VIDEO| ಕ್ರಿಸ್ ಗೇಲ್ ಕೆರಿಬಿಯನ್ ಡ್ಯಾನ್ಸ್ ವಿಡಿಯೋ ವೈರಲ್

gayle333
Published on

ಬೆಂಗಳೂರು: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಈಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ರಾಷ್ಟ್ರೀಯ ತಂಡದಿಂದ ಸದ್ಯ ದೂರ ಉಳಿದಿರುವ ಅವರು, ವಿವಿಧ ಟಿ20 ಲೀಗ್‌ಗಳಲ್ಲಿ ಮಿಂಚುವುದಕ್ಕೆ ಕರೊನಾ ಹಾವಳಿ ಅಡ್ಡಿಯಾಗಿದೆ. ಹೀಗಾಗಿ ತವರಿನಲ್ಲಿ ಪಾರ್ಟಿ ಮಾಡುತ್ತ ಜೀವನವನ್ನು ಆನಂದಿಸುತ್ತಿರುವ ಕ್ರಿಸ್ ಗೇಲ್, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕೆರಿಬಿಯನ್ ಡ್ಯಾನ್ಸ್ ಸ್ಟೆಪ್‌ಗಳ ವಿಡಿಯೋ ಈಗ ಅಭಿಮಾನಿಗಳ ಗಮನ ಸೆಳೆದಿದೆ.

ಇಡೀ ಜಗತ್ತು ಕರೊನಾದಿಂದ ತತ್ತರಿಸಿದ್ದರೆ, ಕೆರಿಬಿಯನ್ ದ್ವೀಪಗಳಲ್ಲಿ ಮಾತ್ರ ವೈರಸ್ ಹೆಚ್ಚಿನ ಹಾನಿ ಮಾಡಿಲ್ಲ. ಈ ನಡುವೆ 40 ವರ್ಷದ ಕ್ರಿಸ್ ಗೇಲ್ ಕೆರಿಬಿಯನ್ ಸಂಗೀತವನ್ನು ಆನಂದಿಸುತ್ತ ಸಮಯ ಕಳೆಯುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಾಕಿರುವ ನೃತ್ಯದ ವಿಡಿಯೋದಲ್ಲಿನ ವಿಶೇಷ ಸ್ಟೆಪ್ಸ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಹಾಕಿದ್ದಾರೆ. ಕರೊನಾ ಹಾವಳಿಯ ನಡುವೆ ಇವರೇ ವಿಶ್ವದ ಅತ್ಯಂತ ಸಂತೋಷದ ವ್ಯಕ್ತಿ ಇರಬೇಕು ಎಂಬ ಕಮೆಂಟ್‌ಗಳೂ ಬಂದಿವೆ.

ವೆಸ್ಟ್ ಇಂಡೀಸ್ ತಂಡ ಸದ್ಯ ಇಂಗ್ಲೆಂಡ್‌ನಲ್ಲಿ ಆಡುತ್ತಿದ್ದರೂ, ಅವರು ಟೆಸ್ಟ್ ತಂಡದ ಭಾಗವಾಗಿಲ್ಲ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಗೇಲ್ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ. ಈ ವರ್ಷ ಐಪಿಎಲ್‌ನಲ್ಲಿ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿಯಬೇಕಾಗಿದೆ. ಟಿ20 ವಿಶ್ವಕಪ್ ಮುಂದೂಡಿಕೆಯಿಂದ ಐಪಿಎಲ್‌ಗೆ ವೇದಿಕೆ ಸಜ್ಜಾಗುತ್ತಿದ್ದು, ಗೇಲ್ ಕೂಡ ಮರಳಿ ಕಣಕ್ಕಿಳಿಯುವ ಸಮಯ ಸನಿಹ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net