

ಈಗಾಗಲೇ ‘ಮೆಗಾ ಸ್ಟಾರ್’ ಚಿರಂಜೀವಿ ನಾಯಕತ್ವದ ‘ಆಚಾರ್ಯ’ ಶೂಟಿಂಗ್ಗೂ ಮುನ್ನವೇ ಬಾರೀ ಸುದ್ದಿಯಲ್ಲಿದೆ. ಚಿರಂಜೀವಿಗೆ ನಾಯಕಿ ಯಾರು ಎಂಬ ವಿಚಾರಕ್ಕೆ ಸದ್ದು ಮಾಡಿದ್ದ ಈ ಸಿನಿಮಾ, ಇದೀಗ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಾಮ್ರಣ್ಗೂ ನಾಯಕಿ ಯಾರು ಎಂಬ ವಿಚಾರಕ್ಕೆ ಸದ್ದು ಮಾಡುತ್ತಿದೆ.
ಈಗಾಗಲೇ ನಿರ್ದೇಶಕರು ಹುಡುಕಾಟ ನಡೆಸಿದ್ದು, ಇಬ್ಬರು ಟಾಪ್ ನಟಿಯರ ಮೇಲೆ ಕಣ್ಣಿಟ್ಟಿದ್ದಾರೆ. ಆ ಇಬ್ಬರಲ್ಲಿ ಯಾರು ಆಯ್ಕೆ ಆಗುತ್ತಾರೆ ಎಂಬುದೇ ಅಚ್ಚರಿಯ ಪ್ರಶ್ನೆ. ಹೌದು, ‘ಆಚಾರ್ಯ’ ಚಿತ್ರದಲ್ಲಿ ರಾಮ್ರಣ್ಗೆ ಜೋಡಿಯಾಗಿ ಕೀರ್ತಿ ಸುರೇಶ್ ಅಥವಾ ಕಿಯಾರಾ ಅಡ್ವಾಣಿ ಇಬ್ಬರಲ್ಲಿ ಒಬ್ಬರು ನಾಯಕಿಯಾಗುವ ಸಾಧ್ಯತೆ ದಟ್ಟವಾಗಿದೆ.
ಈ ಇಬ್ಬರು ನಟಿಯರನ್ನು ನಿರ್ದೇಶಕ ಕೊರಟಾಲ ಶಿವ ಈಗಾಗಲೇ ಸಂರ್ಪಸಿದ್ದು, ಚಿತ್ರದ ಬಗ್ಗೆ ಚರ್ಚೆ ಮಾಡಿದ್ದಾರಂತೆ. ಎಲ್ಲ ಅಂದುಕೊಂಡಂತೆ ಆದರೆ, ಸ್ಥಗಿತಗೊಂಡಿದ್ದ ಈ ಚಿತ್ರದ ಶೂಟಿಂಗ್ ಅಕ್ಟೋಬರ್ ವೇಳೆಗೆ ಶುರುವಾಗುವ ಸಾಧ್ಯತೆಗಳಿದ್ದು, ಆಗಲೇ ರಾಮ್ೆ ಜೋಡಿ ಯಾರಾಗಲಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿದ್ದಾರಂತೆ. (ಏಜೆನ್ಸೀಸ್)