More

    ಶಾಂತಿ, ಸೌಹಾರ್ದತೆಯಿಂದ ಹೋಳಿ ಆಚರಿಸಿ

    ಕಲಬುರಗಿ: ನಗರ ಮತ್ತು ಜಿಲ್ಲಾದ್ಯಂತ ಹೋಳಿ ನಿಮಿತ್ತ ಮಾ.೨೫ರಂದು ಕಾಮದಹನ ಹಾಗೂ ಮಾ.೨೬ರಂದು ಧುಲಂಡಿಯನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಮನವಿ ಮಾಡಿದರು.

    ಕಮಿಷನರ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೋಳಿ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಂತಿ- ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ. ಚುನಾವಣೆ ನೀತಿ ಸಂಹಿತೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ರಂಜಾನ್ ಹಬ್ಬ ಒಂದೇ ಸಮಯದಲ್ಲಿ ಬಂದಿರುವುದರಿಂದ ಬಣದ ಬಂಡಿಗಳು ಓಡಿಸುವಂತಹ ಸಾರ್ವಜನಿಕರು ಸಂಬಂಧಿಸಿದ ಎಆರ್‌ಒದಿಂದ ಪರವಾನಿಗೆ ಪಡೆದುಕೊಳ್ಳಬೇಕು. ಪರಸ್ಪರ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

    ಮಾ.೨೬ ರಂದು ಮಧ್ಯಾಹ್ನ ೧೨ರವರೆಗೆ ಬಣ್ಣದ ಆಟ ಆಡಬೇಕು. ಚರ್ಮಕ್ಕೆ ಹನಿಕಾರಕವಲ್ಲದ ನೈಸರ್ಗಿಕ ಬಣ್ಣ ಮಾತ್ರ ಉಪಯೋಗಿಸಬೇಕು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಬೇಡಿ, ಅಲ್ಲದೆ ಮಹಿಳೆಯರ ಮೇಲೆ ಹಣ್ಣ ಹಾಕಬಾರದು. ಒತ್ತಾಯಪೂರ್ವಕವಾಗಿ ಹೋಳಿ ಆಚರಣೆ ಸರಿಯಲ್ಲ ಎಂದು ಎಚ್ಚರಿಸಿದರು.

    ಡಿಸಿಪಿ ಕನಿಕಾ ಸಿಕ್ರಿವಾಲ್, ಡಿಸಿಪಿ ಅಪರಾಧ ವಿಭಾಗದ ಪ್ರವೀಣ ನಾಯಕ್ ಇದ್ದರು.

    ಜಿಲ್ಲೆಯಲ್ಲಿ ೧೫ ಚೆಕ್ ಪೋಸ್ಟ್ ತೆರೆಯಲಾಗಿದೆ. ಮೋಟರ್ ಬೈಕ್‌ಗಳ ಸೈಲೆನ್ಸರ್ ತೆಗೆದು ಓಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹಬ್ಬದ ಸಂದರ್ಭದಲ್ಲಿ ಶಾಂತಿಭಂಗವನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯಾವುದೇ ಅಹಿತರ ಘಟನೆ ಸಂಭವಿಸದAತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು.
    | ಆರ್.ಚೇತನ್, ಪೊಲೀಸ್ ಆಯುಕ್ತ, ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts