ದಸರಾ ಸ್ಪೆಷಲ್: ಸತ್ಯ-ಧರ್ಮದ ಗೆಲುವು ಸಾರುವ 5 ಸೂಪರ್‌ಹಿಟ್ ಬಾಲಿವುಡ್ ಸಿನಿಮಾಗಳಿವು..Bollywood

ದಸರಾ ಸ್ಪೆಷಲ್: ಸತ್ಯ-ಧರ್ಮದ ಗೆಲುವು ಸಾರುವ 5 ಸೂಪರ್‌ಹಿಟ್ ಬಾಲಿವುಡ್ ಸಿನಿಮಾಗಳಿವು..Bollywood
Published on: 
  • ಭಾರತೀಯ ಸಂಸ್ಕೃತಿಯಂತೆ ಕೆಟ್ಟತನದ ಮೇಲಿನ ಒಳ್ಳೆಯದರ ವಿಜಯವನ್ನು ಸಾರುವ ಸಿನಿಮಾಗಳು.

  • 'ಲಗಾನ್' .'ಶೋಲೆ'.'ಅಗ್ನಿಪಥ್' ಸೇರಿದಂತೆ ಹಲವು ಸಿನಿಮಾಗಳೇ ಉದಾಹರಣೆ.

  • ಮಕ್ಕಳ ಕಳ್ಳ ಸಾಕಾಣಿಕೆ, ಉಳ್ಳವರ ದಬ್ಬಾಳಿಕೆ, ಸತ್ಯಾನ್ವೇಷಣೆಯ ರೋಚಕ ಕತೆ ಹೇಳುವ ಬಾಲಿವುಡ್​ ಸಿನಿಮಾಗಳು.

Bollywood movies for Dussehra: ವಿಜಯದಶಮಿ ಎಂದರೆ ಅದೇ ಧರ್ಮಕ್ಕೆ, ಒಳ್ಳೆಯದಕ್ಕೆ ಜಯ ಎನ್ನುವುದು. ಸೀತೆಯನ್ನು ಅಪಹರಿಸಿದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಸಂಕೇತಿಸುವ ಈ ಹಬ್ಬವು ಕೆಟ್ಟತನದ ಅಂತ್ಯ ಮತ್ತು ಧರ್ಮದ ಗೆಲುವನ್ನು ಎತ್ತಿಹಿಡಿಯುತ್ತದೆ. ಸಿನಿಮಾದಲ್ಲಿಯೂ ಖಳನಾಯಕರನ್ನು ಸದಬಡಿಯುವ ಹಿರೋಗಳ ಕತೆಯನ್ನು ಹೆಣೆದಿರಲಾಗಿತ್ತದೆ.

ಈ ದಸರಾ ಸ್ಫೂರ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ಧೈರ್ಯ, ನ್ಯಾಯ ಮತ್ತು ಕೆಟ್ಟತನದ ಮೇಲಿನ ಒಳ್ಳೆಯದರ ಅಂತಿಮ ವಿಜಯದ ಕಥೆಗಳನ್ನು ಹೇಳುವ 5 ಬಾಲಿವುಡ್ ಸಿನಿಮಾಗಳನ್ನು ನೋಡಿ. ನಿಮ್ಮ ಪ್ಲೇ ಲಿಸ್ಟ್​ನಲ್ಲಿ ಈ ಸಿನಿಮಾಗಳು ಇರಲಿ.

ಶೋಲೆ

1975ರಲ್ಲಿ ರಿಲೀಸ್​ ಆದ ಶೋಲೆ ಸಿನಿಮಾವು ಐಕಾನಿಕ್​ ಸಿನಿಮಾಗಳಲ್ಲಿ ಒಂದು. ದರೋಡೆಕೋರ ಗಬ್ಬರ್ ಸಿಂಗ್‌ನ ಭಯದಲ್ಲೇ ಬದುಕುತ್ತಿದ್ದ ರಾಮಗಢ ಹಳ್ಳಿಯ ಸುತ್ತ ಸುತ್ತುತ್ತದೆ. ಜೈ ಮತ್ತು ವೀರು ಹಳ್ಳಿಗರೊಂದಿಗೆ ಬಂಧವನ್ನು ಬೆಳೆಸಿಕೊಂಡು ಅವರನ್ನು ರಕ್ಷಿಸಲು ಮಾಡುವ ಹೋರಾಟದ ಸುತ್ತ ಈ ಕತೆ ಸುತ್ತುತ್ತದೆ. ನ್ಯಾಯ ಕೊಡಿಸಲು ತಮ್ಮ ಜೀವವನ್ನೇ ಪಣಕ್ಕಿಡಲು ಪಣಕ್ಕಿಡಲು ಸಿದ್ಧರಿರುವ ಜನರ ನಡುವಿನ ಹೋರಾಟದ ಮೂಲಕ ಈ ಚಿತ್ರವು ದಸರಾ ಹಬ್ಬದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ.

ಲಗಾನ್​ ಸಿನಿಮಾ

ತೀವ್ರ ಬರದ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳು ಹೇರಿದ ದಬ್ಬಾಳಿಕೆಯ ತೆರಿಗೆಯಿಂದ ನರಳುತ್ತಿರುವ ಒಂದು ಹಳ್ಳಿಯ ಕತೆಯನ್ನು ಲಗಾನ್​​ ಸಿನಿಮಾವು ಹೇಳುತ್ತದೆ. ಕ್ಯಾಪ್ಟನ್ ಆಂಡ್ರ್ಯೂ ರಸೆಲ್, ಹಳ್ಳಿಗರು ಕ್ರಿಕೆಟ್ ಪಂದ್ಯದಲ್ಲಿ ತನ್ನ ತಂಡವನ್ನು ಸೋಲಿಸಿದರೆ ತೆರಿಗೆಯನ್ನು ಮನ್ನಾ ಮಾಡುವುದಾಗಿ ಸವಾಲು ಹಾಕುತ್ತಾನೆ. ಕ್ರಿಕೆಟ್ ಅನುಭವ ಇಲ್ಲದಿದ್ದರೂ ಸವಾಲು ಸ್ವೀಕರಿಸಿ ಅನ್ಯಾಯದ ತೆರಿಗೆಯಿಂದ ಮುಕ್ತಗೊಳಿಸುವ ಸುತ್ತ ಕತೆ ಹೆಣೆಯಲಾಗಿದೆ.

ಸಾಮಾನ್ಯ ಜನರು ದಬ್ಬಾಳಿಕೆಯನ್ನು ಎದುರಿಸಿ ನಿಲ್ಲುವುದು ಮತ್ತು ತಂಡದ ಶ್ರಮ ಹಾಗೂ ಪರಿಶ್ರಮದ ಮೂಲಕ ಶಕ್ತಿಶಾಲಿ ಶತ್ರುವನ್ನು ಸೋಲಿಸುವುದರ ಮೂಲಕ ಈ ಚಿತ್ರವು ಕೆಟ್ಟತನದ ಮೇಲಿನ ಒಳ್ಳೆಯದರ ವಿಜಯವನ್ನು ಬಿಂಬಿಸುತ್ತದೆ.

ಕಹಾನಿ

ನಟಿ ವಿದ್ಯಾಬಾಲನ್​ ಅಭಿನಯದ ಕಹಾನಿ ಸಿನಿಮಾವು ರೋಮಾಂಚಕ ಥ್ರಿಲ್ಲರ್ ಸಿನಿಮಾವಾಗಿದೆ. ಕಾಣೆಯಾದ ಗಂಡನನ್ನು ಹುಡುಕುತ್ತಾ ಬರುವ ಮಹಿಳೆಯನ್ನು ಈ ಪತ್ತೆದಾರಿ ಕೆಲಸವು ಸುಳ್ಳು, ವಂಚನೆ ಮತ್ತು ಕೊಲೆಯ ಅಪಾಯಕಾರಿ ಜಾಲಕ್ಕೆ ಕರೆದೊಯ್ಯುತ್ತದೆ. ಅದರಿಂದ ಆಕೆ ಹೊರಬರುವ ಸುತ್ತ ಸಿನಿಮಾವನ್ನು ಕಟ್ಟಲಾಗಿದೆ ಧೈರ್ಯ, ಬುದ್ಧಿವಂತಿಕೆ ಮತ್ತು ಪರಿಶ್ರಮದ ಚಿತ್ರಣದ ಮೂಲಕ ಈ ಚಲನಚಿತ್ರವು ಒಳ್ಳೆಯದರ ಅಂತಿಮ ವಿಜಯವನ್ನು ಸಿನಿಮಾ ತೋರಿಸುತ್ತದೆ.

