

ಕುಂದಾಪುರ: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಭಾನುವಾರ ನಡೆಯಿತು. ಮಾತನಾಡಿದ ಚರ್ಚ್ ಧರ್ಮಗುರು ಪಾವ್ಲ್ ರೇಗೊ ಅಧ್ಯಕ್ಷತೆ ವಹಿಸಿದ್ದರು. ಸಂತ ಜೋಸೆಫ್ ಕಾನ್ವೆಂಟ್ ಮುಖ್ಯಸ್ಥೆ ಮುಖ್ಯ ಶಿಕ್ಷಕಿ ಸುಪ್ರಿಯಾ, ಪಾಲನಾ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳ ಪರವಾಗಿ ರೀಶೊನ್ ಡಿ ಆಲ್ಮೇಡಾ, ಕ್ಲಿಯೊನಾ ಸಿಕ್ವೇರಾ, ಶಿಕ್ಷಕರ ಪರವಾಗಿ ವೈಲೆಟ್ ಡಿಸೋಜ ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಡೆನಿಸನ್ ಬ್ರಗಾಂಜಾ ಸ್ವಾಗತಿಸಿದರು. ನೀತಿ ಶಿಕ್ಷಣ ಶಿಕ್ಷಕರ ಸಂಚಾಲಕಿ ವೀಣಾ ಡಿಸೋಜ ವರದಿ ವಾಚಿಸಿದರು. ಪರ್ಲ್ ಬರೆಟ್ಟೊ, ಸಿಯೋನಾ ವಾಜ್ ಕಾರ್ಯಕ್ರಮ ನಿರೂಪಿಸಿದರು. ಡೆನ್ಸಿಯಾ ಬರೆಟ್ಟೊ ವಂದಿಸಿದರು.