

ಬೆಂಗಳೂರು: ಪಾಲನೆ ಮತ್ತು ರಕ್ಷಣೆ ಅವಶ್ಯಕತೆ ಇರುವ ಮಕ್ಕಳು ಸೇರಿ ಎಲ್ಲ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸುವ 24/7 ಉಚಿತ ಮಕ್ಕಳ ಸಹಾಯವಾಣಿ 1098 ಕುರಿತು ಅರಿವು ಮೂಡಿಸಲು ಶಾಲಾ ಕಟ್ಟಡಗಳ ಗೋಡೆಗಳ ಮೇಲೆ ಬರಹಗಳನ್ನು ಪ್ರಕಟಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.
ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ಸೂಕ್ತ ಸ್ಥಳಗಳಲ್ಲಿ ಗೋಡೆ ಬರಹ ಬರೆಸುವುದು. ಎಲ್ಲ ಶಾಲೆಗಳ ವೆಬ್‌ಸೈಟ್‌ನಲ್ಲಿ 1098 ಕುರಿತು ಮಾಹಿತಿ ಪ್ರಕಟಿಸುವುದು ಮತ್ತು ಬೆಳಗಿನ ಶಾಲಾ ಅಸೆಂಬ್ಲಿ ಪ್ರಾರ್ಥನೆ ಸಮಯದಲ್ಲಿ ಮಕ್ಕಳಿಗೆ 1098 ಮಾಹಿತಿ ನೀಡಲು ಮಕ್ಕಳಿಗಾಗಿ ಸಿದ್ಧಪಡಿಸಿರುವ ಎಲ್ಲ ಪುಸ್ತಕ ಹಾಗೂ ನೊಟ್ ಪುಸ್ತಕಗಳ ಮೇಲೆ 1098 ಸೀಲ್ ಹಾಖಿ ವ್ಯಾಪಕ ಪ್ರಚಾರ ಮಾಡಲು ಸರ್ಕಾರಿ, ಖಾಸಗಿ ಶಾಲಾ ಮುಖ್ಯ ಶಿಕ್ಷಕರಿಗೆ ಸೂಕ್ತ ಕ್ರಮ ವಹಿಸಲು ನಿರ್ದೇಶನ ನೀಡಲು ಸೂಚಿಸಲಾಗಿದೆ.