ಮಕ್ಕಳಿಗೆ ಸಂಸ್ಕಾರ, ಮೌಲ್ಯಯುತ ಶಿಕ್ಷಣ ಅಗತ್ಯ

arivu neravu
arivu neravu
Published on

ಕೋಟ: ಮಕ್ಕಳನ್ನು ಮೊಬೈಲ್ ವ್ಯಾಮೂಹದಿಂದ ದೂರ ಇರಿಸಬೇಕು. ಪ್ರಸ್ತುತ ಕಾಲದಲ್ಲಿ ಮಕ್ಕಳಿಗೆ ಮೌಲ್ಯಯುತ ಸಂಸ್ಕಾರ ನೀಡಿ, ಸಂಬಂಧಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂದು ಪತ್ರಕರ್ತೆ ಅಕ್ಷತಾ ಗಿರೀಶ್ ಹೇಳಿದರು.

ಕೋಟ ಹಂದಟ್ಟು ಹಾಲು ಡೈರಿ ಸಭಾಂಗಣದಲ್ಲಿ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಶನಿವಾರ ನಡೆದ ಅರಿವು ನಿಮಗಿರಲಿ ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಂದಟ್ಟು ಹಾಲು ಉತ್ಪಾದಕರ ಸಂ ಅಧ್ಯಕ್ಷೆ ಜಾನಕಿ ಹಂದೆ ಉದ್ಘಾಟಿಸಿದರು. ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೆಎಂಎಫ್ ವಿಸ್ತೀರ್ಣಾಧಿಕಾರಿ ಸರಸ್ವತಿ ಸಂದ ಚಟುವಟಿಕೆ ಹಾಗೂ ಕಾರ್ಯವೈಖರಿ ಕುರಿತು ಪ್ರಶಂಸಿದರು. ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲ ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net