ವಿಶ್ವದ ವೇಗವಾದ ರೀಚಾರ್ಜ್ ಬ್ಯಾಟರಿ ಅಭಿವೃದ್ಧಿಪಡಿಸಿದ ಚೀನಾ..ಹತ್ತೂವರೆ ನಿಮಿಷದಲ್ಲೇ ಚಾರ್ಜ್​!

car
Published on

ಬೀಜಿಂಗ್: ವಿಶ್ವದಲ್ಲೇ ಅತಿ ವೇಗವಾಗಿ ರೀಚಾರ್ಜ್ ಮಾಡಬಹುದಾದ ಬ್ಯಾಟರಿಯನ್ನು ಚೀನಾದ ಜೀಕ್ರ್ ಕಂಪನಿ ಅಭಿವೃದ್ಧಿಪಡಿಸಿದೆ. ಪ್ರಸ್ತುತ ಉದ್ಯಮದ ಕಿಂಗ್​ ಎನಿಸಿರುವ ಟೆಸ್ಲಾಗಿಂತ ಜೀಕ್​ ಬ್ಯಾಟರಿಗಳು ವೇಗವಾಗಿ ಚಾರ್ಜ್ ಆಗುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ.

ಕೇವಲ ಹತ್ತೂವರೆ ನಿಮಿಷದಲ್ಲಿ ನವೀಕರಿಸಿದ ಬ್ಯಾಟರಿಗಳು ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಆಗುತ್ತವೆ. ಮೈನಸ್ 10 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಬ್ಯಾಟರಿಗಳು ಕಾರ್ಯನಿರ್ವಹಿಸುತ್ತವೆ ಎಂದು ಸಂಸ್ಥೆ ಹೇಳಿದೆ. ಟೆಸ್ಲಾದ ಮಾಡೆಲ್ 3 ರಲ್ಲಿ ಬಳಸಲಾದ ಬ್ಯಾಟರಿಗಳು 15 ನಿಮಿಷ ತೆಗೆದುಕೊಳ್ಳುತ್ತವೆ ಎನ್ನಲಾಗಿದೆ. ಈ ಬ್ಯಾಟರಿ ಒಮ್ಮೆ ಚಾರ್ಜಿಂಗ್​ ಆದರೆ 282 ಕಿಮೀ ಚಲಿಸಬಹುದಾಗಿದೆ ಎಂದು ಜೀಕ್ರ್ ಸಂಸ್ಥೆ ಹೇಳಿದೆ.

ಹೊಸ 2025 ಜೀಕ್ರ್​ 007 ಸೆಡಾನ್ ಮುಂದಿನ ವಾರದಿಂದ ಲಭ್ಯವಿರುತ್ತದೆ. ಈ ಹೊಸ ತಾಂತ್ರಿಕತೆ ಅಳವಡಿಸಲಾಗಿದೆ. ಇದು ವೇಗವಾಗಿ ಚಾರ್ಜ್ ಮಾಡಲು ಸಾಧ್ಯವಾಗದಿದ್ದರೂ, ವೇಗವಾದವುಗಳಲ್ಲಿ ಒಂದಾಗಿರುವುದು ಅದ್ಭುತವಾಗಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net