ಕೊಳೆತ ಹೆಣ ತೆಗೆಯಲು ಮಕ್ಕಳ ಬಳಕೆ- ಕ್ಯಾಮೆರಾದಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ!

hena-makkalu
Published on

ಲಖನೌ: ಕಾಲುವೆಯಲ್ಲಿ ಬಿದ್ದಿರುವ ಕೊಳೆತ ಹೆಣವನ್ನು ತೆಗೆಯುವ ಸಲುವಾಗಿ ಪೊಲೀಸರು ಮಕ್ಕಳನ್ನು ಬಳಕೆ ಮಾಡಿರುವ ಅಮಾನವೀಯ ಹಾಗೂ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖನೌದ ಬುಲಂದ್‌ಶಹರ್‌ನಲ್ಲಿ ನಡೆದಿದೆ.

ನಗರದ ಪೊಲೀಸರು ಅಪ್ರಾಪ್ತ ಮಕ್ಕಳನ್ನು ಹೆಣ ತೆಗೆಯುವಂತೆ ಒತ್ತಾಯಿಸಿ ಅವರನ್ನು ಕೆಲಸಕ್ಕೆ ಬಳಸಿಕೊಂಡಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಅದನ್ನು ವೈರಲ್‌ ಮಾಡಿದ್ದಾರೆ. ವಾಲಿಪುರ ಗ್ಯಾಂಗ್‌ನಹಾರ್‌ನಲ್ಲಿ ಈ ಘಟನೆ ನಡೆದಿದೆ.

ಕಾಲುವೆಯಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾದಿಯಲ್ಲಿ ಹೋಗುತ್ತಿರುವ ಮಕ್ಕಳನ್ನು ಕರೆದು ಅದನ್ನು ತೆಗೆಯುವಂತೆ ಹೇಳಿದ್ದಾರೆ. ಈ ಮಕ್ಕಳು ಹಗ್ಗ ಮತ್ತು ಬಿದಿರಿನ ಕೋಲುಗಳಿಂದ ದೇಹವನ್ನು ಎಳೆಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅದನ್ನು ವೈರಲ್‌ ಮಾಡಿದ ಬಳಿಕವಷ್ಟೇ ವಿಷಯ ಬೆಳಕಿಗೆ ಬಂದಿದೆ.

ಈ ಫೋಟೋ ವೈರಲ್‌ ಆಗುತ್ತಿದ್ದಂತೆಯೇ ಬುಲಂದ್‌ಶಹರ್ ಪೊಲೀಸ್ ವರಿಷ್ಠಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ಆರೋಪಿ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್‌ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಸರ್ಕಲ್ ಆಫೀಸರ್ (ಸಿಒ) ನೇತೃತ್ವದ ತನಿಖೆಗೆ ಆದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net