ಅಗ್ನಿಪಥ್

ಹೃತಿಕ್ ರೋಷನ್ ಮತ್ತು ಸಂಜಯ್ ದತ್ ಅಭಿನಯದ ‘ಅಗ್ನಿಪಥ್’, ವಿಜಯ್ ದಿನಾನಾಥ್ ಚೌಹಾಣ್ ಕಥೆಯನ್ನು ಹೇಳುತ್ತದೆ. ನಿರ್ದಯಿ ಕಾಂಚಾ ಚೀನಾ ವಿಜಯ್‌ನ ತಂದೆಯ ಮೇಲೊಬ್ಬ ಸುಳ್ಳು ಆರೋಪ ಹೊರಿಸಿ ಬರ್ಬರವಾಗಿ ಹತ್ಯೆ ಮಾಡಿದಾಗ ವಿಜಯ್ ಜೀವನವೇ ಧ್ವಂಸಗೊಳ್ಳುತ್ತದೆ. ವಿಜಯ್ ತನ್ನ ಶತ್ರುವನ್ನು ಸೋಲಿಸಿ ಮಂಡವಾದಲ್ಲಿ ಶಾಂತಿಯನ್ನು ಮರುಸ್ಥಾಪಿಸುತ್ತಾನೆ.

ಭಯದ ಮೇಲೆ ಸಾಮ್ರಾಜ್ಯ ಕಟ್ಟಿದ ಖಳನಾಯಕನ ಮೇಲಿನ ದಾಳಿ, ದುಷ್ಟ ಶಕ್ತಿಯ ದ್ವಂಸವನ್ನು ಸಿನಿಮಾ ಉಲ್ಲೇಖಿಸುತ್ತದೆ.

ಮರ್ದಾನಿ

ರಾಣಿ ಮುಖರ್ಜಿ ಅಭಿನಯದ ‘ಮರ್ದಾನಿ’ ಮಾನವ ಕಳ್ಳಸಾಗಾಣಿಕೆ ಜಾಲವನ್ನು ಮಟ್ಟಹಾಕುವ ನಿರ್ಭೀತ ಮುಂಬೈ ಪೊಲೀಸ್ ಅಧಿಕಾರಿ ಶಿವಾನಿ ಶಿವಾಜಿ ರಾಯ್ ಅವರ ಕಥೆಯ ಮೂಲಕ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಹೋರಾಟವನ್ನು ಪ್ರಸ್ತುತಪಡಿಸುತ್ತದೆ. ಪ್ಯಾರಿ ಎಂಬ ಹದಿಹರೆಯದ ಹುಡುಗಿ ನಾಪತ್ತೆಯಾದಾಗ, ಶಿವಾನಿ ತನಿಖೆ ಆರಂಭಿಸಿ ದುರ್ಬಲ ಯುವತಿಯರನ್ನು ಶೋಷಿಸುವ ಭಯಾನಕ ಕೃತ್ಯವನ್ನು ಪತ್ತೆ ಹಚ್ಚುತ್ತಾಳೆ. ನ್ಯಾಯಕ್ಕಾಗಿ ಅವಳು ತನ್ನ ಸ್ವಂತ ಸುರಕ್ಷತೆಯನ್ನೇ ಪಣಕ್ಕಿಡುತ್ತಾಳೆ. ದೇವಿ ದುರ್ಗೆಯಂತೆ ಶಿವಾನಿ ಧೈರ್ಯ ಮತ್ತು ಶಕ್ತಿಯ ಸಂಕೇತವಾಗಿ ಮೂಡಿಬಂದಿದ್ದಾರೆ. ನ್ಯಾಯಕ್ಕಾಗಿ ನಿಂತಾಗ ಕೆಟ್ಟತನದ ಮೇಲೆ ಒಳ್ಳೆಯದು ಹೇಗೆ ಗೆಲ್ಲಬಹುದು ಎಂಬುದನ್ನು ಈ ಚಿತ್ರ ನಿರೂಪಿಸುತ್ತದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net