ಚೀನಾ: ಇಂಟರ್ನೆಟ್ ಇಂದು ಎಷ್ಟು ಮುಖ್ಯ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ನಾವು ಇಂಟರ್ನೆಟ್ಗೆ ಎಷ್ಟು ಒಗ್ಗಿಕೊಂಡಿದ್ದೇವೆ ಎಂದರೆ ಪ್ರತಿಯೊಂದು ಸಂಗತಿಗಳನ್ನು ನಾವು ಸರ್ಚೆ ಮಾಡಿನೆ ತಿಳಿದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಂಟರ್ನೆಟ್ ಇಲ್ಲದೆ ಒಂದು ದಿನವೂ ಇರಲು ಸಾಧ್ಯವಾಗದೆ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಇಂಟರ್ನೆಟ್ ವೇಗ ಕೂಡಾ ಮುಖ್ಯವಾಗಿರುತ್ತದೆ. ಹೀಗೆ ಟೆಕ್ನಾಲಜಿಯಲ್ಲಿ ಹೊಸ ಪ್ರಯತ್ನಗಳ ಮೂಲಕವಾಗಿ ಸತತವಾಗಿ ಮುಂದೆ ಇರುವ ಚೀನಾ ಇದೀಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ.
ಭಾರತದಲ್ಲಿ ಇಂಟರ್ನೆಟ್, ಡೇಟಾ ಸೇವೆಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ. ದೇಶದ ಮೂಲೆ ಮೂಲೆಯಲ್ಲಿ 4ಜಿ ಹಾಗೂ 5ಜಿ ಸೇವೆ ಸಿಗುತ್ತಿದೆ. ಇನ್ನು ಕಡಿಮೆ ಬೆಲೆಗೆ ಭಾರತದಲ್ಲಿ ಡೇಟಾ ಸೇವೆಗಳು ಸಿಗುತ್ತಿದೆ. ಚೀನಾದಲ್ಲಿ ಆರಂಭಿಸಲಾಗಿರುವ ಅತೀವೇಗದ ಇಂಟರ್ನೆಟ್ ಸೇವೆ ಭಾರತಕ್ಕೆ ಕಾಲಿಡಲು ಹೆಚ್ಚು ದಿನ ಬೇಕಿಲ್ಲ ಎನ್ನಲಾಗುತ್ತಿದೆ.
ಚೀನಾದಲ್ಲಿ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಸೇವೆ: ಚೀನಾದ ಫಾಸೆಸ್ಟ್ ಇಂಟರ್ನೆಟ್ ಸೇವೆ ಪ್ರತಿ ಸೆಕೆಂಡ್‌ಗೆ 1.3 ಟೆರಾಬಿಟ್ ಡೇಟಾ ರವಾನಿಸಲು ಸಾಧ್ಯ. ಸಿಂಗ್ವಾ ವಿಶ್ವವಿದ್ಯಾಲಯ, ಹುವೈ ಚೀನಾ ಮೊಬೈಲ್ ಟೆಕ್ನಾಲಜಿ ಸಹಯೋಗದಲ್ಲಿ ಈ ಫಾಸ್ಟೆಸ್ಟ್ ಇಂಟರ್ನೆಟ್ ಸೇವೆ ಆರಂಭಿಸಲಾಗಿದೆ. ಈ ವೇಗವು ಪ್ರಸ್ತುತ ಪ್ರಮುಖ ಇಂಟರ್ನೆಟ್ ರೂಟ್ಗಳಿಗಿಂತ ಹತ್ತು ಪಟ್ಟು ಹೆಚ್ಚು ವೇಗವಾಗಿದೆ ಎಂದು ಹೇಳಲಾಗುತ್ತದೆ. ಚೀನಾದಲ್ಲಿ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಸೇವೆ ಆರಂಭಿಸಿದೆ. ಒಂದು ಸೆಕೆಂಡ್‌ನಲ್ಲಿ ಬರೋಬ್ಬರಿ 150 ಮೂವಿಗಳನ್ನು ಒಟ್ಟಿಗೆ ಡೌನ್ಲೋಡ್ ಮಾಡುವ ಸಾಮರ್ಥ್ಯ ಈ ಇಂಟರ್ನೆಟ್‌ಗಿದೆ.
ಹುವಾವೇ ಟೆಕ್ನಾಲಜೀಸ್ ಉಪಾಧ್ಯಕ್ಷ ವಾಂಗ್ ಲೀ ಅವರು “ಕೇವಲ ಒಂದು ಸೆಕೆಂಡಿನಲ್ಲಿ 150 ಹೈ-ಡೆಫಿನಿಷನ್ ಫಿಲ್ಮ್‌ಗಳಿಗೆ ಸಮಾನವಾದ ಡೇಟಾವನ್ನು ವರ್ಗಾಯಿಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ವಿವರಿಸಿದರು
ಬೀಜಿಂಗ್, ವುಹಾನ್, ಗೌಂಝೋ ಸೇರಿದಂತೆ ಪ್ರಮುಖ ನಗರಗಳಲ್ಲಿ ಮೊದಲ ಹಂತವಾಗಿ ಈ ಸೇವೆ ಲಭ್ಯವಿದೆ. ಶೀಘ್ರದಲ್ಲೇ ಚೀನಾದ ಎಲ್ಲಾ ನಗರ ಹಾಗೂ ಇತರ ಪ್ರದೇಶಗಳಿಗೆ ವಿಸ್ತರಣೆಗೊಳ್ಳಲಿದೆ.
ಶೀಘ್ರದಲ್ಲೇ ಭಾರತದಲ್ಲೂ ವಿಶ್ವದ ಅತೀವೇಗದ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ. ಇದೀಗದೇಶದ ಅತ್ಯಂತ ಕುಗ್ರಾಮಗಳಿಗೂ ಅತ್ಯಂತ ವೇಗದ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ. ಹೀಗಾಗಿ ಸ್ಟಾರ್ ಲಿಂಕ್ ಪ್ರವೇಶ ಜಿಯೋ, ಏರ್‌ಟಲ್, ಐಡಿಯಾ, ಬಿಎಸ್‌ಎನ್‌ಎಲ್‌ಗೆ ತೀವ್ರ ಸ್ಪರ್ಧೆ ನೀಡುವ ಸಾಧ್ಯತೆ ಇದೆ.