

ಬೆಂಗಳೂರು: ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ, ಆ ದೇಶದ ವಿಜ್ಞಾನ ಕ್ಷೇತ್ರದ ಬೆಳವಣಿಗೆಯಾಗಬೇಕು. ಆ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿಗೆ ವಿಜ್ಞಾನಿಗಳೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಂಯುಕ್ತವಾಗಿ ಆಯೋಜಿಸಿದ್ದ ವಿಜ್ಞಾನಿ ಮತ್ತು ಇಂಜಿನಿಯರ್ಗಳ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಪ್ರಶಸ್ತಿ, ಸನ್ಮಾನಗಳು ಆಯಾ ಕ್ಷೇತ್ರದ ಇತರೆ ಸಾಧಕರನ್ನು ಪ್ರೇರಿಪಿಸುತ್ತವೆ. ವಿಜ್ಞಾನ ಮತ್ತು
ವಿಜ್ಞಾನ ಬೆಳೆಯದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಕರ್ನಾಟಕ ಬಹು ಹಿಂದಿನಿಂದಲೂ ವಿಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಮನ್ನಣೆ ಅದಕ್ಕೆ ಸಾಕ್ಷಿಯಾಗಿದೆ. ಹಿಂದೆಲ್ಲಾ ಬೇರೆ ದೇಶಗಳಿಂದ ಆಹಾರವನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಇಂದು ನಮ್ಮ ದೇಶದಿಂದಲೇ ಆಹಾರವನ್ನು ರ್ತು ಮಾಡುವ ಸ್ಥಿತಿಗೆ ತಲುಪಿದ್ದೇವೆ. 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಆಹಾರ ಸ್ವಾವಲಂಬನೆ ಬಂದಿರುವುದಕ್ಕೆ ಕಾರಣ ವಿಜ್ಞಾನ.
ಅಂತರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ಸಿ.ಎನ್.ಆರ್.ರಾವ್ ಅವರು ಐಐಎಸ್ಸಿ ಸಂಸ್ಥೆಯನ್ನು ಬಹುಕಾಲ ಮುಂದುವರೆಸಿದ್ದಾರೆ. ಅವರ ಬದ್ಧತೆ ಯುವ ವಿಜ್ಞಾನಿಗಳಿಗೆ ಮಾದರಿಯಾಗಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಜನಾಂಗಕ್ಕೆ ಆಸಕ್ತಿ ಬೆಳೆಯಬೇಕು. ಅದರಿಂದ ಹೆಚ್ಚು ವಿಜ್ಞಾನಿಗಳು ನಿರ್ಮಾಣವಾಗುತ್ತಾರೆ. ಅಂತಹ ಪ್ರೇರಣೆ ನೀಡುವಲ್ಲಿ ವಿಜ್ಞಾನಿಗಳು, ಇಂಜಿನಿಯರ್ಸ್ಗಳಿ ಪ್ರಶಸ್ತಿ ನೀಡುವುದು ಕೂಡಾ ಒಂದು ಭಾಗ. ಸಾಕಷ್ಟು ಯುವ ವಿಜ್ಞಾನಿಗಳು ಇಂದು ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಶಸ್ತಿ ಪುರಸ್ಕೃತರಿಂದ ಇನ್ನೂ ಹೆಚ್ಚಿನ ಸಾಧನೆಯಾಗಲಿ ಎಂದು ಸಿಎಂ ಹಾರೈಸಿದರು.
28 ಜನ ಸಾಧಕರಿಗೆ 2022-2023ನೇ ಸಾಲಿನ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್, ಪ್ರಶಸ್ತಿಗಳ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣಕುಮಾರ್, ಐಐಎಸ್ಸಿ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್, ಕೆಎಸ್ಸಿಎಸ್ಟಿ ಕಾರ್ಯದರ್ಶಿ, ಪ್ರೊ.ಅಶೋಕ್ ಎಂ.ರಾಯಚೂರ, ಸರ್ಕಾರದ ಕಾರ್ಯದರ್ಶಿ ಡಾ.ಏಕ್ರೂಪ್ ಕೌರ್ ಮತ್ತಿತರರು ಉಪಸ್ಥಿತರಿದ್ದರು.
ಎನ್.ಎಸ್.ಬೋಸರಾಜು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ
ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಗೆ ಪ್ರೊ.ಯದತಿ ನರಹರಿ, ಪ್ರೊ.ರಾಯಪ್ಪ, ರಾಮಪ್ಪ ಹಂಚಿನಾಳ, ಡಾ.ಶುಭ ವಿ., ಪ್ರೊ.ಮದನ್ ರಾವ್, ಡಾ ರಾಜಾರಾಮಣ್ಣ ಪ್ರಶಸ್ತಿಗೆ ಪ್ರೊ.ಕಾಪೆಟ್ಟು ಸತ್ಯಮೂರ್ತಿ, ಪ್ರೊ.ಪ್ರಭುಗೌಡ ಎಂ.ಪಾಟೀಲ್, ಪ್ರೊ.ಸಿ.ವಿ.ಏಳುಮಗ್ಗದ್, ಪ್ರೊ.ಆರ್.ಎಸ್.ಸೌಧಾಮಿನಿ, ಸರ್.ಸಿ.ವಿ.ರಾಮನ್ ಪ್ರಶಸ್ತಿಗೆ ಪ್ರೊ.ಎ.ಪಿ.ಜ್ಞಾನಪ್ರಕಾಶ, ಪ್ರೊ.ಸತೀಶ ಅಮೃತರಾವ್ ಪಾಟೀಲ್, ಡಾ.ರಾಜೇಶ ಕುಮಾರ್ ಟಿ., ಡಾ.ಮೋಹನ ಸಿ.ಡಿ., ಡಾ.ಸತೀಶ ಬಿ.ಶಿವಚಂದ್ರ, ಪ್ರೊ.ಪ್ರಸನ್ನಕುಮಾರ್ ಬಿ.ಸಿ., ಪ್ರೊ.ನರೇಂದ್ರ ರೆಡ್ಡಿ, ಡಾ.ದ್ವಾರಕನಾಥ ಶ್ರೀನಿವಾಸ, ಪ್ರೊ.ಸಂದೀಪ ಎಂ.ಈಶ್ವರಪ್ಪ, ಡಾ. ಬಸವಪ್ರಭು ಎಲ್.ಪಾಟೀಲ್, ಪ್ರೊ.ಸತೀಶ್ ಧವನ್ ಪ್ರಶಸ್ತಿಗೆ ಡಾ.ಶುಭಾಂಗಿ ದಿಗಂಬರ ಚಿಕ್ಟೆ, ಡಾ.ಹೇಮಂತ ಕುಮಾರ್, ಡಾ.ಜಯಶ್ರೀ ಅಗರಖೇಡ್, ಡಾ.ಮಾದೇವ ನಾಗರಾಜ್, ಡಾ. ಮಾಧವ ರಾವ್, ಡಾ. ಜಯಪ್ರಕಾಶ, ಡಾ.ಅಮರನಾಥ ಹೆಗ್ಡೆ, ಪ್ರೊ.ಶ್ರೀಶಾ ರಾವ್ ಎಂ.ವಿ. ಮತ್ತು ಡಾ.ಕಲ್ಪನಾ ಜಾವ್ಲಾ ಪ್ರಶಸ್ತಿಗೆ ಡಾ.ಪುಷ್ಪ ಎಸ್.ಮೂರ್ತಿ ಹಾಗೂ ಡಾ. ಸಂಧ್ಯಾ ಶೆಣೈ ಯು. ಆಯ್ಕೆಯಾಗಿದ್ದಾರೆ.