China| ಕೊಳಚೆ ನೀರಿನ ಪೈಪ್ ಸ್ಫೋಟ.. ಜನರ ಮೈಮೇಲೆ ಬಿದ್ದ ಕೊಳಚೆ ನೀರು!

chaina
ಪೈಪ್​ ಸ್ಫೋಟ
Published on

ಬೀಜಿಂಗ್: ಚೀನಾ(China)ದಲ್ಲಿ ಕೊಳಚೆ ನೀರಿನ ಪೈಪ್ ಲೈನ್ ಸ್ಫೋಟಗೊಂಡಿದ್ದು, ಜನ ಬೆಚ್ಚಿಬಿದ್ದಿದ್ದಾರೆ. 33 ಅಡಿ ಎತ್ತರದವರೆಗೆ ಕೊಳಚೆ ನೀರು ಚಿಮ್ಮಿದೆ. ಇದೇ ಸಂದರ್ಭದಲ್ಲಿ ಪೈಪ್​ಲೈನ್​ ಸಮೀಪದ ರಸ್ತೆಯಲ್ಲಿ ಹೋಗುತ್ತಿದ್ದ ಜನರ ಮೇಲೆ ಕಲುಷಿತ ನೀರು ಬಿದ್ದಿದೆ. ಇದರಿಂದ ದುರ್ವಾಸನೆ ತಾಳದೆ ಜನರು ಎದ್ದೆನೋ, ಬಿದ್ದೆನೋ ಎಂದು ಓಡಿಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ವೈರಲ್ ಆಗಿವೆ.

ಚೀನಾದ ನಾನಿಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಹೊಸ ಒಳಚರಂಡಿ ಪೈಪ್ ಹಾಕಲಾಗಿದೆ. ಪೈಪ್‌ನಲ್ಲಿನ ಒತ್ತಡವನ್ನು ಪತ್ತೆಹಚ್ಚಲು ನಿರ್ಮಾಣ ಸಿಬ್ಬಂದಿ ಮುಂದಾದಾಗ, ಪೈಪ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ.

ಒಮ್ಮೆ ಪೈಪ್ ಒಡೆದ ನಂತರ ಕೊಳಚೆ ನೀರು ಮತ್ತು ಮಾನವ ತ್ಯಾಜ್ಯವು 33 ಅಡಿಗಳವರೆಗೆ ಹಾರಿಹೋಗಿದೆ. ಅಲ್ಲಿದ್ದ ಪಾದಚಾರಿಗಳು ಹಾಗೂ ವಾಹನ ಸವಾರರ ಮೇಲೆ ಬಿದ್ದಿದ್ದರಿಂದ ಎಲ್ಲರೂ ತೊಯ್ದು ಹೋಗಿದ್ದಾರೆ. ಅಷ್ಟೇ ಅಲ್ಲ, ಅಲ್ಲಿಂದ ಓಡಿಹೋಗಿದ್ದಾರೆ.

ಯಾರಿಗೂ ಗಾಯಗಳಾ:China

ಇಷ್ಟು ದೊಡ್ಡ ಪ್ರಮಾಣದಲ್ಲಿ ಪೈಪ್ ಸ್ಫೋಟಗೊಂಡಿದ್ದರೂ, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಆದರೆ, ಕೆಲವು ವಾಹನಗಳು ಧ್ವಂಸಗೊಂಡಿವೆ. ಘಟನೆಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ಕೊಳಚೆಯಿಂದ ತುಂಬಿದ್ದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಆದರೆ, ಇದರ ವೀಡಿಯೋ ನೋಡಿದ ನೆಟ್ಟಿಗರು ಪರಿಸ್ಥಿತಿ ಸುಧಾರಿಸುವುದು ಯಾವಾಗ? ಜನ ತೆರಿಗೆ ಹಣ ಕಟ್ಟಿದ್ದಲ್ಲದೆ, ಕೊಳಚೆ ನೀರಿನ ಸ್ನಾನ ಮಾಡಬೇಕೇ ಎಂದು ಕಾಮೆಂಟ್ಸ್​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net