

ಮೇಯ್ನ್ (ವಾಷಿಂಗ್ಟನ್): ಭಾರತ ಮೂಲದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಅಧಿಕಾರಿಯೊಬ್ಬರನ್ನು ಗೌರವಿಸಲು ಮೈಯ್ನ್ ಚಾಕೊಲೇಟ್ ಕಂಪನಿಯೊಂದು ವಿನೂತನ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದೆ.
ವಿಲ್ಬರ್ ಮೇಯ್ನ್ ಚಾಕೊಲೇಟ್ ಕಾನ್ಫೆಕ್ಷನ್‌ಗಳ ಸಂಸ್ಥಾಪಕರಲ್ಲಿ ಒಬ್ಬರಾದ ಕ್ಯಾಥರೀನ್ ಕಾರ್ಟಿ-ವಿಲ್ಬರ್ ಅವರು ಮೇಯ್ನ್ನ ರೋಗ ನಿಯಂತ್ರಣ ಕೇಂದ್ರದ (ಸಿಡಿಸಿ) ನಿರ್ದೇಶಕ ಡಾ. ನೀರವ್ ಶಾ ಅವರ ಅಪ್ರತಿಮ ಕಾರ್ಯವೈಖರಿಯಿಂದ ಪ್ರೇರಿತರಾಗಿ ಚಾಕೊಲೇಟ್ ಬಾರ್ ತಯಾರಿಸುವ ಕಾರ್ಯಕ್ಕಿಳಿದಿದ್ದಾರೆ.
ಹಾಲು ಮತ್ತು ಡಾರ್ಕ್ ಚಾಕೊಲೇಟ್ ಬಾರ್‌ನ ಹೊದಿಕೆಗಳ ಮೇಲೆ ಮೇಯ್ನ್ ನ ನಕಾಶ, ಹೃದಯದ ಚಿತ್ರ ಹಾಗೂ ಷಾ ಅವರ ಫೋಟೋ ಇದೆ. ಚಾಕೋಲೇಟ್ ಬಾರ್‌ಗಳ ಬೆಲೆ 2.25 ಡಾಲರ್ ಹಾಗೂ ಆರು ಬಾರ್‌ಗಳ ಪ್ಯಾಕ್‌ಗಳ ಬೆಲೆ 13.5 ಡಾಲರ್ ಇದೆ. ಇದರಿಂದ ಬರುವ ಆದಾಯದ ಶೇಕಡಾ 10 ಫ್ರೀಪೋರ್ಟ್ ಸಮುದಾಯ ಸೇವೆಗಳ ಆಹಾರ ಪ್ಯಾಂಟ್ರಿಗೆ ಹೋಗುತ್ತದೆ.
ಡಾ.ಶಾ ಹೆಸರಿನೊಂದಿಗೆ ಚಾಕೊಲೇಟ್ ಬಾರ್‌ಗಳನ್ನು ಮಾರಾಟ ಕಾರ್ಯ ಅವರಿಗೆ ತೃಪ್ತಿ ತಂದಿದೆಯೇ ಎಂಬುದನ್ನು ಖಚಿತಪಡಿಸಿಕೊಂಡಿಸಿಕೊಳ್ಳಲು ಈ ನಡೆಯನ್ನು ಡಾ. ಶಾ ಗಮನಕ್ಕೂ ತರಲಾಗಿದೆ. ಸಕಾರಾತ್ಮಕ ಬೆಳವಣಿಗೆಯಲ್ಲಿ ಮೇಯ್ನ್ ಸಿಡಿಸಿ ವಕ್ತಾರ ರಾಬರ್ಟ್ ಲಾಂಗ್ ಕಂಪನಿಗೆ ಮುಂದುವರಿಯಲು ಅವಕಾಶ ನೀಡಿದ್ದಾರೆ.
ಮೇಯ್ನ್ನ್ನು ಸುರಕ್ಷಿತವಾಗಿಡಲು ಶಾ ಮಾಡಿದ ಪ್ರಯತ್ನವನ್ನು ಅವರು ಎಷ್ಟು ಮೆಚ್ಚಿಕೊಂಡಿದ್ದಾರೆ ಎಂಬುದನ್ನು ವ್ಯಕ್ತಪಡಿಸುವುದು ಚಾಕೊಲೇಟ್ ಬಾರ್‌ಗಳ ಹಿಂದಿನ ಆಲೋಚನೆಯಾಗಿದೆ. ಶಾ ಕೋವಿಡ್ ಕುರಿತಂತೆ ವಾರಗಳಿಂದ ಪ್ರತಿನಿತ್ಯವೂ ಅಲ್ಲಿಯ ಆರೋಗ್ಯ ಸ್ಥಿತಿಗತಿ ಕುರಿತು ಮಾಹಿತಿ ನೀಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರ ಶಾಂತ ಮತ್ತು ಜನರಲ್ಲಿ ಧೈರ್ಯ ತುಂಬುವ ನಡವಳಿಕೆಗಾಗಿ ಅವರನ್ನು ಪ್ರಶಂಸಿಸಲಾಗುತ್ತಿದೆ.
ಕಂಪನಿಯಲ್ಲಿ ಕೆಲಸ ಮಾಡುವ ಕ್ಯಾಥರೀನ್‌ರ ಸಂಬಂಧಿ ಕ್ರಿಸ್ಟಿನ್ ಫ್ರೇಜಿಯರ್ ಸುದ್ದಿಸಂಸ್ಥೆಯೊಂದಿಗೆ ಈ ಕುರಿತು ಮಾತನಾಡಿದ್ದು, ಮೇಯ್ನ್ನ್ನು ಸುರಕ್ಷಿತವಾಗಿರಿಸುವುದರಲ್ಲಿ ಮಾತ್ರವಲ್ಲದೆ ಅಲ್ಲಿಯ ಜನರಿಗೆ ಆರೋಗ್ಯ ಕುರಿತು ಕಾಳಜಿ, ಅರಿವು ಮೂಡಿಸುವಲ್ಲಿ ಶಾ ಅನನ್ಯ ಪಾತ್ರ ನಿರ್ವಹಿಸಿದ್ದಾರೆ. ಅವರು ನಿಜವಾಗಿಯೂ ಜನರ ಬಗ್ಗೆ ಸಾಕಷ್ಟು ಸಹಾನುಭೂತಿಯನ್ನು ಹೊಂದಿದ್ದಾರೆ ಎಂಬುದನ್ನು ಅದು ತೋರುತ್ತದೆ ಎಂದಿದ್ದಾರೆ. ಕಂಪನಿಯು ಈವರೆಗೆ 3000 ಕ್ಕೂ ಹೆಚ್ಚು ಚಾಕೋಲೇಟ್ ಬಾರ್‌ಗಳನ್ನು ಮಾರಾಟ ಮಾಡಿದೆ.