ಬ್ರೇಕಪ್ ಮಾಡಿಕೊಂಡು ದೆಹಲಿ ಏರ್ಪೋರ್ಟ್​ನಲ್ಲಿ ಕೊರಳು, ಕೈ ಕುಯ್ದುಕೊಂಡ ಚೀನೀ ಮಹಿಳೆ..!

indira gandhi international airport
Published on

ನವದೆಹಲಿ: ತನ್ನ ಕೆಲಸ ಕಳೆದುಕೊಂಡು ಇತ್ತೀಚೆಗೆ ಬಾಯ್​ಫ್ರೆಂಡ್​ ಜೊತೆಗೆ ಬ್ರೇಕಪ್​ ಮಾಡಿಕೊಂಡು ಖಿನ್ನತೆಗೆ ಒಳಗಾಗಿದ್ದ ಚೀನಾದ ಮಹಿಳೆಯೊಬ್ಬರು ಸ್ನಾನಗೃಹದಲ್ಲಿ ರೇಜರ್‌ ಬ್ಲೇಡ್​ನಿಂದ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ನಡೆದಿದೆ. ಶನಿವಾರ ಮುಂಜಾನೆ ಟರ್ಮಿನಲ್ 3 ರಲ್ಲಿ ಈ ಘಟನೆ ನಡೆದಿದೆ.

ಅಧಿಕಾರಿಗಳ ಪ್ರಕಾರ, ಈ ಮಹಿಳೆ ಬಹ್ರೇನ್‌ನಿಂದ ಶನಿವಾರ ತಡರಾತ್ರಿ T3 ಗೆ ಬಂದಿಳಿದಿದ್ದಳು. "ಅವಳು ಕೌಲಾಲಂಪುರ್‌ಗೆ ವಿಮಾನವನ್ನು ಹತ್ತಬೇಕಾಗಿತ್ತು ಆದರೆ ಮುಂಜಾನೆ 4 ಗಂಟೆಯ ಸುಮಾರಿಗೆ, ಆಕೆ ವಾಶ್‌ರೂಮ್‌ಗೆ ಹೋಗಿ ಗಂಟಲು ಮತ್ತು ಮಣಿಕಟ್ಟನ್ನು ತಾನೇ ಕತ್ತರಿಸಿಕೊಂಡಳು" ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. "ನಾನು ಇತ್ತೀಚೆಗೆ ತನ್ನ ಕೆಲಸವನ್ನು ಕಳೆದುಕೊಂಡಿದ್ದೇನೆ. ನನ್ನ ಬಾಯ್​ಫ್ರೆಂಡ್​ ಜೊತೆಗೂ ಬ್ರೇಕಪ್ ಮಾಡಿಕೊಂಡಿದ್ದೇನೆ' ಎಂದು ಮಹಿಳೆ ಹೇಳಿರುವ ಬಗ್ಗೆ ಅನಾಮಿಕರಾಗಿ ಇರಲು ಇಚ್ಛಿಸಿದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net