ಮೂರೂವರೆ ವರ್ಷದ ಬಾಲಕಿ ಮೇಲೆ ಶಿಕ್ಷಕನಿಂದ ಅತ್ಯಾಚಾರ; ಆರೋಪಿ ಬಂಧನ

arrest
Published on

ಭೋಪಾಲ್: ಖಾಸಗಿ ಶಾಲೆಯೊಂದರಲ್ಲಿ ಮೂರೂವರೆ ವರ್ಷದ ಬಾಲಕಿ ಮೇಲೆ ಶಿಕ್ಷಕನೇ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದು, ಆರೋಪಿ ಶಿಕ್ಷಕನನನ್ನು ಬಂಧಿಸಲಾಗಿದೆ.

ಶಾಲೆಯ ಕಂಪ್ಯೂಟರ್ ಶಿಕ್ಷಕ ಕಾಸಿಂ ರೆಹಾನ್‌ ಎಂಬಾತ ಆರೋಪಿಯಾಗಿದ್ದು, ಶಿಕ್ಷಕನನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ ತಡೆ ಕಾಯ್ದೆಯಡಿ ಬಂಧಿಸಲಾಗಿದೆ. ಘಟನೆಯ ನಂತರ ಶಾಲೆಗೆ ಬೀಗ ಹಾಕಲಾಗಿದೆ. ಶಾಲೆಯ ಮಾನ್ಯತೆ ರದ್ದುಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಯೋಜನಾ ಸಂಯೋಜಕರು ಶಾಲೆಗೆ ನೋಟಿಸ್ ನೀಡಿದ್ದು, ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಘಟನೆ ಕುರಿತು ಸೂಕ್ತ ಚರ್ಚೆಯ ಬಳಿಕ ಶಾಲೆಯ ಮಾನ್ಯತೆಯನ್ನು ರದ್ದುಪಡಿಸಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಎನ್‌ಕೆ ಅಹಿರ್ವಾರ್ ಪಿಟಿಐಗೆ ತಿಳಿಸಿದರು.

ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಆಕೆಯ ತಾಯಿ ಶಾಲೆಯ ಆಡಳಿತ ಮಂಡಳಿಗೆ ಸೋಮವಾರ ದೂರು ನೀಡಿದ್ದರಾದರೂ ಅದನ್ನು ನಿರ್ಲಕ್ಷಿಸಲಾಗಿತ್ತು. ಬಳಿಕ ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಯನ್ನು ಅತ್ಯಾಚಾರಕ್ಕೊಳಗಾದ ಮೂರವರೆ ವರ್ಷದ ಕಂದಮ್ಮ ‘ಡ್ಯಾಡಿ ಅಂಕಲ್’ ಎಂದು ಕರೆಯುತ್ತಿದ್ದಳು. 28 ವರ್ಷದ ಆರೋಪಿ ಶಿಕ್ಷಕ ನೀಲಿಚಿತ್ರ ವ್ಯಸನಿಯಾಗಿದ್ದ. ಅಘಾತಕ್ಕಾರಿ ಸಂಗತಿ ಎಂದರೆ ಆರೋಪಿ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸೆಗುವ ಮುನ್ನ ಶಾಲೆಯ ಶೌಚಾಲಯದಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ಎನ್ನಲಾಗಿದೆ. ಆರೋಪಿ ಬಳಿ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಜಾರ್ಖಂಡ್‌ನಲ್ಲಿ ವಿದೇಶಿ ಪ್ರಜೆಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ನಡೆದ ಮೆರವಣಿಗೆಯಲ್ಲಿ ಈತ ಭಾಗವಹಿಸಿದ್ದ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net