ಚೆಸ್ ಆಟಗಾರ್ತಿ ತಾನಿಯಾ ಸಚ್‌ದೇವ್ ಫೋಟೋ ಎಡಿಟ್ ಮಾಡಲು ಹೇಳಿದರೆ ಹೀಗಾ ಮಾಡೋದು!

taniya
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಳಕೆ ತುಂಬಾ ಹೆಚ್ಚಾಗಿದೆ. ಕೆಲವು ಜನರನ್ನು ಹೊರತುಪಡಿಸಿ, ಈ ದೇಶದಲ್ಲಿ ಬಹುತೇಕ ಎಲ್ಲರೂ ಸೋಷಿಯಲ್ ಮೀಡಿಯಾ ಬಳಸುತ್ತಾರೆ ಅಥವಾ ಅವಲಂಬಿಸಿದ್ದಾರೆ. ಇಂದಿನ ಕಾಲದಲ್ಲಿ ಸೋಷಿಯಲ್ ಮೀಡಿಯಾ ಉತ್ತಮ ಮನರಂಜನೆಯ ಮಾಧ್ಯಮವಾಗಿದೆ. ಇಲ್ಲಿ ಯಾರು ಯಾವಾಗ ಟ್ರೋಲ್ ಆಗುತ್ತಾರೆ ಮತ್ತು ಫೇಮಸ್ ಆಗುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ. ಭಾರತದ ಚೆಸ್ ಆಟಗಾರ್ತಿ ತಾನಿಯಾ ಸಚ್​ದೇವ್ ವಿಷಯದಲ್ಲೂ ಅದೇ ಸಂಭವಿಸಿದೆ. ಅವರು ತಮ್ಮ ಖಾತೆಯಲ್ಲಿ ಫೋಟೋ ಹಂಚಿಕೊಂಡು, ಅದನ್ನು ಎಡಿಟ್ ಮಾಡಲು ಜನರ ಸಹಾಯ ಕೇಳಿದರು. ಇದಾದ ನಂತರ ನೆಟ್ಟಿಗರು ತೋರಿಸಿದ ಕ್ರಿಯೇಟಿವಿಟಿ ನೋಡಿದರೆ ನಗು ತಡೆಯಲು ಆಗುವುದಿಲ್ಲ.

ಫೋಟೋ ಹಂಚಿಕೊಂಡ ತಾನಿಯಾ ಸಚ್‌ದೇವ್ 
ತಾನಿಯಾ ಸಚ್‌ದೇವ್ ತನ್ನ ಫೋಟೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಆಕೆ ನಿಂತಿರುವ ಸ್ಥಳದ ಹಿಂದೆ ಕುದುರೆಯ ಪ್ರತಿಮೆ ಇದೆ. ಪ್ರತಿಮೆಯ ಮುಂಭಾಗದ ಕಾಲು ನೋಡಿದರೆ ತಾನಿಯಾ ಸಚ್ ದೇವ್ ಅವರ ತಲೆಯ ಮೇಲೆ ಕಾಲು ಇಟ್ಟಂತೆ ತೋರುತ್ತದೆ. ಹಾಗಾಗಿ ತಮ್ಮ ಫೋಟೋ ಪೋಸ್ಟ್ ಮಾಡುವಾಗ, 'ಈ ಫೋಟೋದಲ್ಲಿನ ಕುದುರೆ ನನ್ನ ತಲೆಯ ಮೇಲೆ ಕಾಲಿಡದಂತೆ, ಕಾಣದಂತೆ ಯಾರಾದರೂ ಅದರ ಸ್ಥಾನವನ್ನು ಬದಲಾಯಿಸಬಹುದೇ' ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ತಾನಿಯಾ ಹಾಗಂದಿದ್ದೆ ತಡ ಜನರು ತಮ್ಮ ಸೃಜನಶೀಲತೆಯನ್ನು ತೋರಿಸಲು ಪ್ರಾರಂಭಿಸಿದರು. ಕಾಮೆಂಟ್‌ಗಳಲ್ಲಿ, ಜನರು ತಮ್ಮ ಇಚ್ಛೆಯಂತೆ ಎಡಿಟ್ ಮಾಡಿದ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಕುದುರೆ ಮುಖದಲ್ಲಿ ತಾನಿಯಾ, ತಾನಿಯಾ ಮುಖದಲ್ಲಿ ಕುದುರೆ ಚಿತ್ರವನ್ನು ಬದಲಾಯಿಸಿದರೆ, ಮತ್ತೆ ಕೆಲವರು ಕುದುರೆಯ ಕಾಲು ಮುರಿದು ತಾನಿಯಾ ಕೈಯಲ್ಲಿ ಕೊಟ್ಟಿದ್ದಾರೆ. ಇನ್ನು ಕೆಲವು ಫೋಟೋಗಳಲ್ಲಿ ತಾನಿಯಾ ಸಚ್‌ದೇವ್ ಅವರನ್ನು ಫೋಟೋದಿಂದ ಕಣ್ಮರೆಯಾಗುವಂತೆ ಮಾಡಿದ್ದಾರೆ, ಅಷ್ಟೇ ಅಲ್ಲ, ಕುದುರೆಯ ಮೇಲೇಯೇ ತಾನಿಯಾ ಕುಳಿತಿರುವ ಹಾಗೆ ಎಡಿಟ್ ಮಾಡಲಾಗಿದೆ.

ಇಲ್ಲಿವೆ ನೋಡಿ ಎಡಿಂಗ್ ಫೋಟೋಗಳು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net