ಕುಕ್ಕೆ ಭದ್ರತಾ ಸಿಬ್ಬಂದಿಗೆ ರಕ್ಷಣಾ ಚೌಕಿ

Sub_Police chowki
Published on

ಸುಬ್ರಹ್ಮಣ್ಯ: ಇಲ್ಲಿನ ಕಾಶಿಕಟ್ಟೆ ಬಳಿ ಇರುವ ಬೈಪಾಸ್ ರಸ್ತೆಯ ಭದ್ರತಾ ಸಿಬ್ಬಂದಿಗೆ ದೇವಳದ ವತಿಯಿಂದ ರಕ್ಷಣಾ ಚೌಕಿ ನಿರ್ಮಿಸಿ ಇತ್ತೀಚೆಗೆ ಹಸ್ತಾಂತರಿಸಲಾಯಿತು.

ಬಿಸಿಲು ಹಾಗೂ ಮಳೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ರಕ್ಷಣಾ ಚೌಕಿಯ ವ್ಯವಸ್ಥೆ ಮಾಡುವಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರಲ್ಲಿ ಸಾರ್ವಜನಿಕರು ವಿನಂತಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಒಂದೇ ದಿನದಲ್ಲಿ ಶ್ರೀ ದೇವಳದಿಂದ ರಕ್ಷಣಾ ಚೌಕಿ ನಿರ್ಮಿಸಿಕೊಟ್ಟರು. ಅಧಿಕಾರಿಗಳಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net