ಚಿಕನ್​, ಮೊಟ್ಟೆ ಮಾರಾಟ ನಿಷೇಧ! ರೆಸ್ಟೋರೆಂಟ್​ ಖಾದ್ಯಗಳ ಮೇಲೂ ನಿರ್ಬಂಧ

chicken
Published on

ನವದೆಹಲಿ: ದೇಶದ ಹಲವು ರಾಷ್ಟ್ರಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾರಂಭಿಸಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಹಕ್ಕಿ ಜ್ವರ ಪತ್ತೆಯಾಗಿದ್ದು, ರಾಜ್ಯದ ಎರಡು ಮಹಾನಗರ ಪಾಲಿಕೆಗಳು ಕೋಳಿ ಮಾಂಸ ಮತ್ತು ಮೊಟ್ಟೆಯ ಮಾರಾಟಕ್ಕೆ ನಿಷೇಧ ಹೇರಿವೆ. ಹಾಗೆಯೇ ಮೊಟ್ಟೆ ಮತ್ತು ಮಾಂಸದಿಂದ ಮಾಡಲಾದ ಖಾದ್ಯಗಳನ್ನು ಗ್ರಾಹಕರಿಗೆ ನೀಡದಂತೆ ರೆಸ್ಟೋರೆಂಟ್​ಗಳಿಗೆ ನಿರ್ಬಂಧ ಹೇರಲಾಗಿದೆ.

ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಕೋಳಿ ಮಾಂಸ ಮಾರಾಟ ನಿಷೇಧ ಮಾಡುವ ಅಗತ್ಯವಿದೆ. ಮುಂದಿನ ಆದೇಶದವರೆಗೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಗಳ ಮಾರಾಟ ಮಾಡುವಂತಿಲ್ಲ. ಹಾಗೆಯೇ ರೆಸ್ಟೋರೆಂಟ್​ಗಳಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಯಿಂದ ಯಾವುದೇ ರೀತಿಯ ಖಾದ್ಯ ತಯಾರಿಸುವಂತಿಲ್ಲ ಎಂದು ದೆಹಲಿ ಉತ್ತರ ಮತ್ತು ದಕ್ಷಿಣದ ಮಹಾನಗರ ಪಾಲಿಕೆಗಳು ಆದೇಶ ಹೊರಡಿಸಿವೆ.

ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಲ್ಸಿಯಸ್​ನಲ್ಲಿ 30 ನಿಮಿಷಗಳ ಕಾಲ ಬೇಯಿಸಿ ತಿನ್ನುವುದರಿಂದ ಹಕ್ಕಿ ಜ್ವರ ಬರುವುದಿಲ್ಲ. ಆದರೆ ಸರಿಯಾದ ರೀತಿಯಲ್ಲಿ ಬೇಯಿಸದೆ ತಿಂದರೆ ಹಕ್ಕಿ ಜ್ವರ ಮನುಷ್ಯರಿಗೂ ಹಬ್ಬುವ ಸಾಧ್ಯತೆಗಳಿರುತ್ತದೆ ಎಂದು ಆರೋಗ್ಯ ಇಲಾಖೆ ಈ ಹಿಂದೆಯೇ ತಿಳಿಸಿತ್ತು. ಹಾಫ್​ ಬಾಯ್ಲಡ್​ ಮೊಟ್ಟೆ, ಮಾಂಸವನ್ನು ತಿನ್ನಬೇಡಿ ಎಂದು ರಾಜ್ಯ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮಹಾನಗರ ಪಾಲಿಕೆಗಳು ಈ ಆದೇಶ ಹೊರಡಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net