More

    ಊಟದ ನಡುವೆ ಕೆಮ್ಮಿದಾಗ ಎದೆಯಲ್ಲಿ ಕೇಳಿಬಂತು ಶಬ್ದ: ವೈದ್ಯರ ಬಳಿ ತೆರಳಿದ ಮಹಿಳೆಗೆ ಕಾದಿತ್ತು ಶಾಕ್​!

    ಬೀಜಿಂಗ್​: ಕೇವಲ ಕೆಮ್ಮಿದ್ದಕ್ಕೆ ಮೂಳೆ ಮುರಿದ ಆಘಾತಕಾರಿ ಘಟನೆ ಚೀನಾದಲ್ಲಿ ನಡೆದಿದೆ. ಮಸಾಲಯುಕ್ತ ಆಹಾರದ ಕಾರಣದಿಂದಾಗಿ ಕೆಮ್ಮಿದ್ದಕ್ಕೆ ಮಹಿಳೆಯ ನಾಲ್ಕು ಪಕ್ಕೆಲುಬುಗಳು ಮುರಿದಿವೆ.

    ಶಾಂಗೈ ಮೂಲದ ಸಂತ್ರಸ್ತ ಮಹಿಳೆಯ ಹೆಸರು ಹುವಾಂಗ್​. ಊಟದ ನಡುವೆ ಕೆಮ್ಮಿದ ಮಹಿಳೆಗೆ ಏನೋ ಮುರಿದ್ದಂತೆ ಶಬ್ದ ಕೇಳುತ್ತದೆ. ಆದರೆ, ಏನೂ ಆಗಿಲ್ಲ ಎಂದು ಆರಂಭದಲ್ಲಿ ಸುಮ್ಮನಾಗುತ್ತಾಳೆ. ಆದರೆ, ಕೆಲವೇ ದಿನಗಳಲ್ಲಿ ಉಸಿರಾಡುವಾಗ ಮತ್ತು ಮಾತನಾಡುವಾಗ ನೋವಿನ ಅನುಭವವನ್ನು ಮಹಿಳೆ ಎದುರಿಸುತ್ತಾಳೆ.

    ಬಳಿಕ ಆಸ್ಪತ್ರೆಗೆ ತೆರಳುವ ಮಹಿಳೆ ವೈದ್ಯರ ಸಲಹೆಯಂತೆ ಸಿಟಿ ಸ್ಕ್ಯಾನ್​ ಮಾಡಿಸುತ್ತಾಳೆ. ಸ್ಕ್ಯಾನ್​ ರಿಪೋರ್ಟ್​ ನೋಡಿದ ವೈದ್ಯರು ಪಕ್ಕೆಲುಬುಗಳು ಮುರಿದಿರುವುದಾಗಿ ಹೇಳಿ, ಚಿಕಿತ್ಸೆ ನೀಡುತ್ತಾರೆ. ಪಕ್ಕೆಲುಬುಗಳು ವಾಸಿಯಾದರೂ ಒಂದು ತಿಂಗಳ ಕಾಲ ಮಹಿಳೆ ತನ್ನ ಸೊಂಟದ ಸುತ್ತಲೂ ಬ್ಯಾಂಡೇಜ್ ಸುತ್ತಿಕೊಳ್ಳಬೇಕಾದ ಸ್ಥಿತಿ ಕೇವಲ ಒಂದು ಕೆಮ್ಮಿನಿಂದ ನಿರ್ಮಾಣವಾಯಿತು.

    ಇನ್ನು ಕೇವಲ ಕೆಮ್ಮಿದಾಗ ಪಕ್ಕೆಲುಬುಗಳು ಮುರಿಯಲು ಕಾರಣ ಆಕೆಯ ಆರೋಗ್ಯಯುತವಾಗಿ ಹಾಗೂ ಸದೃಢವಾಗಿ ಇಲ್ಲದಿರುವುದು. ಅಲ್ಲದೆ, ಕಡಿಮೆ ದೇಹದ ತೂಕವು ಕಾರಣ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೆ, ಪಕ್ಕೆಲುಬುಗಳನ್ನು ನಿಮ್ಮ ಚರ್ಮದ ಅಡಿಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಆ ಮೂಳೆಯನ್ನು ಬೆಂಬಲಿಸಲು ಯಾವುದೇ ಸ್ನಾಯುಗಳಿಲ್ಲ, ಹೀಗಾಗಿ ಕೆಮ್ಮುವಾಗ ನಿಮ್ಮ ಪಕ್ಕೆಲುಬುಗಳು ಮುರಿತಕ್ಕೆ ಒಳಗಾಗುವುದು ಸುಲಭ ಎಂದು ವೈದ್ಯರು ತಿಳಿಸಿದ್ದಾರೆ.

    ಮಹಿಳೆ ತನ್ನ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಸ್ನಾಯುವನ್ನು ಬಲಪಡಿಸಲು ಮತ್ತು ದೇಹದ ತೂಕವನ್ನು ಹೆಚ್ಚಿಸಲು ದೈಹಿಕ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. (ಏಜೆನ್ಸೀಸ್​)

    ಇಂದಿನಿಂದ ವಿಜಯಾನಂದ ಹಬ್ಬ; ವಿಶ್ವಾದ್ಯಂತ 1300ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಬಿಡುಗಡೆ

    ‘ಸಿರಿ’ ಸಂಭ್ರಮದ ವಿಜಯಾನಂದ; ಶ್ರೀಮತಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್

    ಉದ್ಯಮಿ ವಿರುದ್ಧವೇ ಬಾಣ ತಿರುಗಿಸಿದ ಯೂಟ್ಯೂಬ್​ ಸುಂದರಿ: ನೈಟ್​ ಪಾರ್ಟಿಯ ರಹಸ್ಯ ಬಿಚ್ಚಿಟ್ಟ ನಮ್ರಾ!

    ರಾಜ್ಯ ಬಿಜೆಪಿಯಲ್ಲಿ ಉತ್ಸಾಹ; ಕಾಂಗ್ರೆಸ್​ಗೆ ಹಿಮಾಚಲ ಸಮಾಧಾನ, ಎಲ್ಲ ಪಕ್ಷಗಳಿಗೂ ಸಂದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts