2 ತಿಂಗಳಲ್ಲಿ 20 ಕೆಜಿ ಇಳಿಕೆ

kangana ravath 5 mar 20
Published on

ಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನವನ್ನಾಧರಿಸಿದ ‘ತಲೈವಿ’ ಚಿತ್ರದಲ್ಲಿ ಕಂಗನಾ ರಣಾವತ್ ನಟಿಸುತ್ತಿರುವುದು, ಅದಕ್ಕಾಗಿ ತೂಕ ಹೆಚ್ಚಿಸಿಕೊಂಡಿರುವುದು ಹಳೆಯ ವಿಷಯ. ಹೊಸ ವಿಷಯವೆಂದರೆ, ಹೆಚ್ಚಿಸಿಕೊಂಡಿರುವ ಆ ತೂಕವನ್ನು ಇಳಿಸುವ ಪಣ ತೊಟ್ಟಿದ್ದಾರೆ ಕಂಗನಾ.

ಎರಡು ತಿಂಗಳಲ್ಲಿ 20 ಕೆಜಿ ತೂಕವನ್ನು ಇಳಿಸುವ ಸವಾಲನ್ನು ಅವರು ಸ್ವೀಕರಿಸಿದ್ದಾರೆ. ‘ತಲೈವಿ’ ಚಿತ್ರದಲ್ಲಿನ ಜಯಲಲಿತಾ ಪಾತ್ರಕ್ಕೆ ತೂಕ ಹೆಚ್ಚಿಸಿಕೊಳ್ಳುವ ಅವಶ್ಯಕತೆ ಕಂಗನಾಗಿತ್ತು. ತೂಕ ಹೆಚ್ಚಿಸುವ ಆಹಾರವನ್ನು ತಿನ್ನುವುದರ ಜತೆಗೆ, ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಕಂಗನಾ ಕಳೆದ ವರ್ಷ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇದೀಗ ‘ತಲೈವಿ’ ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಮಧ್ಯೆ, ‘ತೇಜಸ್’ ಮತ್ತು ‘ದಾಖಡ್’ ಎಂಬ ಚಿತ್ರಗಳನ್ನು ಒಪ್ಪಿಕೊಂಡಿರುವ ಕಂಗನಾ, ಆ ಪೈಕಿ ‘ದಾಖಡ್’ ಎಂಬ ಚಿತ್ರದಲ್ಲಿ ಮೊದಲು ನಟಿಸಲಿದ್ದಾರೆ. ಆ ಚಿತ್ರದಲ್ಲಿ ತಮ್ಮ ಹಳೆಯ ರೂಪದಲ್ಲಿ ಕಂಗನಾ ಕಾಣಿಸಿಕೊಳ್ಳಬೇಕಿದ್ದು, ಅದಕ್ಕಾಗಿ ತುರ್ತಾಗಿ ತೂಕ ಕಳೆದುಕೊಳ್ಳಬೇಕಿದೆ. ಎರಡು ತಿಂಗಳಲ್ಲಿ 20 ಕೆಜಿ ತೂಕ ಇಳಿಸಿ, ತಮ್ಮ ಹಳೆಯ ರೂಪಕ್ಕೆ ಬರಬೇಕಿದೆ. ಈಗಾಗಲೇ ಈ ಸವಾಲನ್ನು ಖುಷಿಯಾಗಿಯೇ ಸ್ವೀಕರಿಸಿರುವ ಕಂಗನಾ, ಜಿಮ್ಲ್ಲಿ ಕಸರತ್ತು ಶುರು ಮಾಡಿದ್ದಾರೆ. ಇನ್ನು ಕೆಲವೇ ದಿನಗಳ ಅಂತರದಲ್ಲಿ, ಕಂಗನಾ ಮತ್ತೆ ತಮ್ಮ ಹಳೆಯ ರೂಪಕ್ಕೆ ಬಂದರೆ ಸವಾಲನ್ನು ಗೆದ್ದಂತಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net