ಮಕ್ಕಳು ನನ್ನ ರೀತಿ ಬೆಳೆಯುತ್ತಿಲ್ಲವೆಂದು ಹೆತ್ತ ಕರುಳನ್ನೇ ಕತ್ತುಹಿಸುಕಿ ಕೊಲೆಗೈದ ಪಾಪಿ ತಂದೆ

Children Murder
Published on

ಬೆಂಗಳೂರು: ಮಕ್ಕಳು ನನ್ನ ರೀತಿ ಬೆಳೆಯುತ್ತಿಲ್ಲ, ಅವರ ಅಮ್ಮನ ರೀತಿ ಬೆಳೆಯುತ್ತಿವೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ದಾರುಣ ಘಟನೆ ಅಕ್ಷಯನಗರದ ಹನಿ ಡಿವ್​ ಅಪಾರ್ಟ್ಮೆಂಟ್​ನಲ್ಲಿ ನಡೆದಿದೆ ಎನ್ನಲಾಗಿದೆ.

ತೌಶಿನಿ( 3), ಶಾಸ್ತಾ(1.5) ಮೃತ ಕಂದಮ್ಮಗಳು. ಮಕ್ಕಳು ನನ್ನ ರೀತಿ ಬೆಳೆಯುತ್ತಿಲ್ಲ. ಇಂತಹ ಮಕ್ಕಳು ನನಗೆ ಬೇಡ್ವೇ ಬೇಡ ಎಂಬ ಕ್ಷುಲ್ಲಕ ಕಾರಣಕ್ಕೆ ಆರೋಪಿ ತಂದೆ ಜತಿನ್​(35) ಮಕ್ಕಳ ಕತ್ತುಹಿಸುಕಿ ಕೊಲೆಗೈದಿದ್ದಾನೆ.

ಕೇರಳ ಮೂಲದ ಜತಿನ್, ತಮಿಳುನಾಡು ಮೂಲದ ಲಕ್ಷ್ಮಿಶಂಕರಿಯೊಂದಿಗೆ ಪ್ರೀತಿಸಿ ಮದುವೆಯಾಗಿದ್ದ. ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಇದೇ ವಿಚಾರವಾಗಿ ಗಂಡ ಮತ್ತು ಹೆಂಡತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ನಿನ್ನೆ ರಾತ್ರಿ 9.30 ಕ್ಕೆ ಏಕಾಏಕಿ ಮಕ್ಕಳ ಮೇಲೆ ಪಾಪಿ ತಂದೆ ಕ್ರೌರ್ಯ ಮೆರೆದಿದ್ದಾನೆ.

ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net