More

    ಚಿತ್ರದುರ್ಗದಲ್ಲಿ ಜಿಪಂ ಕೆಡಿಪಿ ಸಭೆ : ಕಚೇರಿಗೆ ಮರಳಲು ಅಧಿಕಾರಿಗಳ ಪೈಪೋಟಿ

    ಚಿತ್ರದುರ್ಗ: ಪಾಲನಾ ವರದಿ ಮೇಲಿನ ಚರ್ಚೆ ಸ್ಕಿಪ್, ಅವಸರದಲ್ಲಿ ಪ್ರಗತಿ ಮಾಹಿತಿ ನೀಡಿ ಕಚೇರಿಗೆ ಮರಳಲು ಪೈಪೋಟಿ ನಡೆಸಿದ ಅಧಿಕಾರಿಗಳು. ಇದು ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯ ಹೈಲೈಟ್ಸ್.

    ಸಭೆ ಆರಂಭದಲ್ಲಿ ಪಾಲನಾ ವರದಿ ಚರ್ಚೆಗೆ ಮುಂದಾದ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಅವರಿಗೆ ಸಿಎಒ ಓಂಕಾರಪ್ಪ, ಟ್ರೆಜರಿ ಇಂದು ಲಾಕ್ ಆಗಲಿದ್ದು, ಬಿಲ್‌ಗಳನ್ನು ಸಲ್ಲಿಸಬೇಕಿದೆ ಎಂದು ಮನವಿ ಮಾಡಿದರು.

    ಪ್ರತಿಕ್ರಿಯಿಸಿದ ಅಧ್ಯಕ್ಷರು, ಶಿವರಾತ್ರಿಯ ಕಾರಣಕ್ಕೆ 12 ರಂದು ಸಭೆ ಕರೆಯಲಾಗಿದೆ. ಮಾರ್ಚ್ 10 ರ ಬದಲು 12 ರಂದು ಖಜಾನೆ ಲಾಕ್ ಆಗುತ್ತಿದೆ. ಜಿಲ್ಲೆಗೆ ಬಂದ ಅನುದಾನ ಯಾವುದೇ ಕಾರಣಕ್ಕೂ ಹಿಂದೆ ಹೋಗಬಾರದು. ಬಿಲ್ ಸಬ್‌ಮಿಟ್ ಮಾಡದವರು ಕಚೇರಿಗಳಿಗೆ ತೆರಳಲಿ. ಅದಕ್ಕೂ ಮುನ್ನ ತ್ವರಿತವಾಗಿ ಇಲಾಖೆಗಳ ಪ್ರಗತಿ ಮಾಹಿತಿ ನೀಡಲಿ ಎಂದು ಹೇಳಿ, ಪಾಲನಾ ವರದಿ ಕೈಬಿಟ್ಟಿರುವುದಾಗಿ ತಿಳಿಸಿದರು.

    ಮೊದಲಿಗೆ ಸಿಎಒ ನಿರ್ಗಮಿಸಿದರು. ನಂತರದಲ್ಲಿ ಶಿಕ್ಷಣ, ಪಿಆರ್‌ಇಡಿ, ಲೋಕೋಪಯೋಗಿ, ಪಶುಸಂಗೋಪನೆ, ಸಾಮಾಜಿಕ ಅರಣ್ಯ ಮತ್ತಿತರ ಇಲಾಖೆ ಅಧಿಕಾರಿಗಳು ಅವಸರದಲ್ಲಿ ಮಾಹಿತಿ ನೀಡಿ ತೆರಳಿದರು. ಕೆಲವು ಅಧಿಕಾರಿಗಳು ಮೊದಲೇ ಸಭೆಯಿಂದ ಹೊರಗೆ ಉಳಿಯಲು ಅನುಮತಿ ಪಡೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts