More

    ದಾರ್ಶನಿಕರ ವಿಚಾರಧಾರೆಯಿಂದ ಸಮಾಜದ ಉನ್ನತಿ

    ಉಡುಪಿ: ದಾರ್ಶನಿಕರ ಜಯಂತಿ ಆಚರಿಸುವ ಮೂಲಕ ಅವರ ತತ್ವ, ಆದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆಚರಣೆ ಅರ್ಥಪೂರ್ಣವಾಗುತ್ತದೆ. ಅವರ ವಿಚಾರಧಾರೆಗಳು ಸಮಾಜದ ಉನ್ನತಿಗೆ ಪೂರಕವಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.
    ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯ ಮತ್ತು ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪ ಅರ್ಚಿಸಿ ಮಾತನಾಡಿದರು.

    ಮಹಾನ್​ ಚೇತನರು:
    ಶರಣ ಸಂಸತಿಯನ್ನು ಎಲ್ಲೆಡೆ ಪಸರಿಸಿದ ಮಹಾನ್​ ವ್ಯಕ್ತಿ ರೇಣುಕಾಚಾರ್ಯರು. ಅವರ ತತ್ವ, ಸಿದ್ಧಾಂತ ಕೇವಲ ಬೋಧನೆಗೆ ಸೀಮಿತವಾಗಿರದೆ ಸಮಾಜ ತಿದ್ದುವ ಕೆಲಸ ಮಾಡಿವೆ. ಶರಣರ ವಚನಗಳು ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರುವಂತದ್ದಾಗಿವೆ. ಕೈವಾರ ತಾತಯ್ಯ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರು ಹಲವಾರು ಪವಾಡಗಳ ಮೂಲಕ ಜನರಲ್ಲಿ ಆಧ್ಯಾತ್ಮಿಕ ಭಾವ ಮೂಡಿಸಿದವರಾಗಿದ್ದಾರೆ. ಸಮಾಜ ಸುಧಾರಣೆಗೆ ಸಾಕಷ್ಟು ಕೀರ್ತನೆ ರಚಿಸಿದ್ದಾರೆ. ಅವರ ಸಮಾಧಿ ಸ್ಥಳ ಕೈವಾರ ಪ್ರಸಿದ್ಧ ಕ್ಷೇತ್ರವಾಗಿದೆ ಎಂದರು.

    ಪೀಳಿಗೆಗೆ ತಲುಪಿಸಿ:
    ಜಿಲ್ಲಾ ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ನಿರಂಜನ ಮಾತನಾಡಿ, ಶರಣರ ಹಾಗೂ ಸಂತರ ಜಯಂತಿ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಹಾಗೂ ತಲುಪಿಸುವ ಕೆಲಸ ಇನ್ನಷ್ಟು ಉತ್ತಮವಾಗಿ ಆಗಬೇಕಿದೆ ಎಂದರು.
    ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​., ಕುಂದಾಪುರ ಸಹಾಯಕ ಕಮಿಷನರ್​ ರಶ್ಮಿ, ತಹಸೀಲ್ದಾರರು, ಕಸಾಪ ಕಾರ್ಯದರ್ಶಿ ನರಸಿಂಹಮೂರ್ತಿ, ಶರಣ ಸಾಹಿತ್ಯ ಪರಿಷತ್​ನ ಗಿರೀಶ್​ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts