‘120 ಬಹದುರ್’ ಸಾಹಸ : 3000 ಚೀನಿ ಸೈನಿಕರ ಮಣ್ಣು ಮುಕ್ಕಿಸಿದ್ದ ಯೋಧ ಸೈತಾನ್ ಸಿಂಗ್ ಬಯೋಪಿಕ್

120 bahudur
Published on

ಭಾರತ-ಚೀನಾ ನಡುವೆ 1962ರಲ್ಲಿ ನಡೆದಿದ್ದ ಯುದ್ಧ ಹಾಗೂ ಹುತಾತ್ಮ ಯೋಧರ ಕುರಿತಂತೆ ಹಿಂದಿಯಲ್ಲಿ ಹಲವಾರು ಸಿನಿಮಾಗಳು ಬಂದಿವೆ ಹಾಗೂ ಬರುತ್ತಿವೆ. ‘ಹಕೀಕತ್’ (1964), ‘ಪಲ್ಟನ್’(2018), ‘ಸುಬೇದಾರ್ ಜೋಗಿಂದರ್ ಸಿಂಗ್’ (2018), ‘72 ಅವರ್ಸ್: ದ ಮಾರ್ಟಿರ್ ನೆವರ್ ಡೈಡ್’ (2019) ಹೀಗೆ ಸಾಗುತ್ತದೆ. ಇದೀಗ ಯುದ್ಧದಲ್ಲಿ ಮಡಿದ ಮತ್ತೊಬ್ಬ ವೀರಯೋಧನ ಬಯೋಪಿಕ್ ಬರುತ್ತಿದೆ. ಹೆಸರು ‘120 ಬಹದುರ್’. 1962ರಲ್ಲಿ ಭಾರತ - ಚೀನಾ ನಡುವಿನ ಯುದ್ಧದ ಸಮಯದಲ್ಲಿ ರೆಝಂಗ್ ಲಾದಲ್ಲಿ 3000 ಶತ್ರು ಸೈನಿಕರ ವಿರುದ್ಧ ಶೌರ್ಯ ಪ್ರದರ್ಶಿಸಿದ 120 ಭಾರತೀಯ ಸೈನಿಕರ ನೇತೃತ್ವ ವಹಿಸಿದ್ದ ಮೇಜರ್ ಸೈತಾನ್ ಸಿಂಗ್ ಭಾಟಿ ಹೋರಾಟವನ್ನು ತೆರೆ ಮೇಲೆ ತರಲಾಗುತ್ತಿದೆ. ರಜನೀಶ್ ಘಾಯ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಮೇಜರ್ ಸೈತಾನ್ ಸಿಂಗ್ ಆಗಿ ರ್ಹಾನ್ ಅಖ್ತರ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿದ್ದು, ಇದೇ ನವೆಂಬರ್ 21ಕ್ಕೆ ಸಿನಿಮಾ ತೆರೆಗೆ ಬರಲಿದೆ. -ಏಜೆನ್ಸೀಸ್

ಮೇಜರ್ ಸೈತಾನ್ ಸಿಂಗ್ ಭಾಟಿ ಯಾರು?: ರಾಜಸ್ಥಾನ ಜೋಧಪುರ ಮೂಲದ ಸೈತಾನ್ ಸಿಂಗ್ ಭಾಟಿ ಮೊದಲು ಜೋಧಪುರ ಸ್ಟೇಟ್ ಫೋರ್ಸ್‌ನಲ್ಲಿದ್ದರು. ಬಳಿಕ 1955ರಲ್ಲಿ ‘ಕುಮಾವೋನ್ ರೆಜಿಮೆಂಟ್’ ಮೂಲಕ ಭಾರತೀಯ ಸೇನೆಗೆ ಸೇರ್ಪಡೆಯಾದರು. ನಂತರ ‘ಆಪರೇಷನ್ ನಾಗಾ ಹಿಲ್ಸ್ (1955), ಗೋವಾ ಸ್ವಾಧೀನಪಡಿಸಿಕೊಳ್ಳುವ ಕಾರ್ಯಾಚರಣೆಗಳಲ್ಲಿ (1960) ಭಾಗಿಯಾಗಿದ್ದರು. ಹಾಗೆಯೇ 1962ರಲ್ಲಿ ಭಾರತ-ಚೀನ ಯುದ್ಧದದಲ್ಲೂ ಸಾಹಸ ಮೆರೆದರು. ಆದರೆ, ಈ ಯುದ್ಧದಲ್ಲಿ ಸೈತಾನ್ ಸಿಂಗ್ ವೀರಮರಣ ಹೊಂದಿದ್ದರು. ಭಾರತ ಸರ್ಕಾರವು ಅವರಿಗೆ ಮರಣೋತ್ತರ ‘ಪರವ ವೀರ ಚಕ್ರ ಪ್ರಶಸ್ತಿ’ ನೀಡಿ ಗೌರವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net