

ಸುಳ್ಯ: ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ಶಿಲ್ಪಾ ಕೆ.ಎನ್. ಕಾಸರಗೋಡು ಜಿಲ್ಲಾ 7ನೇ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ-2025ರಲ್ಲಿ ಚುಟುಕು ವಾಚಿಸಿ ಡಾ.ಎಂ.ಜಿ.ಆರ್.ಅರಸ್ ಚುಟುಕು ಕಾವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ಕೆ.ನಾರಾಯಣ ಮಣಿಯಾಣಿ, ಶಶಿಕಲಾ ಬಿ ದಂಪತಿಯ ಪುತ್ರಿ ಶಿಲ್ಪಾ ಕೆ.ಎನ್. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಎಂ.ಎ ವ್ಯಾಸಂಗ ಮಾಡುತ್ತಿದ್ದಾರೆ. ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ವಿನೋಬನಗರದ ವಿವೇಕಾನಂದ ಅನುದಾನಿತ ವಿದ್ಯಾಸಂಸ್ಥೆಯಲ್ಲಿ ಪೂರೈಸಿ ಒಂದು ವರ್ಷದಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.