರಿತ ಚಿತ್ರವನ್ನು ಪ್ಯಾನ್ ಇಂಡಿಯಾ ಮಾಡುವುದಕ್ಕೂ ತುಂಬ ವ್ಯತ್ಯಾಸವಿದೆ. ಇದುವರೆಗೆ ದೊರೆತ ಬೇರೆಲ್ಲ ಪ್ರಶಸ್ತಿಗಳಿಗಿಂತ ರಾಷ್ಟ್ರಪ್ರಶಸ್ತಿ ತುಂಬ ಸ್ಪೆಷಲ್. ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ದೊರೆತಿರುವುದು ಮತ್ತಷ್ಟು ಸಂತಸ ಮೂಡಿಸಿದೆ. ಜತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ.
- ಕಿರಣ್ ರಾಜ್, "777 ಚಾರ್ಲಿ' ನಿರ್ದೇಶಕ
"ಬಾಳೆ ಬಂಗಾರ' ನಾನು ನಿರ್ದೇಶಿಸಿದ ಮೊದಲ ಸಾಕ್ಷ್ಯಚಿತ್ರ. ಡಾ. ಭಾರತಿ ವಿಷ್ಣುವರ್ಧನ್ ಅಮ್ಮನವರ ಜೀವನದ ಕುರಿತ ಸಾಕ್ಷ್ಯಚಿತ್ರವಿದು. 141 ನಿಮಿಷಗಳ ಈ ಸಾಕ್ಷ್ಯಚಿತ್ರ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿ ಮೂರು ದಾಖಲೆಗಳನ್ನು ನಿರ್ಮಿಸಿದೆ. ಇಂತಹ ಚಿತ್ರಗಳು ಹೆಚ್ಚು ಮೂಡಿಬರಬೇಕು. ಹಿರಿಯರು ನಡೆದು ಬಂದ ಹಾದಿ, ಸಾಧನೆ ಬಗ್ಗೆ ಇಂದಿನ, ಮುಂದಿನ ಪೀಳಿಗೆಗಳಿಗೆ ಗೊತ್ತಾಗಬೇಕು. ಅವು ಮುಂದೆ ದಾಖಲೆಗಳಾಗಿ ಉಳಿಯಬೇಕು. ರಾಜ್ಯಪ್ರಶಸ್ತಿಗೂ ನಾನು ಅರ್ಜಿ ಸಲ್ಲಿಸಿದ್ದೆ. ಆದರೆ, 30 ನಿಮಿಷಗಳಿದ್ದರೆ ಮಾತ್ರ ಸ್ಪರ್ಧಿಸಬಹುದು ಎಂದು ರೂಲ್ಸ್ ಇತ್ತು. ಹೀಗಾಗಿ ಸಾಧ್ಯವಾಗಲಿಲ್ಲ. ಇದೀಗ ರಾಷ್ಟ್ರಪ್ರಶಸ್ತಿ ದೊರೆತಿರುವುದು ಖುಷಿ ನೀಡಿದೆ.
- ಅನಿರುದ್ಧ ಜತ್ಕರ್, ನಟ, "ಬಾಳೆ ಬಂಗಾರ' ಸಾಕ್ಷ್ಯಚಿತ್ರದ ನಿರ್ದೇಶಕ
ಪುನೀತ್ ರಾಜಕುಮಾರ್ ಅವರ ಜತೆ ಸಿನಿಮಾ ಮಾಡಬೇಕಿತ್ತು. ಇನ್ನೇನು ಘೋಷಣೆ ಮಾಡಬೇಕು ಅನ್ನುವಷ್ಟರಲ್ಲಿ ಅವರು ವಿಧಿವಶರಾದರು. ಹೀಗಾಗಿ ನಾನು ಸಿನಿಮಾಗಳಿಂದ ಕೆಲ ತಿಂಗಳ ಕಾಲ ದೂರ ಹೋದೆ. ವಾಪಸ್ಸಾದಾಗ ಮಾಡಿದ ಸಿನಿಮಾ "ಆಯುಷ್ಮಾನ್'. ಈ ಪ್ರಶಸ್ತಿಗಳು ಮತ್ತೆ ಸಿನಿಮಾ ಮಾಡಬೇಕು, ಉತ್ತಮ ಸಿನಿಮಾ ಮಾಡಬೇಕು ಅಂತ ಸ್ಪೂರ್ತಿ ನೀಡುತ್ತದೆ. ಮೂರನೇ ಬಾರಿ (2006ರಲ್ಲಿ "ಆಂದಿಯುಮ್' ಮಲಯಾಳಂ ಚಿತ್ರ ಹಾಗೂ 2016ರಲ್ಲಿ "ಡ್ರಿಬ್ಲಿಂಗ್ ವಿತ್ ದೇರ್ ಫ್ಯೂಚರ್' ಚಿತ್ರಕ್ಕೆ ಅತ್ಯುತ್ತಮ ಅನ್ವೇಷಣಾ ಚಿತ್ರ ಪ್ರಶಸ್ತಿ) ರಾಷ್ಟ್ರಪ್ರಶಸ್ತಿ ದೊರೆತಿರುವುದು ಖುಷಿ ನೀಡಿದೆ. ಕರೊನಾ ಸಮಯದಲ್ಲಿ ಎಲ್ಲ ಬಗೆಯ ಆರೋಗ್ಯ ಸಮಸ್ಯೆಗಳನ್ನು ನೋಡಿದ್ದೇವೆ. ಕ್ರೀಡೆಯ ಮೂಲಕ ಆ ಸಮಸ್ಯೆಗಳಿಂದ ಹೇಗೆ ಹೊರಬರಬಹುದು ಎಂಬುದನ್ನು "ಆಯುಷ್ಮಾನ್' ಮುಖೇನ ತಿಳಿಸುವ ಪ್ರಯತ್ನ ಮಾಡಿದ್ದೇವೆ.
- ಜೇಕಬ್ ವರ್ಗೀಸ್, "ಆಯುಷ್ಮಾನ್' ಚಿತ್ರದ ನಿರ್ದೇಶಕ
ಇದು ಎಲ್ಲ ಚಲನಚಿತ್ರ ಪತ್ರಕರ್ತರಿಗೆ ದೊರೆತ ಗೌರವ. ಇದುವರೆಗೂ ಚಲನಚಿತ್ರ ಪತ್ರಕರ್ತರಿಗೆ ಈ ಗೌರವ ದೊರೆತಿರಲಿಲ್ಲ. ಇಂತಹ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ನೀಡಿದೆ. ಇದು ನನ್ನ ಸಾರ್ಥಕ ಕ್ಷಣ ಎನ್ನಬಹುದು.
- ಸುಬ್ರಹ್ಮಣ್ಯ ಬಾದೂರು (ಬಾನಾಸು), ಹಿರಿಯ ಪತ್ರಕರ್ತ