ಆಹಾರದಿಂದ ರೂಪುಗೊಳ್ಳುತ್ತದೆ ಮಕ್ಕಳ ಸ್ವಭಾವ: ಡಾ. ಸೋಫಿಯಾ ಅವಿನಾಶ್ ಮಾಹಿತಿ

Bdk_Food
Published on

ಕಾಸರಗೋಡು: ಮಕ್ಕಳ ಸಾಮರ್ಥವನ್ನು ಗುರುತಿಸಿ ಬೆಳೆಸುವಲ್ಲಿ ಪಾಲಕರ ಪಾತ್ರ ಮಹತ್ತರವಾದುದು. ಮಕ್ಕಳಿಗೆ ಕೊಡುವ ಆಹಾರ ಅವರ ಬೆಳವಣಿಗೆಗೆ ಮತ್ತು ಸ್ವಭಾವವನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಆಯುರ್ವೇದ ಹಾಗೂ ಪೌಷ್ಟಿಕ ತಜ್ಞ ಡಾ. ಸೋಫಿಯಾ ಅವಿನಾಶ್ ತಿಳಿಸಿದರು. ಶುಕ್ರವಾರ ಕಾಸರಗೋಡು ಚಿನ್ಮಯ ವಿದ್ಯಾಲಯದ ಕಿಂಡರ್ ಗಾರ್ಟನ್ ದಿನ ಉದ್ಘಾಟಿಸಿ ಮಾತನಾಡಿದರು.

ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆ ಅಡಗಿರುತ್ತದೆ. ಅದನ್ನು ನಿರ್ಲಕ್ಷಿಸದೆ ಗುರುತಿಸಿ ಪೋಷಿಸಬೇಕಾದದು ಪಾಲಕರ ಕರ್ತವ್ಯ ಎಂದರು.

ಪ್ರಾಂಶುಪಾಲ ಸುನೀಲ್ ಕುಮಾರ್ ಕೆ.ಸಿ, ಉಪಪ್ರಾಂಶುಪಾಲ ಪ್ರಶಾಂತ ಬಿ, ಬ್ರಹ್ಮಚಾರಿಣಿ ದಿಶಾ ಚೈತನ್ಯ, ಮುಖ್ಯಶಿಕ್ಷಕಿಯರಾದ ಪೂರ್ಣಿಮಾ ಎಸ್. ಆರ್ ಮತ್ತು ಸಿಂಧು ಶಶೀಂದ್ರನ್ ಉಪಸ್ಥಿತರಿದ್ದರು. ಯು.ಕೆ.ಜಿ ವಿದ್ಯಾರ್ಥಿನಿಯರಾದ ವರದ ಎನ್.ಬಿನು ಸ್ವಾಗತಿಸಿ, ಫಾತಿಮಾ ಜೆನಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net