ಸಂಡೂರು: ಬಳ್ಳಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಸಾಧನಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ( Siddaramaiah) ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸುವುದರ ಜತೆಗೆ ಪೂರ್ಣಗೊಂಡಿರುವ ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗಳನ್ನು ಸಂಡೂರು ಜನತೆಗೆ ಅರ್ಪಿಸಿದರು.
ಇದನ್ನು ಓದಿ: ಏನಾದರೂ ಸಮಸ್ಯೆಯಾದ್ರೆ ನನ್ನನ್ನು ಕೇಳಿ; ಒಮರ್ ಅಬ್ದುಲ್ಲಾಗೆ ಕೇಜ್ರಿವಾಲ್ ಸಲಹೆ | Politics
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಬೃಹತ್ ಜನಸ್ತೋಮ ಮುಗಿಲು ಮುಟ್ಟುವ ಜಯಘೋಷಗಳ ಜತೆಗೆ ಸ್ವಾಗತಿಸಿತು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಮಾಜಿ ಸಚಿವರೂ ಹಾಗೂ ಸಂಸದರೂ ಆದ ಈ.ತುಕಾರಾಂ, ಶಾಸಕರುಗಳಾದ ಲತಾ ಮಲ್ಲಿಕಾರ್ಜುನ್, ಕಂಪ್ಲಿ ಗಣೇಶ್, ಶ್ರೀನಿವಾಸ್, ನಾಗರಾಜ್, ನಾರಾ ಭರತ್ ರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಮೆಹರೂಜ್ ಖಾನ್, ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್, ಹಿರಿಯ ನಾಯಕರಾದ ಅಲ್ಲಂ ವೀರಭದ್ರಪ್ಪ, ಲಿಡ್ಕರ್ ಅಧ್ಯಕ್ಷರಾದ ನಾಗರಾಜ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
Ratan Tata | ವಜ್ರದಲ್ಲಿ ಮೂಡಿಬಂದ ಧೀಮಂತ ನಾಯಕನ ಭಾವಚಿತ್ರ; ವಿಡಿಯೋಗೆ 5 ಮಿಲಿಯನ್ಗೂ ಹೆಚ್ಚು ಜನರ ಮೆಚ್ಚುಗೆ