ನಾನು! ನನ್ನ ಹೆಸರೇ ನಾನು... 1999ರ ಬ್ಲಾಕ್​ಬಸ್ಟರ್​ 'ಉಪೇಂದ್ರ' ರೀ-ರಿಲೀಸ್​! ಅಂದಿನ ಬಾಕ್ಸ್ ಆಫೀಸ್​ ದಾಖಲೆಯೇನು?

'ಉಪೇಂದ್ರ' ಸಿನಿಮಾ ರೀ-ರಿಲೀಸ್​
'ಉಪೇಂದ್ರ' ಸಿನಿಮಾ ರೀ-ರಿಲೀಸ್​
Published on

ಪ್ರಮುಖ ಮುಖ್ಯಾಂಶಗಳು

  • ಉಪೇಂದ್ರ ಸಿನಿಮಾ ರೀ-ರಿಲೀಸ್​ಗೆ ಸಜ್ಜು
  • 90ರ ದಶಕದಲ್ಲಿ ಬಾಕ್ಸ್ ಆಫೀಸ್​ ಧೂಳೆಬ್ಬಿಸಿದ ಉಪೇಂದ್ರ
ಬೆಂಗಳೂರು: ಕನ್ನಡ ಚಿತ್ರರಂಗದ ‘ಬುದ್ಧಿವಂತ’ ನಿರ್ದೇಶಕ, ರಿಯಲ್​ ಸ್ಟಾರ್​, ನಟ ಉಪೇಂದ್ರ ವರ್ಷಗಳ ಬಳಿಕ ಮತ್ತೊಮ್ಮೆ ‘ಯುಐ’ ಚಿತ್ರದ ಮುಖೇನ ಡೈರೆಕ್ಟರ್​ ಕ್ಯಾಪ್​ ತೊಟ್ಟಿದ್ದು ನಮ್ಮೆಲ್ಲರಿಗೂ ಗೊತ್ತೇ ಇದೆ. ನೆಚ್ಚಿನ ಅಭಿಮಾನಿಗಳನ್ನು ಮನರಂಜಿಸಲು ವಿಶೇಷ ಹಾಗೂ ವಿಭಿನ್ನತೆಯಿಂದ ಪ್ರೇಕ್ಷಕರ ಎದುರಿಗೆ ಹಾಜರಾಗುವ ಉಪ್ಪಿ ಅಭಿನಯದ 1999ರಲ್ಲಿ ತೆರೆಕಂಡ ಕಲ್ಟ್​ ಸಿನಿಮಾ ಉಪೇಂದ್ರ ಇದೀಗ ಮತ್ತೊಮ್ಮೆ ತೆರೆ ಮೇಲೆ ಬರಲು ಸಜ್ಜಾಗಿದೆ.
ಇಂದು ಉಪೇಂದ್ರ ಅವರಿಗೆ ದೇಶ, ವಿದೇಶಗಳಲ್ಲಿಯೂ ಅಪಾರ ಸಂಖ್ಯೆ ಅಭಿಮಾನಿಗಳು ಹುಟ್ಟಿಕೊಳ್ಳಲು ಈ ಕಲ್ಟ್​ ಚಿತ್ರವೇ ಮೂಲ ಕಾರಣ ಎಂದರೆ ಖಂಡಿತ ತಪ್ಪಾಗಲಾರದು. ಸದಾ ವಿಭಿನ್ನತೆಯ ಅಭಿರುಚಿಯಿಂದಲೇ ಚಿತ್ರವನ್ನು ಮಾಡುವ ಉಪ್ಪಿ, ಅಂದು ಇದೊಂದು ಸಿನಿಮಾ ಮೂಲಕವೇ ಸಿನಿಪ್ರಿಯರಲ್ಲಿ ಹುಚ್ಚೆಬ್ಬಿಸಿದರು. ಇದೀಗ ಈ ಸೂಪರ್​ಹಿಟ್​ ಚಿತ್ರವು ಆಧುನಿಕ ಟೆಕ್ನಾಲಜಿಯನ್ನು ಬಳಸಿಕೊಂಡು ಜೂನ್​ 04ರಂದು ರೀ-ರಿಲೀಸ್​ಗೆ ಎದುರುನೋಡುತ್ತಿದೆ.
ಚಿತ್ರದಲ್ಲಿ ನಾಯಕನಾಗಿ ಉಪೇಂದ್ರ ಅಭಿನಯಿಸಿದ್ದರೆ, ನಾಯಕಿಯರಾಗಿ ರವೀನಾ ಟಂಡನ್, ಪ್ರೇಮಾ ಮತ್ತು ದಾಮಿನಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಉಪೇಂದ್ರ ಅವರೇ ಬರೆದು ನಿರ್ದೇಶಿಸಿದ್ದು, ಅಂದಿನ ಮಟ್ಟಕ್ಕೆ ಕನ್ನಡದಲ್ಲಿ ಭರ್ಜರಿ ಯಶಸ್ಸನ್ನು ಕಂಡಿತು. ಬಹುತೇಕ ಚಿತ್ರಪ್ರೇಮಿಗಳಲ್ಲಿ ಸಿಕ್ಕಾಪಟ್ಟೆ ಗೊಂದಲ ಮೂಡಿಸಿದ್ದ ಉಪೇಂದ್ರ, ಎರಡೆರೆಡು ಬಾರಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವಂತೆ ಮಾಡಿದ್ದರು. ಇದೆಲ್ಲವೂ, ಅಂದಿನ ಮಟ್ಟಿಗೆ ಬಾಕ್ಸ್ ಆಫೀಸ್​ ಗಳಿಕೆಯನ್ನು ದುಪ್ಪಟ್ಟಾಗಿಸಿತು. ಜೊತೆಗೆ ಹೊಸ ದಾಖಲೆಗಳಿಗೂ ಸಾಕ್ಷಿಯಾಯಿತು.
90ರ ದಶಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರಗಳಲ್ಲಿ ಉಪೇಂದ್ರ ಕೂಡ ಒಂದು. ಮೂಲಗಳ ಪ್ರಕಾರ, ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಸುಮಾರು 10ರಿಂದ 15 ಕೋಟಿ ರೂ. ಕಲೆಕ್ಷನ್​ ಮಾಡಿತು ಎನ್ನಲಾಗಿದೆ. ಇದರೊಟ್ಟಿಗೆ ಕರ್ನಾಟಕದ ಚಿತ್ರಮಂದಿರಗಳಲ್ಲಿ 200ಕ್ಕೂ ಹೆಚ್ಚು ದಿನಗಳು ಪ್ರದರ್ಶನ ಕಂಡಿದೆ. ಬ್ಲಾಕ್​ಬಸ್ಟರ್​ ಆಗಿ ಹೊರಹೊಮ್ಮುತ್ತಿದ್ದಂತೆ ಉಪೇಂದ್ರ ತೆಲುಗಿನಲ್ಲಿ ಡಬ್​ ಆಯಿತು. ಆಂಧ್ರಪ್ರದೇಶದಲ್ಲಿ 100 ದಿನಗಳ ಸಕ್ಸಸ್​ಫುಲ್​ ಪ್ರದರ್ಶನ ಕಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net