More

    ಪ್ರಥಮ ಭಾಷೆಗೆ 95 ವಿದ್ಯಾರ್ಥಿಗಳು ಗೈರು

    ಉಡುಪಿ: ಪ್ರಥಮ ಭಾಷೆಯಾದ ಕನ್ನಡ, ಇಂಗ್ಲಿಷ್​, ಹಿಂದಿ, ಉರ್ದು, ಮರಾಠಿ ಸೇರಿದಂತೆ ಒಟ್ಟು 7 ಭಾಷೆಗಳಿಗೆ ಸೋಮವಾರ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿದೆ.
    ಜಿಲ್ಲೆಯಲ್ಲಿ ಒಟ್ಟು 13,701 ವಿದ್ಯಾರ್ಥಿಗಳು ಪರೀಕ್ಷೆ ಹೆಸರು ನೋಂದಾಯಿಸಿದ್ದು, 13,606 ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 95 ವಿದ್ಯಾರ್ಥಿಗಳು ಗೈರಾಗಿದ್ದರು. 13,521 ಹೊಸ ವಿದ್ಯಾರ್ಥಿಗಳಲ್ಲಿ 13,451 ಮಂದಿ ಆಗಮಿಸಿದ್ದು, 70 ಮಕ್ಕಳು ಗೈರಾಗಿದ್ದರು. 180 ರಿಪಿರ್ಟಸ್​ ವಿದ್ಯಾರ್ಥಿಗಳಲ್ಲಿ 155 ಮಂದಿ ಬಂದಿದ್ದು, 25 ಮಕ್ಕಳು ಗೈರಾಗಿದ್ದರು.

    ಡಿಸಿ ಭೇಟಿ:
    ಎಸ್​ಎಸ್​ಎಲ್​ಸಿ ಪರೀೆಯ ಮೊದಲ ದಿನ ಕೆಲ ಪರೀಕ್ಷೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ವಿಪರೀತ ಬಿಸಿಲು ಇರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ನೀಡುವಂತೆ ಪರೀಕ್ಷೆ ಕೇಂದ್ರದ ಪ್ರಮುಖರಿಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts