ಡ್ರಗ್​ ಪ್ರಕರಣದಲ್ಲಿ ಬಾಲಿವುಡ್​ನ 25 ಮಂದಿ ಎ ಗ್ರೇಡ್​ ಸ್ಟಾರ್​ ಕಲಾವಿದರು!

924138-rhea-chakraborty
Published on

ಬಾಲಿವುಡ್​ ಡ್ರಗ್​ ಮಾಫಿಯಾ ಪ್ರಕರಣ ಬಗೆದಷ್ಟು ಆಳಕ್ಕಿಳಿಯುತ್ತಿದೆ. ಈಗಾಗಲೇ ಪೆಡ್ಲರ್ಗಳು​ ಸೇರಿ ರಿಯಾ ಮತ್ತವರ ಸಹೋದರ ಶೋವಿಕ್​ ಅರೆಸ್ಟ್ ಆಗಿದ್ದಾರೆ. ಇದೀಗ ವಿಚಾರಣೆ ವೇಳೆ ಮತ್ತೊಂದು ಸತ್ಯ ಬಹಿರಂಗವಾಗಿದ್ದು, ಬಾಲಿವುಡ್​ನ 25 ಮಂದಿ ಎ ಗ್ರೇಡ್​ ಸ್ಟಾರ್ ಕಲಾವಿದರೂ ಇದರಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಬಂಧಿತರಾಗಿರುವವರ ವಿಚಾರಣೆ ನಡೆಸುತ್ತಿದ್ದ ವೇಳೆ ಬಾಲಿವುಡ್​ನ ಪಾಲುದಾರಿಕೆ ಎಷ್ಟಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಡ್ರಗ್​ ಸೇವನೆ ಮತ್ತು ಡ್ರಗ್​ ಪೂರೈಕೆಗೆ ಸಂಬಂಧಿಸಿದಂತೆ 25ಕ್ಕೂ ಅಧಿಕ ಎ ಗ್ರೇಡ್​ ಕಲಾವಿದರ ಹೆಸರುಗಳನ್ನು ಎನ್​ಸಿಬಿ ಮುಂದೆ ಬಾಯ್ಬಿಟ್ಟಿದ್ದಾರೆ.

ಇನ್ನೇನು ಶೀಘ್ರದಲ್ಲಿ 25 ಮಂದಿ ಎ ಲಿಸ್ಟ್​ ಕಲಾವಿದರಿಗೆ ನಾರ್ಕೋಟಿಕ್ಸ್ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಸಮನ್ ಸಹ ನೀಡಲಿದ್ದು, ವಿಚಾರಣೆಗೆ ಆಹ್ವಾನಿಸಲಿದೆ. ಹಾಗಾದರೆ ಯಾರೆಲ್ಲರ ಹೆಸರು ಬಹಿರಂಗವಾಗಲಿದೆ ಎಂಬುದಕ್ಕೆ ಶೀಘ್ರದಲ್ಲಿ ಉತ್ತರ ಸಿಗಲಿದೆ.

ಇತ್ತ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ಮತ್ತು ಡ್ರಗ್​ ಮಾಫಿಯಾದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್​ ಶುಕ್ರವಾರ ವಜಾಗೊಳಿಸಿದೆ. ಸದ್ಯ ರಿಯಾ ಚಕ್ರವರ್ತಿ ಬೈಕುಲ್ಲಾ ಜೈಲಿನಲ್ಲಿ ಉಳಿಯಲಿದ್ದು, ಸೆಪ್ಟೆಂಬರ್ 22 ರವರೆಗೆ ಅವರನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ. ಇತ್ತ ರಿಯಾ ಪರ ವಕೀಲರು ಜಾಮೀನುಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net