ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ರಾಜ್ಯದಲ್ಲಿ ಒಂದರಿಂದ ಐದನೇ ಸ್ಥಾನ ಗಳಿಸುವ ನಿರೀಕ್ಷೆ

SSLC-Press-Meet-3.jpeg
Published on


ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾ.21 ರಿಂದ ಏ.4 ರವರೆಗೆ ನಡೆಯುತ್ತಿದ್ದು ಜಿಲ್ಲೆಯಲ್ಲಿ 53 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ‌‌ ದಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಹೊಸದಾಗಿ 15,763 ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ 727 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. 


* ಸಿಸಿ ಕ್ಯಾಮೆರಾ ನಿಗಾ  
ಜಿಲ್ಲೆಯಲ್ಲಿ ಗುರುತಿಸಲಾದ 53 ಪರೀಕ್ಷಾ ಕೇಂದ್ರಗಳಲ್ಲಿನ ಕೊಠಡಿಗಳು, ಕಚೇರಿ ಹಾಗೂ ಕಾರಿಡಾರ್ ಗಳಲ್ಲಿ ಅಕ್ರಮ, ಅವ್ಯವಹಾರಗಳಿಗೆ ಎಡೆ ಮಾಡಿಕೊಡದಿರಲು ಸಿಸಿ ಕ್ಯಾಮೆರಾ ನಿಗಾದ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಇದೆ. ಹಾಗೆಯೇ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಎಲ್ಲ ಕೇಂದ್ರಗಳ ಸಿಸಿ ಕ್ಯಾಮೆರಾ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ.

*1 ರಿಂದ 5 ನೇ ಸ್ಥಾನದ ಸಾಧನೆ ನಿರೀಕ್ಷೆ
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಚಿಕ್ಕಬಳ್ಳಾಪುರವು ರಾಜ್ಯದಲ್ಲಿ ಜಿಲ್ಲಾವಾರು 1 ರಿಂದ 5 ನೇ ಸ್ಥಾನ ಪಡೆಯುವ ನಿರೀೆಯನ್ನು ಹೊಂದಲಾಗಿದೆ ಎಂದು ಜಿಲ್ಲಾದಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ಹಿಂದೆ ಜಿಲ್ಲೆಯು ಪ್ರಥಮ, ದ್ವೀತಿಯ ಸ್ಥಾನ ಗಳಿಕೆಯ ಸಾಧನೆ ತೋರಿದೆ. ಕಳೆದ ಬಾರಿ 11 ನೇ ಸ್ಥಾನ ಪಡೆದಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಕಾಲ ಕಾಲಕ್ಕೆ ಉತ್ತಮ ಮಾರ್ಗದರ್ಶನ, ನ್ಯೂನತೆಗಳ ಪರಿಹಾರ, ಕಲಿಕಾ ಸಾಮಗ್ರಿಗಳ ವಿತರಣೆ, ಮುಖ್ಯ ಶಿಕ್ಷಕರ ಸಭೆಯ ಮೂಲಕ ಶಿಕ್ಷಕರ ಬೋಧನೆಯ ಕೌಶಲ ವೃದ್ಧಿ ಸೇರಿದಂತೆ ಹಲವು ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಯಾವುದೇ ಕಾರಣಕ್ಕೂ ಅಕ್ರಮ, ಅಕ್ರಮ ವ್ಯವಹಾರಗಳಿಗೆ ಅವಕಾಶ ನೀಡುವುದಿಲ್ಲ. ಗುಣಮಟ್ಟದ ಪಾರದರ್ಶಕ ಫಲಿತಾಂಶದೊಂದಿಗೆ ಉತ್ತಮ ಸಾಧನೆ ತೋರುವುದೇ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net