More

    ಬರೋಬ್ಬರಿ 45 ಲಕ್ಷ ರೂ.ಹಣ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್​ ಪೇದೆ!

    ರಾಯಪುರ: ಟ್ರಾಫಿಕ್​ ಪೇದೆಯೊಬ್ಬರು ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ.ಹಣವನ್ನು ಪೊಲೀಸ್​ ಠಾಣೆಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರ ಪ್ರಾಮಾಣಿಕತೆಗೆ ಮೆಚ್ಚಿ ಇಲಾಖೆಯಿಂದಲೇ ಬಹುಮಾನ ಘೋಷಿಸಲಾಗಿದೆ.

    ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್​​ ತೆರೆದುನೋಡಿದ ಪೇದೆಗೆ ಶಾಕ್​ ಆಗಿದೆ. ಬರೀ 200 ಹಾಗೂ 2000 ರೂ. ಮುಖಬೆಲೆಯ ನೋಟುಗಳೇ ಇದ್ದ ಬರೋಬ್ಬರಿ 45 ಲಕ್ಷ ರೂ. ಹಣವನ್ನು ಸ್ಥಳೀಯ ಪೊಲೀಸ್​ ಠಾಣೆಗೆ ಒಪ್ಪಿಸಿದರು. ಶನಿವಾರ ಬೆಳಗ್ಗೆ ಇಷ್ಟೊಂದು ಹಣವಿದ್ದ ಬ್ಯಾಗ್​ ಸಿಕ್ಕಿತ್ತು.

    ಇಷ್ಟೊಂದು ಹಣ ಸಿಕ್ಕರೂ ಠಾಣೆಗೆ ಒಪ್ಪಿಸುವ ಮೂಲಕ ಟ್ರಾಫಿಕ್​ ಪೇದೆ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಭುಪೇಶ್​ ಬಾಘೆಲ್​ ಟ್ವೀಟ್​ ಮಾಡಿ, ಪೇದೆಯ ಪ್ರಾಮಾಣಿಕತೆಯನ್ನು ಹಾಡಿಹೊಗಳಿದ್ದಾರೆ.

    ಟ್ರಾಫಿಕ್​ ಕಾನ್ಸ್​ಸ್ಟೇಬಲ್​ ಆಗಿರುವ ನಿಲಂಬರ್ ಸಿನ್ಹಾ ಅವರು 45 ಲಕ್ಷ ರೂ. ಇದ್ದ ಹಣವನ್ನು ಠಾಣೆಗೆ ಒಪ್ಪಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್​ ಆಯುಕ್ತ ಸುಖನಂದನ್​ ರಾಥೋಡ್ ತಿಳಿಸಿದ್ದಾರೆ. ಹಣ ಕಳೆದುಕೊಂಡವರಿಗಾಗಿ ಪತ್ತೆ ಹಚ್ಚಿ ಒಪ್ಪಿಸಲಾಗುವುದು ಎಂದು ಅವರು ತಿಳಿಸಿದ್ದು, ಪೇದೆಯ ಪ್ರಾಮಾಣಿಕತೆಗೆ ಬಹುಮಾನವನ್ನೂ ಘೋಷಿಸಿದ್ದಾರೆ. (ಏಜೆನ್ಸೀಸ್)

    ಸೋಲಿನಿಂದ ಕಂಗೆಟ್ಟ ಬಾಲಿವುಡ್​: ನೆಲಕಚ್ಚಿತು ಶಂಶೆರಾ, ನಡೆಯಲಿಲ್ಲ ರಣಬೀರ್​ ಜಾದೂ!

    ನನ್ನ ಜೀವನದಲ್ಲಿ ಶೇ.10ರಷ್ಟು ನೆಮ್ಮದಿ ಉಳಿಯಲಿಲ್ಲ: ಅಚ್ಚರಿ ಹೇಳಿಕೆ ನೀಡಿದ ಸೂಪರ್​ ಸ್ಟಾರ್​​ ರಜನಿಕಾಂತ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts