ಮಾಂಸಪ್ರಿಯರಿಗೆ ಆಘಾತ! ದಿನದಿಂದ ದಿನಕ್ಕೆ ಗಗನಮುಖಿಯಾಗ್ತಿದೆ ಚಿಕನ್, ಇಂದಿನ ಬೆಲೆ ಕೇಳಿದ್ರೆ ಸುಸ್ತಾಗ್ತೀರಾ ​​

chickens
Published on

ನವದೆಹಲಿ: ದೇಶಾದ್ಯಂತ ಚಿಕನ್​ ಬೆಲೆ ದಿನದಿಂದ ದಿನಕ್ಕೆ ಗಗನಮುಖಿ ಆಗುತ್ತಿದೆ. ಒಂದು ಕೆಜಿ ಚಿಕನ್​ಗೆ 250 ರಿಂದ 270 ರೂಪಾಯಿ ಇದೆ. ಇಂಧನ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಈಗಾಗಲೇ ಜನರು ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ಚಿಕನ್​ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿರುವುದು ಮಾಂಸಪ್ರಿಯರಿಗೆ ಆಘಾತವಾಗಿದೆ.

ಲಾಕ್​ಡೌನ್​ಗೂ ಮುಂಚೆ ಒಂದು ಕೆಜಿ ಚಿಕನ್​ ಬೆಲೆ 120 ರೂಪಾಯಿ ಇತ್ತು. ಮೇ ತಿಂಗಳಲ್ಲಿ ಚಿಕನ್​ ಬೆಲೆ 160 ರಿಂದ 180ಕ್ಕೆ ಏರಿಕೆಯಾಗಿದೆ. ಅಂದಿನಿಂದ ಏರಿಕೆ ಕಾಣುತ್ತಲೇ ಇದೆ. ಜೂನ್​ನಲ್ಲಿ ಚಿಕನ್​ ಬೆಲೆ ಗರಿಷ್ಠ 200 ರೂ. ಮುಟ್ಟಿದೆ. ಆದರೆ, ಜುಲೈನಲ್ಲಿ ಅದರ ಬೆಲೆಯಲ್ಲಿ ತುಂಬಾ ಏರಿಕೆಯಾಗಿದ್ದು, ಸದ್ಯ ಒಂದು ಕೆಜಿ ಚಿಕನ್​ ಬೆಲೆ 250 ರಿಂದ 270 ರೂ.ವರೆಗೆ ಮಾರಾಟವಾಗುತ್ತಿದೆ.

ಬೇಸಿಗೆಯಲ್ಲಿ ಸಾಮಾನ್ಯವಾಗಿ ಕೋಳಿ ಉತ್ಪಾದನೆ ಕಡಿಮೆ ಇರುತ್ತದೆ. ಇದಲ್ಲದೆ, ಬಹುರಾಷ್ಟ್ರೀಯ ಸಂಸ್ಥೆಗಳು ಕೃತಕ ಕೊರತೆಯನ್ನು ಸೃಷ್ಟಿಸುತ್ತಿವೆ. ಇದರೊಂದಿಗೆ ಲಾಕ್​ಡೌನ್​ ಸಮಯದಲ್ಲಿ ಕೋಳಿಗಳ ಉತ್ಪಾದನೆಯು ಕಡಿಮೆ ಇತ್ತು. ಇದೀಗ ಕರೊನಾ ಲಾಕ್​ಡೌನ್​ ಸಡಿಲಗೊಂಡಿದ್ದು, ಹೋಟೆಲ್​, ರೆಸ್ಟೋರೆಂಟ್​ ಓಪನ್​ ಆಗಿರುವುದರಿಂದ ಮಾಂಸಾಹಾರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಚಿಕನ್​ ಕೊರತೆಗೆ ಕಾರಣವಾಗಿದೆ.

ಹೀಗಾಗಿ ಸಹಜವಾಗಿಯೇ ಚಿಕನ್​ ಬೆಲೆಯಲ್ಲಿ ಏರಿಕೆ ಆಗಿದೆ. ಸದ್ಯ ಚಿಕನ್​ ಬೆಲೆ ಕೇಳಿದರೆ ಗ್ರಾಹಕರು ಹೆದರುವಂತಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಕಡಿಮೆ ಆಗುವ ಲಕ್ಷಣಗಳು ಇವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net