

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪ್ರಸ್ತುತ ದಿನಗಳಲ್ಲಿ ಯುವಜನತೆ ಮೊಬೈಲ್ ದಾಸರಾಗಿ ಅದರಲ್ಲಿರುವುದೇ ಕ್ರೀಡೆ ಎಂದು ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರೀಡಾಕೂಟಕ್ಕೆ ಯುವಕರ ಭಾಗಿ ಕ್ಷೀಣಿಸಿದೆ. ಮೈದಾನದಲ್ಲಿ ನಡೆಯುವುದೇ ಅಸಲಿ ಕ್ರೀಡೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಹೇಳಿದರು.
ಅಸೈಗೋಳಿ ಮೆರ್ಸಿ ಫ್ರೆಂಡ್ಸ್ ವತಿಯಿಂದ ಅಸೈಗೋಳಿ ಐಟಿಐ ಕಾಲೇಜು ಮೈದಾನದಲ್ಲಿ ಶನಿವಾರ ಎರಡು ದಿನಗಳ ‘ಕ್ರಿಸ್‌ಮಸ್ ಟ್ರೋಫಿ-2024’ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಲ್ ಇಂಡಿಯಾ ಕೆಥೊಲಿಕ್ ಯೂನಿಯನ್ ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಮಾತನಾಡಿದರು. ಕೆಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ, ಕ್ರೀಡಾ ಸಂಘಟಕ ಪ್ರದೀಪ್ ಕುಟಿನ್ಹ, ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಅವರನ್ನು ಸನ್ಮಾನಿಸಲಾಯಿತು.
ಅಮೆಚೂರು ಕಬಡ್ಡಿ ಉಳ್ಳಾಲ ತಾಲೂಕು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿಸೋಜ, ಕೊಣಾಜೆ ಗ್ರಾಪಂ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಮಂಜನಾಡಿ ಗ್ರಾಪಂ ಸದಸ್ಯೆ ಕ್ರಿಶ್ಚಿನ್ ಮೊಂತೆರೋ, ಮೆರ್ಸಿ ಫ್ರೆಂಡ್ಸ್ ಅಧ್ಯಕ್ಷ ಮೆಲ್ವಿನ್ ರೋಶನ್ ಡಿಸೋಜ, ಸಚೇತಕ ಐವನ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು. ಮೆರ್ಸಿ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಪ್ರಾಸ್ತಾವಿಕ ಮಾತನಾಡಿದರು. ಪಿಲಿಫ್ ಡಿಸೋಜ ವಂದಿಸಿದರು. ಪ್ರೀತಂ ಪಜೀರ್ ಕಾರ್ಯದರ್ಶಿ ನಿರೂಪಿಸಿದರು.
ಯುವಕರು ಸಮಾಜದಲ್ಲಿ ಯಾವ ರೀತಿ ಗುರುತಿಸಿಕೊಳ್ಳಬೇಕು ಎಂಬುದನ್ನು ಮೆರ್ಸಿ ಫ್ರೆಂಡ್ಸ್ ತೋರಿಸಿಕೊಟ್ಟಿದೆ. ಸಂಘಟನೆ ಕ್ರೀಡೆಗೆ ಮಾತ್ರ ಮೀಸಲಾಗದೆ ಕಷ್ಟದಲ್ಲಿರುವವರನ್ನು ಗುರುತಿಸಿ ಜಾತಿ, ಧರ್ಮ ನೋಡದೆ ನೆರವು ನೀಡುತ್ತಿರುವುದು ಯೇಸು ಕ್ರಿಸ್ತನ ಸಂದೇಶಕ್ಕೆ ಪೂರಕ. ನಝರ್ ಷಾ ಪಟ್ಟೋರಿ ಮಾಜಿ ಅಧ್ಯಕ್ಷರು, ಕೊಣಾಜೆ ಗ್ರಾ.ಪಂ. https://www.vijayavani.net/kori-jathre https://www.vijayavani.net/state-level-kabaddi-preliminary-meeting