

ಬಂಟ್ವಾಳ: ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕ ವತಿಯಿಂದ 18ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ ಶಂಭೂರು ಶಾಲೆ ಸಹಭಾಗಿತ್ವದಲ್ಲಿ ನಡೆಯಲಿರುವುದು. ಈ ಸಂದರ್ಭ ತಾಲೂಕುಮಟ್ಟದ ಬಾಲಬಂಧು ಪುರಸ್ಕಾರವನ್ನು, ತಾಲೂಕಿನಲ್ಲಿ 18 ವರ್ಷ ಪ್ರಾಯದೊಳಗಿನ ಮಕ್ಕಳಿರುವ ಸರ್ಕಾರಿ, ಅನುದಾನಿತ, ಅನುದಾನರಹಿತ ವಿದ್ಯಾಸಂಸ್ಥೆಗಳಲ್ಲಿ ಐದು ವರ್ಷಗಳ ಈಚೆಗೆ ಮಕ್ಕಳಿಗಾಗಿ ಸಾಹಿತ್ಯ ಹಾಗೂ ವಿವಿಧ ಕಲೆಗಳಲ್ಲಿ ಸಹಕರಿಸುತ್ತಿರುವ ಶಿಕ್ಷಕರು ಅಥವಾ ಸಾರ್ವಜನಿಕ ಕಲಾಗಾರರೊಬ್ಬರಿಗೆ ನೀಡಲಾಗುತ್ತದೆ. ಐದು ವರ್ಷಗಳ ಈಚೆಗೆ ಸಾಹಿತ್ಯಾದಿ ಕಲೆಗಳಲ್ಲಿ ಅತ್ಯುತ್ತಮವಾಗಿ ತೊಡಗಿಸಿಕೊಂಡ ಸರ್ಕಾರಿ, ಅನುದಾನಿತ ಯಾ ಅನುದಾನ ರಹಿತ ಒಂದು ಶಾಲೆಗೆ ಸಾಹಿತ್ಯ ತಾರೆ ಪ್ರಶಸ್ತಿ ನೀಡಲಾಗುವುದು. ಎರಡೂ ವಿವರಗಳನ್ನು ಬರೆದು 2024 ಅಕ್ಟೋಬರ್ 31ರೊಳಗೆ ರಮೇಶ ಎಂ.ಬಾಯಾರು, ಅಧ್ಯಕ್ಷರು, ಮಕ್ಕಳ ಕಲಾ ಲೋಕ- ಸ್ಕಂದ-ಅಳಕೆ ಮಜಲು 574243ಗೆ ತಲುಪಿಸಬೇಕು. 9448626093 ಸಂಪರ್ಕಿಸಬಹುದು.