ಯೂಟ್ಯೂಬ್​ನಲ್ಲಿ ರಾಬರ್ಟ್​ ಚಿತ್ರದ 'ಕಣ್ಣು ಹೊಡಿಯಾಕ...' ಹಾಡಿನ ಹವಾ..

kannu-hodiyaka-robert
Published on

ಬೆಂಗಳೂರು: ಲಾಕ್​ಡೌನ್​ ಸಡಿಲಗೊಂಡ ಬಳಿಕ ಬಿಡುಗಡೆ ಆಗಿದ್ದ ರಾಬರ್ಟ್ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 100 ಕೋಟಿಯ ಬಿಜಿನೆಸ್ ಮಾಡಿತ್ತು. ಎಲ್ಲೆಡೆಯಿಂದ ಮೆಚ್ಚುಗೆ ಪಡೆದುಕೊಂಡಿದ್ದ ಈ ಚಿತ್ರ ಹಾಡುಗಳ ವಿಚಾರದಲ್ಲಿಯೂ ಸದ್ದು ಮಾಡಿತ್ತು. ಅದರಂತೆ ಕಣ್ಣು ಹೊಡಿಯಾಕ ಹಾಡು ಇದೀಗ ಯೂಟ್ಯೂಬ್​ನಲ್ಲಿ ಹವಾ ಸೃಷ್ಟಿಸಿದೆ. ಬರೋಬ್ಬರಿ 5 ಕೋಟಿ ಬಾರಿ ಈ ಹಾಡು ವೀಕ್ಷಣೆ ಕಂಡಿದೆ.

ಎರಡು ತಿಂಗಳ ಹಿಂದಷ್ಟೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾಗಿದ್ದ ಈ ಹಾಡು, ಆಗಿನಿಂದಲೂ ಹೆಚ್ಚು ಸದ್ದು ಮಾಡಿತ್ತು. ಯೋಗರಾಜ್ ಭಟ್ಟರ ಪಕ್ಕಾ ಜವಾರಿ ಸಾಹಿತ್ಯದ ಹಾಡು ಕೇಳುಗರ ಮೋಡಿ ಮಾಡಿತ್ತು. ಶ್ರೇಯಾ ಘೋಷಾಲ್ ಅವರ ಕಂಠಸಿರಿಗೂ ಫಿದಾ ಆಗಿದ್ದರು. ಅದೆಲ್ಲದರ ಪರಿಣಾಮವಾಗಿ ಇದೀಗ ಬರೋಬ್ಬರಿ 50 ಮಿಲಿಯನ್ ವೀಕ್ಷಣೆಯ ಗಡಿ ಮುಟ್ಟಿದೆ.

ಅಂದಹಾಗೆ, ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜಗಪತಿ ಬಾಬು ಖಳನಾಯಕರಾದರೆ, ಭದ್ರಾವತಿ ಬೆಡಗಿ ಆಶಾ ಭಟ್ ನಾಯಕಿಯಾಗಿ ಈ ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದರು. ಉಮಾಪತಿ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net